ಮುಖ್ಯ ಕೋಚ್ ಆಗಿ 2024ರ ಟಿ20 ವಿಶ್ವಕಪ್ ಪ್ರಶಸ್ತಿ ಗೆಲುವಿಗೆ ಭಾರತ ಕ್ರಿಕೆಟ್ ತಂಡವನ್ನು ಯಶಸ್ವಿಯಾಗಿ ಮಾರ್ಗದರ್ಶನ ಮಾಡಿದ ನಂತರ, ರಾಹುಲ್ ದ್ರಾವಿಡ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಮತ್ತೊಂದು ಹೊಸ ಸಾಹಸಕ್ಕೆ ಸಜ್ಜಾಗುತ್ತಿದ್ದಾರೆ ಎಂದು ವರದಿಯಾಗಿದೆ.
ಭಾರತ ತಂಡದ ಮುಖ್ಯ ಕೋಚ್ ಆಗಿ ಅವರ ಅಧಿಕಾರಾವಧಿ ಅಂತ್ಯಗೊಂಡ ಬಳಿಕ, ಕನ್ನಡಿಗ ರಾಹುಲ್ ದ್ರಾವಿಡ್ ಶ್ರೀಮಂತ ಟಿ20 ಲೀಗ್‌ನಲ್ಲಿ ಅನೇಕ ಫ್ರಾಂಚೈಸಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಹಿಂದಿನ ವರದಿಗಳು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಫ್ರಾಂಚೈಸಿ ಸೇರಲು ನಿರ್ಧರಿಸಬಹುದು ಎಂದು ವರದಿಗಳು ಸೂಚಿಸಿದ್ದವು. ವಿಶೇಷವಾಗಿ ಕೆಕೆಆರ್ ಫ್ರಾಂಚೈಸಿ ಮೆಂಟರ್ ಸ್ಥಾನವನ್ನು ತೊರೆದು ಗೌತಮ್ ಗಂಭೀರ್ ಅವರು ಭಾರತ ತಂಡದಲ್ಲಿ ರಾಹುಲ್ ದ್ರಾವಿಡ್ ಅವರ ಮುಖ್ಯ ಕೋಚ್ ಸ್ಥಾನವನ್ನು ತುಂಬಿದ್ದಾರೆ.
ಇದೀಗ ಭಾರತ ತಂಡದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ತನ್ನ ಹಿಂದಿನ ಐಪಿಎಲ್ ತಂಡ ರಾಜಸ್ಥಾನ್ ರಾಯಲ್ಸ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
"ರಾಜಸ್ಥಾನ್ ರಾಯಲ್ಸ್ ಮತ್ತು ರಾಹುಲ್ ದ್ರಾವಿಡ್ ನಡುವೆ ಮಾತುಕತೆ ನಡೆಯುತ್ತಿದೆ ಮತ್ತು ಈ ಕುರಿತು ಶೀಘ್ರದಲ್ಲೇ ಪ್ರಕಟಣೆ ಹೊರಬೀಳಲಿದೆ," ಎಂದು ಟೈಮ್ಸ್ ಆಫ್ ಇಂಡಿಯಾ ಮೂಲಗಳನ್ನು ಉಲ್ಲೇಖಿಸಿದೆ.
ರಾಹುಲ್ ದ್ರಾವಿಡ್ ಹೊಸ ಪಾತ್ರಕ್ಕಾಗಿ ಸಜ್ಜಾಗುತ್ತಿರುವಾಗ, ಅತ್ತ ಗೌತಮ್ಮ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆಗಿ ತಮ್ಮ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ವೈಟ್-ಬಾಲ್ ನಿಯೋಜನೆಗೆ ಮುಂಚಿತವಾಗಿ ಗೌತಮ್ ಗಂಭೀರ್ ಭಾರತೀಯ ತಂಡದ ಇತರ ಸದಸ್ಯರೊಂದಿಗೆ ಶ್ರೀಲಂಕಾಕ್ಕೆ ಹಾರಿದರು.
ಭಾರತ ತಂಡದ ನಿರ್ಗಮನದ ಮೊದಲು, ರಾಹುಲ್ ದ್ರಾವಿಡ್ ಅವರು ಮುಖ್ಯ ಕೋಚ್ ಆಗಿ ಭಾರತ ತಂಡದೊಂದಿಗೆ ಏನು ಮಾಡಿದ್ದಾರೆ ಎಂಬುದನ್ನು ಪರಿಗಣಿಸಿ, ಅವರ ಸ್ಥಾನ ತುಂಬಲು ಅದೃಷ್ಟ ಹೊಂದಿರುವುದಾಗಿ ಗೌತಮ್ ಗಂಭೀರ್ ಒಪ್ಪಿಕೊಂಡರು.
ಭಾರತ ತಂಡ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ 2024ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿಹಿಡಿಯುತ್ತಿದ್ದಂತೆ, ರಾಹುಲ್ ದ್ರಾವಿಡ್ ತಾವು ಮುಂದಿನ ತಿಂಗಳಿನಿಂದ 'ನಿರುದ್ಯೋಗಿ' ಎಂದು ತಮಾಷೆ ಮಾಡಿದರು ಮತ್ತು ನಿಮಗೆ ಯಾವುದೇ ಆಫರ್‌ಗಳಿವಯೇ ಎಂದು ಪತ್ರಕರ್ತರನ್ನು ಕೇಳಿದರು.
ರಾಹುಲ್ ದ್ರಾವಿಡ್ ಅವರ ಪ್ರತಿಭೆಯ ವ್ಯಕ್ತಿ ಮತ್ತು ಭಾರತೀಯ ಕ್ರಿಕೆಟ್‌ನಲ್ಲಿ ಚಿನ್ನಕ್ಕೆ ಅರ್ಹವಾದ ಅನುಭವ ಹೊಂದಿದ್ದಾರೆ. ಐಪಿಎಲ್‌ನ ಫ್ರಾಂಚೈಸಿಗಳು ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಅಣಿಯಾಗುತ್ತಿವೆ.
ಕುಟುಂಬದಿಂದ ದೂರವಿದ್ದು ವರ್ಷದಲ್ಲಿ 10 ತಿಂಗಳು ಪ್ರಯಾಣ ಮಾಡಲು ಬಯಸದ ಕಾರಣ, ರಾಹುಲ್ ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯಲು ಬಯಸಲಿಲ್ಲ. ಆದರೆ, ಐಪಿಎಲ್ ವಿಭಿನ್ನವಾಗಿದೆ. ಟಿ20 ಲೀಗ್‌ನಲ್ಲಿ ರಾಹುಲ್ ದ್ರಾವಿಡ್ ವರ್ಷಕ್ಕೆ 2-3 ತಿಂಗಳು ಮಾತ್ರ ಫ್ರಾಂಚೈಸಿಯೊಂದಿಗೆ ಇರಬೇಕಾಗುತ್ತದೆ.
ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಈ ಹಿಂದೆ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಮೆಂಟರ್ ಮತ್ತು ಕೋಚ್ ಆಗಿ ಕೆಲಸ ಮಾಡಿದ್ದಾರೆ. ರಾಹುಲ್ ದ್ರಾವಿಡ್ 2017ರಲ್ಲಿ 'ಹಿತಾಸಕ್ತಿ ಸಂಘರ್ಷ'ದ ಮೇಲೆ ಕೆಲಸ ತೊರೆಯುವ ಮೊದಲು ಡೆಲ್ಲಿ ಡೇರ್‌ಡೆವಿಲ್ಸ್ ಫ್ರಾಂಚೈಸಿ ಕೋಚ್ ಆಗಿದ್ದರು.
ಐಪಿಎಲ್ ವೃತ್ತಿಜೀವನವನ್ನು ಕೊನೆಗೊಳಿಸಿದ ನಂತರ, ರಾಹುಲ್ ದ್ರಾವಿಡ್ ಅಂಡರ್-19 ಮತ್ತು ಭಾರತ ಎ ಸೇರಿದಂತೆ ಭಾರತದ ಜೂನಿಯರ್ ತಂಡಗಳ ಮುಖ್ಯ ಕೋಚ್ ಆಗಿ ಕೆಲಸ ಮಾಡಿದ್ದಾರೆ.
2021ರಲ್ಲಿ ಭಾರತ ಹಿರಿಯರ ತಂಡದ ಮುಖ್ಯ ಕೋಚ್ ಹುದ್ದೆ ತೆಗೆದುಕೊಳ್ಳುವ ಮೊದಲು ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಭಾರತದ ಮಾಜಿ ಮುಖ್ಯ ಕೋಚ್ ಇದೀಗ ರಾಜಸ್ಥಾನ್ ರಾಯಲ್ಸ್‌ನೊಂದಿಗೆ ಸಂಪರ್ಕ ಹೊಂದಿದ್ದು, ಫ್ರಾಂಚೈಸಿಯಿಂದಿಗೆ ಯಾವ ಸಾಮರ್ಥ್ಯದ ಮೇಲೆ ಕೆಲಸ ಮಾಡುತ್ತಾರೆ ಎಂಬುದನ್ನು ನೋಡಲು ಕುತೂಹಲಕಾರಿಯಾಗಿದೆ.