2024ರ ಐಸಿಸಿ ಟಿ20 ವಿಶ್ವಕಪ್‌ನ ಪಂದ್ಯಾವಳಿಯು ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎನಲ್ಲಿ ನಡೆಯಲಿದೆ. 2024ರ ಐಪಿಎಲ್ ಆವೃತ್ತಿ ಮುಕ್ತಾಯದ ನಂತರ 20 ತಂಡಗಳ ಐಸಿಸಿ ಪಂದ್ಯಾವಳಿಯನ್ನು ಜೂನ್‌ನಲ್ಲಿ ಆರಂಭವಾಗುತ್ತದೆ.
ಟಿ20 ವಿಶ್ವಕಪ್‌ನ ಉದ್ಘಾಟನಾ ಆವೃತ್ತಿಯನ್ನು ಗೆದ್ದ ವಿಶ್ವ ನಂ.1 ಶ್ರೇಯಾಂಕದ ಟೀಮ್ ಇಂಡಿಯಾ, 2023ರ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ಮತ್ತು ಹಾಲಿ ಚಾಂಪಿಯನ್ ಇಂಗ್ಲೆಂಡ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಾಗಿವೆ.

ಆದರೆ, ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರನ್ನು ಮುಂದಿನ ವರ್ಷದ ಟಿ20 ಸ್ವರೂಪದ ಮೆಗಾ ಟೂರ್ನಿಯ ಭವಿಷ್ಯವಾಣಿಯ ಬಗ್ಗೆ ಕೇಳಿದಾಗ, ಅವರು ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳನ್ನು ನಿರ್ಲಕ್ಷಿಸಿದರು ಮತ್ತು 2024ರ ಟಿ20 ವಿಶ್ವಕಪ್‌ನ ಸಂಭಾವ್ಯ ವಿಜೇತರಾಗಿ ವಿಶ್ವದ ನಂ.6 ಟಿ20 ಶ್ರೇಯಾಂಕದ ತಂಡ ದಕ್ಷಿಣ ಆಫ್ರಿಕಾವನ್ನು ಆಯ್ಕೆ ಮಾಡಿದರು.
ಭಾರತ ತಂಡದ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆಲುವಿನ ಹೀರೋ ಪ್ರಕಾರ, ದಕ್ಷಿಣ ಆಫ್ರಿಕಾ ಈವರೆಗೂ ವಿಶ್ವಕಪ್ ಗೆಲ್ಲದಿದ್ದರೂ, 2023ರ ಏಕದಿನ ವಿಶ್ವಕಪ್‌ನಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದರು ಮತ್ತು ಹರಿಣ ಪಡೆ ಗೆಲ್ಲುತ್ತಾರೆ ಎಂದು ಯುವರಾಜ್ ಸಿಂಗ್ ಭಾವಿಸಿದರು.

"ನಾನು ಹರಿಣ ಪಡೆಗೆ ಇಲ್ಲಿ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದೇನೆ ಮತ್ತು ದಕ್ಷಿಣ ಆಫ್ರಿಕಾ ಗೆಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ. ಅವರು ವೈಟ್-ಬಾಲ್ ಪಂದ್ಯಾವಳಿಯನ್ನು ಗೆದ್ದಿಲ್ಲ ಮತ್ತು 50-ಓವರ್ ವಿಶ್ವಕಪ್‌ನಲ್ಲಿ ನಾನು ಅವರ ಪ್ರಗತಿಯನ್ನು ನೋಡಿದ್ದೇನೆ. ತದನಂತರ ನಿಸ್ಸಂಶಯವಾಗಿ ಪಾಕಿಸ್ತಾನ ಅತ್ಯಂತ ಅಪಾಯಕಾರಿ," ಎಂದು ಯುವರಾಜ್ ಸಿಂಗ್ ತಿಳಿಸಿದರು.
ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್ ಫೈನಲ್‌ಗೆ ಪಾಕಿಸ್ತಾನ ಅರ್ಹತೆ ಗಳಿಸಿತು. ಆದರೆ ಆಂಗ್ಲ ತಂಡದ ವಿರುದ್ಧ ಮೆನ್ ಇನ್ ಗ್ರೀನ್ ಪ್ರಶಸ್ತಿಯನ್ನು ಗೆಲ್ಲಲು ವಿಫಲವಾಯಿತು.

ನವೆಂಬರ್ 13ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ 2022ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬಾಬರ್ ಅಜಂ ನಾಯಕತ್ವದ ತಂಡವು ಇಂಗ್ಲೆಂಡ್ ವಿರುದ್ಧ ಐದು ವಿಕೆಟ್‌ಗಳಿಂದ ಸೋಲು ಅನುಭವಿಸಿತು.
ಪಾಕಿಸ್ತಾನ ತಂಡದ ವಿರುದ್ಧ ಫೈನಲ್‌ನಲ್ಲಿ ಗೆಲ್ಲುವ ಮೊದಲು, ನವೆಂಬರ್ 10, 2022ರಂದು ಅಡಿಲೇಡ್ ಓವಲ್‌ನಲ್ಲಿ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿತು.
ಮತ್ತೊಂದೆಡೆ, ದಕ್ಷಿಣ ಆಫ್ರಿಕಾ 2022ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ನಂತರ 2022ರ ನವೆಂಬರ್ 6ರಂದು ಅಡಿಲೇಡ್‌ನಲ್ಲಿ ನಡೆದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 13 ರನ್‌ಗಳಿಂದ ಆಘಾತಕಾರಿ ಸೋಲನುಭವಿಸಿತು.