Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ ಅಲ್ಲ, ರಾಹುಲ್ ಅಲ್ಲ; ಈ ಟೀಮ್ ಇಂಡಿಯಾ ಸ್ಟಾರ್ 'ಬಾಕ್ಸ್ ಆಫೀಸ್ ಕ್ರಿಕೆಟರ್' ಎಂದ ನಾಸೆರ್ ಹುಸೇನ್!

ಒಂದು ವರ್ಷದ ಹಿಂದೆ ಮಾರಣಾಂತಿಕ ಕಾರು ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ಈ ಭಾರತೀಯ ಸ್ಟಾರ್ ಆಟಗಾರ 2024ರಲ್ಲಿ 'ಬಾಕ್ಸ್ ಆಫೀಸ್' ಕ್ರಿಕೆಟಿಗ ಎಂದು ಇಂಗ್ಲೆಂಡ್ ಮಾಜಿ ನಾಯಕ ನಾಸರ್ ಹುಸೇನ್ ತಿಳಿಸಿದರು.

ಅತ ಬೇರಾರು ಅಲ್ಲ, ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್. ಹೊಸ ವರ್ಷದಲ್ಲಿ ಯಶಸ್ವಿಯಾಗಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಭರವಸೆಯನ್ನು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ನಾಸೆರ್ ಹುಸೇನ್ ವಿಶ್ವಾಸ ವ್ಯಕ್ತಪಡಿಸಿದರು.

2022ರ ಡಿಸೆಂಬರ್ 30 ಬೆಳಗಿನ ಜಾವ ರಿಷಭ್ ಪಂತ್ ಸ್ವತಃ ಕಾರು ಚಾಲಯಿಸುತ್ತಿದ್ದಾಗ ಭೀಕರ ಅಪಘಾತದಲ್ಲಿ ಬದುಕುಳಿದರು.

Not Kohli, Not KL Rahul: Nasser Hussain Called Rishabh Pant Box Office Cricketer of 2024

ಎಡಗೈ ಬ್ಯಾಟರ್ ಅಂದಿನಿಂದ ಬಲವಾದ ಪ್ರಗತಿಯನ್ನು ಸಾಧಿಸಿದ್ದಾರೆ ಮತ್ತು ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ 2024ರ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಕ್ರಿಕೆಟ್‌ಗೆ ಮರಳುವ ಸಾಧ್ಯತೆಯಿದೆ.

"ಅದೊಂದು ಗಂಭೀರ ಅಪಘಾತವಾಗಿತ್ತು. ಭಾರತೀಯತ ಯುವ ಕ್ರಿಕೆಟಿಗ ರಿಷಭ್ ಪಂತ್ ತನ್ನ ಉಸಿರು ಬಿಗಿಹಿಡಿದು ನಿಧಾನವಾಗಿ ಚೇತರಿಸಿಕೊಂಡಿದ್ದಾರೆ," ಎಂದು ನಾಸೆರ್ ಹುಸೇನ್ ಹೇಳಿರುವುದನ್ನು ಐಸಿಸಿ ಉಲ್ಲೇಖಿಸಿದೆ.

"ನೀವು ಸಾಮಾಜಿಕ ಮಾಧ್ಯಮದಲ್ಲಿ, ನನ್ನ ಫೋನ್‌ನಲ್ಲಿ ಮತ್ತು ಮೊದಲ ನಡಿಗೆಯ ಹಂತಗಳನ್ನು ನೋಡಿರುತ್ತೀರಿ. ನಂತರ ಜಿಮ್‌ನಲ್ಲಿನ ದೃಶ್ಯಗಳು ಮತ್ತು ನಂತರ ಅವರು ಸ್ವಲ್ಪ ಕ್ರಿಕೆಟ್ ಆಡುವ ದೃಶ್ಯಗಳು, ರಿಕಿ ಪಾಂಟಿಂಗ್ ಜೊತೆಗಿನ ದೃಶ್ಯಗಳನ್ನು ಗಮನಿಸಿರುತ್ತೀರಿ," ಎಂದು ರಿಷಭ್ ಪಂತ್‌ ಬರೆದುಕೊಂಡಿದ್ದರು.

"ನಾನು ಆಶಸ್ ಸರಣಿಯಲ್ಲಿ ಬೇಸಿಗೆಯಲ್ಲಿ ರಿಕಿ ಪಾಂಟಿಂಗ್‌ರೊಂದಿಗೆ ಪ್ರಯಾಣಿಸಿದೆ ಮತ್ತು ರಿಕಿ ಅವರಿಗೆ ತನ್ನ ಪ್ರಗತಿಯ ಕುರಿತು ಎಂದು ಸಂದೇಶ ಕಳುಹಿಸುತ್ತಿದ್ದರು ಮತ್ತು ಅವರು ಬಾಕ್ಸ್ ಆಫೀಸ್ ಕ್ರಿಕೆಟಿಗನಾಗಿದ್ದಾರೆ," ಎಂದು ನಾಸೆರ್ ಹುಸೇನ್ ತಿಳಿಸಿದರು.

ರಿಷಭ್ ಪಂತ್ ಅವರ ಅನುಪಸ್ಥಿತಿಯ ನಂತರ, ಕೆಎಲ್ ರಾಹುಲ್ ಅವರು ವಿಕೆಟ್ ಕೀಪಿಂಗ್ ಗ್ಲೌಸ್‌ಗಳನ್ನು ಧರಿಸಿದ್ದಾರೆ ಮತ್ತು ಇತ್ತೀಚಿನ 2023ರ ಏಕದಿನ ವಿಶ್ವಕಪ್‌ನಲ್ಲಿ 75.33ರ ಸರಾಸರಿಯಲ್ಲಿ 452 ರನ್ ಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದಾರೆ.

"ಕೆಎಲ್ ರಾಹುಲ್ ಪುನರಾಗಮನ ಮಾಡಿ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವುದರಿಂದ, ರಿಷಭ್ ಪಂತ್ ಇಲ್ಲದೆ ಭಾರತ ತಂಡ ಉತ್ತಮ ಪ್ರದರ್ಶನ ನೀಡಿದೆ," ಎಂದು ಮಾಜಿ ಕ್ರಿಕೆಟಿಗ ನಾಸೆರ್ ಹುಸೇನ್ ಗಮನಸೆಳೆದರು.

"ಶುಭ್ಮನ್ ಗಿಲ್ ಮತ್ತು ರಿಷಭ್ ಪಂತ್ ಅದ್ಭುತವಾಗಿ ಮುಂದುವರಿಯುತ್ತಾರೆ. ಇವರಿಬ್ಬರನ್ನು ಪಡೆಯಲು ಟೀಮ್ ಇಂಡಿಯಾ ಅದೃಷ್ಟವಂತರು. ಆದರೆ ರಿಷಭ್ ಪಂತ್ ಗಾಯಕ್ಕೂ ಮುನ್ನ ಅದ್ಭುತ ಫಾರ್ಮ್‌ನಲ್ಲಿದ್ದರು. ಇದೀಗ ಆಶಾದಾಯಕವಾಗಿ ಬಾಕ್ಸ್ ಆಫೀಸ್ ಕ್ರಿಕೆಟರ್ ಆಗಲಿದ್ದಾನೆ," ಎಂದು ಟೆಸ್ಟ್ ಕ್ರಿಕೆಟ್‌ನಲ್ಲಿ ಫಾರ್ಮ್‌ಗೆ ಮರಳಲು ಪ್ರಯತ್ನಿಸುತ್ತಿರುವ ಶುಭ್ಮನ್ ಗಿಲ್ ಹೊಗಳಲು ನಾಸೆರ್ ಹುಸೇನ್ ಮೀಸಲಿಟ್ಟರು.

"ಶುಭ್ಮನ್ ಗಿಲ್ 2023ರ ಮುಕ್ಕಾಲು ಭಾಗ ಅಥವಾ ಹತ್ತನೇ ಒಂಬತ್ತು ಭಾಗವನ್ನು ಹೊಂದಿದ್ದರು. ಇನ್ನೊಂದು ತುದಿಯಲ್ಲಿ ರೋಹಿತ್ ಶರ್ಮಾ ಅವರಂತಹ ಆಟಗಾರರನ್ನು ಹೊಂದಿದ್ದಲ್ಲಿ ನೀವು ತುಂಬಾ ಕಲಿತಿರಬೇಕು," ಎಂದು ನಾಸೆರ್ ಹುಸೇನ್ ಅಭಿಪ್ರಾಯಪಟ್ಟರು.

Story first published: Sunday, December 31, 2023, 17:57 [IST]
Other articles published on Dec 31, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+