ಸ್ಪೋಟಕ ಶತಕದ ನಂತರ ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿದ್ದೇ ಬೇರೆ
ನೆದರ್ಲೆಂಡ್ಸ್ ವಿರುದ್ಧ ದಾಖಲೆಯ ಶತಕ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್, ವಿಶ್ವಕಪ್ ನಲ್ಲಿ ರೌದ್ರಾವತಾರ ಪ್ರದರ್ಶಿಸಿದ್ದಾರೆ. ಇವರ ಬ್ಯಾಟಿಂಗ್ ಕಂಡು ಎದುರಾಳಿ ತಂಡಗಳು ಕಂಗಾಲಾಗಿದ್ದಾರೆ. ಅಬ್ಬಾ ಏನ್ ಬ್ಯಾಟಿಂಗ್ ಆಸೀಸ್ ಪ್ಲೇಯರ್ ದ್ದು ಎಂದು ಅಭಿಮಾನಿಗಳು ಹುಬ್ಬು ಹಾರಿಸುತ್ತಿದ್ದಾರೆ.
ಗ್ಲೇನ್ ಮ್ಯಾಕ್ಸ್ ವೆಲ್ ಬಾರಿಸುತ್ತಿದ್ದ ರಿವರ್ಸ್ ಸ್ವೀಪ್, ಹುಕ್, ಪುಲ್ ಶಾಟ್ ಗಳು ಬೇರೆ ತಂಡಗಳಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಆಸ್ಟ್ರೇಲಿಯ ಇನಿಂಗ್ಸ್ನ 48ನೇ ಓವರ್‌ನ ನಂತರ ಮ್ಯಾಕ್ಸ್‌ವೆಲ್ 35 ಎಸೆತಗಳಲ್ಲಿ 75 ರನ್ ಗಳಿಸಿ ಆಡುತ್ತಿದ್ದರು.

ಆದರೆ, ಮುಂದಿನ ಐದು ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ 40 ಎಸೆತಗಳಲ್ಲಿ ಶತಕ ಪೂರೈಸಿದರು. ಅವರ ಇನ್ನಿಂಗ್ಸ್‌ನಿಂದ ಆಸ್ಟ್ರೇಲಿಯಾ ಎಂಟು ವಿಕೆಟ್‌ಗೆ 399 ರನ್‌ಗಳ ಬೃಹತ್ ಸ್ಕೋರ್ ಕಲೆ ಹಾಕಿತು. ಇದಕ್ಕೆ ಉತ್ತರವಾಗಿ ನೆದರ್ಲೆಂಡ್ಸ್ ತಂಡ 90 ರನ್‌ಗಳಿಗೆ ಆಲೌಟ್ ಆಯಿತು.
ಪಂದ್ಯದ ನಂತರ ಮಾತನಾಡಿದ ಮ್ಯಾಕ್ಸ್‌ವೆಲ್, "ಬಿಗ್ ಇನಿಂಗ್ಸ್ ಕಟ್ಟುವುದು ನಿಜವಾಗಿಯೂ ನನ್ನ ಮನಸ್ಸಿನಲ್ಲಿರಲಿಲ್ಲ. ಕೊನೆಯ ಓವರ್‌ಗಳಲ್ಲಿ ನಾನೇ ಸ್ಟ್ರೈಕ್‌ನಲ್ಲಿ ಇರಬೇಕೆಂದು ಯೋಚಿಸುತ್ತಿದ್ದೆ. ಐದು ಓವರ್‌ಗಳು ಉಳಿದಿರುವಾಗ ನಾನು ಪ್ಯಾಟ್‌ಗೆ (ಕಮ್ಮಿನ್ಸ್) ಆದಷ್ಟು ಸ್ಕೋರ್ ಹಿಗ್ಗಿಸುವುದಾಗಿ ಭರವಸೆ ನೀಡಿದ್ದೆ. ನಾನು ಒಂದು ರನ್ ತೆಗೆದುಕೊಳ್ಳುವ ಬದಲು ಹೆಚ್ಚಿನ ಸ್ಟ್ರೈಕ್‌ಗಳನ್ನು ನಾನೇ ಇಟ್ಟಿಕೊಳ್ಳಲು ಬಯಸಿದ್ದೆ" ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
ಬೌಲರ್ ಮೇಲೆ ಒತ್ತಡ ಹೇರಿದರೆ ಆತ ತಪ್ಪು ಮಾಡುತ್ತಾನೆ
ಈ ಮೈದಾನದಲ್ಲಿ ಬೌಲರ್ ಮೇಲೆ ಒತ್ತಡ ಹೇರಿದರೆ ಆತ ತಪ್ಪು ಮಾಡುತ್ತಾನೆ ಎಂದು ನನಗೆ ಅನಿಸುತ್ತಿತ್ತು. ಹಾಕಿಕೊಂಡ ಯೋಜನೆಯಂತೆ 49ನೇ ಓವರ್‌ನಲ್ಲಿ ನಾನು ಬ್ಯಾಟ್ ಮಾಡಿದೆ. ನಾನು ಬಾಸ್ ಡಿ ಲೀಡ್ ಉತ್ತಮ ಎಸೆತಗಳಲ್ಲಿ ದೊಡ್ಡ ಹೊಡೆತಗಳನ್ನು ಬಾರಿಸುವ ಮೂಲಕ ಬೌಲರ್ ತಪ್ಪುಗಳನ್ನು ಮಾಡುವಂತೆ ಮಾಡಿದೆ.
ನನ್ನ ತಂತ್ರವು ಕೊನೆಯಲ್ಲಿ ಕೆಲಸ ಮಾಡಿದೆ. ಕೊನೆಯ ಓವರ್‌ಗಳಲ್ಲಿ ಕೆಲವು ಫುಲ್ ಟಾಸ್ ಬಾಲ್‌ಗಳನ್ನು ಪಡೆಯುವ ಅದೃಷ್ಟ ನನ್ನದಾಗಿತ್ತು. ODI ಕ್ರಿಕೆಟ್‌ನಲ್ಲಿ ಮ್ಯಾಕ್ಸ್‌ವೆಲ್ ಅವರ ಫಾರ್ಮ್ ಆಸೀಸ್ ತಂಡದ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಿದೆ.
IPL ಸಮಯದಲ್ಲಿ ಭಾರತದಲ್ಲಿ ನಿಯಮಿತವಾಗಿ ರನ್
ನಾನು ಕಳೆದ ಕೆಲವು ವರ್ಷಗಳಲ್ಲಿ IPL ಸಮಯದಲ್ಲಿ ಭಾರತದಲ್ಲಿ ನಿಯಮಿತವಾಗಿ ರನ್ ಗಳಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ, ಆದ್ದರಿಂದ ನಾನು ಅದರ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ನಾನು ಸ್ವಲ್ಪ ಅಸ್ವಸ್ಥನಾಗಿದ್ದೆ, ಹೀಗಾಗಿ ಈ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಬಯಸಿದಿಲ್ಲ ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
ನಾನು ಸಂಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ. ಡ್ರೆಸ್ಸಿಂಗ್ ರೂಮ್‌ನಲ್ಲಿದ್ದಾಗ ಬ್ಯಾಟಿಂಗ್ ಮಾಡಲು ಇಷ್ಟವಿರಲಿಲ್ಲ. ನಾನು ಮೈದಾನಕ್ಕೆ ತಲುಪಿದಾಗ, ನಾನು ತಾಳ್ಮೆಯಿಂದ ಬ್ಯಾಟ್ ಮಾಡಿ ತಂಡಕ್ಕೆ ಆಧಾರವಾದ ಸಂತಸವಿದೆ ಎಂದು ಮ್ಯಾಕ್ಸ್ ವೆಲ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications