For Quick Alerts
ALLOW NOTIFICATIONS  
For Daily Alerts
 

ಯುವಕರಿಗೆ ಅಷ್ಟೇ ಅಲ್ಲ, ಹಿರಿಯ ಆಟಗಾರರಿಗೆ ಹರಾಜಿನಲ್ಲಿ ಸಿಕ್ಕಿದೆ ಭಾರಿ ಹಣ

ಐಪಿಎಲ್ 2024 ಹರಾಜಿನ ದಿನಾಂಕ ಹತ್ತಿರವಾಗುತ್ತಿದ್ದಂತೆ, ಅದರ ಬಗ್ಗೆ ಚರ್ಚೆ ಹೆಚ್ಚಾಗುತ್ತಿವೆ. ಆಟಗಾರರ ಚಿತ್ತ ಈಗ ದುಬೈಗೆ ಶಿಫ್ಟ್‌ ಆಗಿದೆ. ಮುಂಬರುವ ಋತುವಿನ ಹರಾಜು ಡಿಸೆಂಬರ್ 19 ರಂದು ನಡೆಯಲಿದ್ದು, ಇದಕ್ಕಾಗಿ 1166 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.

ಐಪಿಎಲ್‌ನಲ್ಲಿ ಆಡಬೇಕು ಎಂಬುದು ಪ್ರತಿಯೊಬ್ಬ ಕ್ರಿಕೆಟ್ ಆಟಗಾರನ ಕನಸು. ಯುವ ವಯಸ್ಸಿನ ಆಟಗಾರ ತಾನು ಈ ಟೂರ್ನಿಯಲ್ಲಿ ಆಡಿ ಸೈ ಎನಿಸಿಕೊಳ್ಳಬೇಕು ಎಂಬ ಆಸೆ ಹೊಂದಿರುತ್ತಾನೆ. ಅಲ್ಲದೆ ತನ್ನಲ್ಲಿರುವ ಆಟದ ಗುಣಮಟ್ಟವನ್ನು ವಿಶ್ವದ ಎದುರು ತೋರಿಸಲು ಬಯಸಿರುತ್ತಾನೆ. ಮತ್ತು ಅದೆಷ್ಟೋ ಯುವ ಆಟಗಾರರು ಐಪಿಎಲ್‌ನಲ್ಲಿ ಆಡಿದ ಬಳಿಕವೇ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಪಡೆದಿದ್ದಾರೆ.

Not only the youngsters, the senior players got huge money in the auction

ಐಪಿಎಲ್‌ನಲ್ಲಿ ಯುವ ಆಟಗಾರರು ಮಾತ್ರ ಎಲ್ಲರ ಚಿತ್ತ ಕದ್ದಿಲ್ಲ. ಬದಲಿಗೆ ಸ್ಟಾರ್ ಆಟಗಾರರು ಸಹ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಸಿಗುವ ಕೆಲವೇ ಎಸೆತದಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದ್ದಾರೆ. ವಯಸ್ಸು ಬರೀ ಸಂಖ್ಯೆ ಅಷ್ಟೇ ಎಂದು ಸಹ ಅದೆಷ್ಟೋ ಆಟಗಾರರು ಸಾಬೀತು ಮಾಡಿದ್ದಾರೆ.

ಈ ಬಾರಿಯೂ ಸಹ, ಸಿಎಸ್‌ಕೆ ನಾಯಕ ಎಂಎಸ್ ಧೋನಿ ಹೆಸರನ್ನೂ ಒಳಗೊಂಡಂತೆ ಅನೇಕ ಹಿರಿಯ ಆಟಗಾರರು ಮೈದಾನದಲ್ಲಿ ಆಡುವುದನ್ನು ಕಾಣಬಹುದು. ಇನ್ನು ಐಪಿಎಲ್‌ ಹರಾಜಿನಲ್ಲಿ ಯುವಕರಂತೆ ಹಿರಿಯ ಆಟಗಾರರಿಗೆ ಹಣದ ಹೊಳೆಯನ್ನೇ ಮಾಲೀಕರು ಹರಿಸಿದ್ದಾರೆ.

ಪ್ರವೀಣ್ ತಾಂಬೆ

ಐಪಿಎಲ್ ಹರಾಜಿನ ಇತಿಹಾಸದಲ್ಲಿ ಅತ್ಯಂತ ಹಿರಿಯ ವಯಸ್ಸಿನಲ್ಲಿ ಖರೀದಿಸಿದ ಆಟಗಾರ ಎಂಬ ಹೆಗ್ಗಳಿಕೆ ಪ್ರವೀಣ್ ತಾಂಬೆ ಪಾಲಾಗುತ್ತದೆ. ಇವರನ್ನು ರಾಜಸ್ಥಾನ್ ರಾಯಲ್ಸ್ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. 2020 ರ ಐಪಿಎಲ್ ಹರಾಜಿನಲ್ಲಿ ಇವರನ್ನು ಕೆಕೆಆರ್ ಅವರಿಗೆ ಮೂಲ ಬೆಲೆ ನೀಡಿ ತಂಡಕ್ಕೆ ಖರೀದಿಸಿತ್ತು. ಕೋಲ್ಕತ್ತಾ ಅವರನ್ನು ಖರೀದಿಸಿದಾಗ, ಅವರಿಗೆ 48 ವರ್ಷ 2 ತಿಂಗಳು ಮತ್ತು 11 ದಿನಗಳು.

Not only the youngsters, the senior players got huge money in the auction

ಬ್ರಾಡ್ ಹಾಗ್

2015 ರ ಐಪಿಎಲ್ ಹರಾಜಿನಲ್ಲಿ 44 ನೇ ವಯಸ್ಸಿನಲ್ಲಿ ಕೆಕೆಆರ್ ಆಸ್ಟ್ರೇಲಿಯಾದ ಸ್ಟಾರ್ ಬೌಲರ್ ಬ್ರಾಡ್ ಹಾಗ್ ಅವರನ್ನು ಸೇರಿಸಿಕೊಂಡಿತು. ಐಪಿಎಲ್ ಆಡಿದ ಹಿರಿಯ ಆಟಗಾರರ ಪಟ್ಟಿಯಲ್ಲಿ ಇವರಿಗೆ ಎರಡನೇ ಸ್ಥಾನ. ಬ್ರಾಡ್ ಹಾಗ್ ಅವರನ್ನು ಕೆಕೆಆರ್ 50 ಲಕ್ಷ ರೂ. ನೀಡಿ ತಂಡಕ್ಕೆ ಬರಮಾಡಿಕೊಂಡಿತ್ತು. ಬ್ರಾಡ್ ಹಾಗ್ ಐಪಿಎಲ್‌ನಲ್ಲಿ ಒಟ್ಟು 21 ಪಂದ್ಯಗಳನ್ನು ಆಡಿದ್ದು 23 ವಿಕೆಟ್ ಕಬಳಿಸಿದ್ದಾರೆ.

ಅಮಿತ್ ಮಿಶ್ರಾ

40 ವರ್ಷ ಮತ್ತು 29 ದಿನಗಳ ವಯಸ್ಸಿನಲ್ಲಿ ಕಳೆದ ಋತುವಿನಲ್ಲಿ 50 ಲಕ್ಷ ರೂಪಾಯಿಗೆ ಲಕ್ನೋ ಸೂಪರ್‌ಜೈಂಟ್ಸ್ ಖರೀದಿಸಿದ ಅಮಿತ್ ಮಿಶ್ರಾ ಹೆಸರು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅಮಿತ್ ಮಿಶ್ರಾ ಅವರ ದಾಖಲೆ ಐಪಿಎಲ್‌ನಲ್ಲಿ ಅಮೋಘವಾಗಿದೆ. ಇವರು 161 ಪಂದ್ಯಗಳಲ್ಲಿ 7.38 ಎಕನಾಮಿಯಲ್ಲಿ 173 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ವಿಶ್ವದ ಶ್ರೀಮಂತ ಲೀಗ್‌ನಲ್ಲಿ ಗರಿಷ್ಠ ವಿಕೆಟ್‌ ಪಡೆದ ಆಟಗಾರರ ಪಟ್ಟಿಯಲ್ಲಿ ಇವರಿಗೆ ನಾಲ್ಕನೇ ಸ್ಥಾನ.

Story first published: Monday, December 11, 2023, 17:15 [IST]
Other articles published on Dec 11, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+