Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಸ್‌ಜಿ ಟೆಸ್ಟ್ ಚೆಂಡುಗಳ ಗುಣಮಟ್ಟ ಖುಷಿ ನೀಡಿಲ್ಲ: ವಿರಾಟ್ ಕೊಹ್ಲಿ

Not pleased with quality of SG Test balls: Virat Kohli

ಚೆನ್ನೈ: ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್‌ ವೇಳೆ ಬಳಸಲಾದ ಎಸ್‌ಜಿ ಟೆಸ್ಟ್ ಚೆಂಡುಗಳು ಗುಣಮಟ್ಟ ಖುಷಿ ನೀಡಿಲ್ಲ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. 60 ಓವರ್‌ಗಳ ಬಳಿಕ ಎಸ್‌ಜಿ ಚೆಂಡುಗಳು ಮೃದುವಾಗಲಾರಂಭಿಸುತ್ತವೆ. ಅವುಗಳ ಹೊಲಿಗೆ ಸಡಿಲಗೊಳ್ಳಲಾರಂಭಿಸುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.

ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮಂಗಳವಾರ (ಫೆಬ್ರವರಿ 9) ಮುಕ್ತಾಯಗೊಂಡ ಮೊದಲನೇ ಟೆಸ್ಟ್‌ನಲ್ಲಿ ಭಾರತ 227 ರನ್‌ಗಳ ಹೀನಾಯ ಸೋಲನುಭವಿಸಿತ್ತು. ಪಂದ್ಯದಲ್ಲಿ ಭಾರತದ ಅನುಭವಿ ಯಾವುದೇ ಬ್ಯಾಟ್ಸ್‌ಮನ್‌ ಉತ್ತಮ ಪ್ರದರ್ಶನ ನೀಡಿರಲಿಲ್ಲ.

ಮೊದಲನೇ ಪಂದ್ಯದ ಬಳಿಕ ಭಾರತೀಯ ಕೆಲ ಆಟಗಾರರು ಎಸ್‌ಜಿ ಚೆಂಡಿನ ಬಗ್ಗೆ ಬೇಸರ ತೋರಿಕೊಂಡಿದ್ದಾರೆ. ಆರಂಭದಲ್ಲಿ ರವಿಚಂದ್ರನ್ ಅಶ್ವಿನ್ ಎಸ್‌ಜಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಚೆಂಡು ಬದಲಿಸುವಂತೆ ಆನ್ ಫೀಲ್ಡ್ ಅಂಪೈರ್‌ಗಳಾದ ನಿತಿನ್ ಮೆನನ್ ಮತ್ತು ಅನಿಲ್ ಚೌಧರಿ ಅವರಲ್ಲಿ ಭಾರತೀಯರು ಕೋರಿಕೊಂಡಿದ್ದರಾದರೂ ಅಂಪೈರ್‌ಗಳು ಮನವಿಗೆ ಸ್ಪಂದಿಸಿರಲಿಲ್ಲ.

'ಎಸ್‌ಜಿ ಟೆಸ್ಟ್ ಚೆಂಡುಗಳ ಗುಣಮಟ್ಟ ನಮಗೆ ಖುಷಿ ನೀಡಿಲ್ಲ. ಹಿಂದಿನಿಂದಲೂ ನಮಗೆ ಎಸ್‌ಜಿ ಚೆಂಡುಗಳ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಯಾಕೆಂದರೆ 60 ಓವರ್‌ಗಳ ಬಳಿಕ ಆ ಚೆಂಡು ಸಂಪೂರ್ಣ ಹಾಳಾಗಿರೋದು ಯಾವುದೇ ಆಡುವ ತಂಡಗಳ ಅರಿವಿಗೆ ಬರುತ್ತದೆ,' ಎಂದು ಸುದ್ದಿಗೋಷ್ಠಿ ವೇಳೆ ಕೊಹ್ಲಿ ಹೇಳಿಕೊಂಡಿದ್ದಾರೆ.

Story first published: Wednesday, February 10, 2021, 14:30 [IST]
Other articles published on Feb 10, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+