For Quick Alerts
ALLOW NOTIFICATIONS  
For Daily Alerts
 

ರಾಹುಲ್ ಅಲ್ಲ, ಹಾರ್ದಿಕ್ ಅಲ್ಲ; ಭಾರತ ತಂಡಕ್ಕೆ ರೋಹಿತ್ ಶರ್ಮಾ ಉತ್ತರಾಧಿಕಾರಿ ಹೆಸರಿಸಿದ ಸುರೇಶ್ ರೈನಾ!

ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟರ್ ಸುರೇಶ್ ರೈನಾ ಅವರು ಭಾರತಕ್ಕಾಗಿ ಹಲವು ನಿರ್ಣಾಯಕ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ, ತಜ್ಞ ಅಭಿಪ್ರಾಯ ಮತ್ತು ಕಾಮೆಂಟೇಟರ್ ರೂಪದಲ್ಲಿ ಕ್ರಿಕೆಟ್‌ನೊಂದಿಗೆ ತನ್ನ ಒಡನಾಟ ಮುಂದುವರಿಸಿದ್ದಾರೆ.

ಮುಂಬರುವ 2024ರ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಭಾರತ ತಂಡದ ಆಯ್ಕೆಯ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಐಪಿಎಲ್ 2024ರಲ್ಲಿ ಆಟಗಾರರ ಪ್ರದರ್ಶನಗಳು ಭಾರತ ತಂಡದ ಆಯ್ಕೆ ಮಹತ್ವದ ಪಾತ್ರ ವಹಿಸಲಿವೆ.

Not Rahul Not Hardik Suresh Raina Picked Rohit Sharma s Successor For the Indian Team

ಇದೇ ವೇಳೆ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರು ಭಾರತೀಯ ತಂಡದಲ್ಲಿ ತಮ್ಮ ಆಟದ ಸಮಯದ ಕೆಲವು ಆಸಕ್ತಿದಾಯಕ ಒಳನೋಟಗಳನ್ನು ಹಂಚಿಕೊಂಡರು ಮತ್ತು ಭಾರತ ತಂಡದ ಮುಂದಿನ ನಾಯಕನ ಬಗ್ಗೆಯೂ ತಮ್ಮ ಅಭಿಪ್ರಾಯವನ್ನು ಬಹಿರಂಗಪಡಿಸಿದರು.

ಹಾಲಿ ನಾಯಕ ರೋಹಿತ್ ಶರ್ಮಾ ನಂತರ ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಅಥವಾ ಜಸ್ಪ್ರೀತ್ ಬುಮ್ರಾ ಭಾರತ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳಬಹುದು ಎಂದು ಅಭಿಮಾನಿಗಳು ಭಾವಿಸುವುದು ಒಂದು ಕಡೆಯಾದರೆ, 24ರ ಹರೆಯದ ಶುಭ್ಮನ್ ಗಿಲ್ ಭಾರತ ತಂಡದ ಮುಂದಿನ ನಾಯಕರಾಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅನುಭವಿ ಬ್ಯಾಟರ್ ಸುರೇಶ್ ರೈನಾ ಅಭಿಪ್ರಾಯಪಟ್ಟಿದ್ದಾರೆ.

Not Rahul Not Hardik Suresh Raina Picked Rohit Sharma s Successor For the Indian Team

ಸುದ್ದಿ ವೇದಿಕೆಯೊಂದರಲ್ಲಿ ಶುಭ್ಮನ್ ಗಿಲ್ ಬಗ್ಗೆ ಮಾತನಾಡಿದ ಸುರೇಶ್ ರೈನಾ, ""ರೋಹಿತ್ ಶರ್ಮಾ ನಂತರ ಯುವ ಆಟಗಾರ ಶುಭ್ಮನ್ ಗಿಲ್ ಭಾರತ ತಂಡದ ಮುಂದಿನ ನಾಯಕರಾಗುತ್ತಾರೆ ಎಂದು ನಾನು ಹೇಳುತ್ತೇನೆ. ಬನ್ ಸಕ್ತಾ ಹೈ ವೋ,'' ಎಂದು ಹೇಳಿದರು.

ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎನಲ್ಲಿ ನಡೆಯಲಿರುವ 2024ರ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಭಾರತೀಯ ಕ್ರಿಕೆಟ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ಈಗಾಗಲೇ ದೃಢಪಡಿಸಿದ್ದರಿಂದ ಈ ಹೇಳಿಕೆಗಳು ಮಹತ್ವದ್ದಾಗಿದೆ.

ಆದರೆ ಅದರ ನಂತರ ಭಾರತ ತಂಡದ ನಾಯಕತ್ವದ ಸ್ಥಾನದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಸದ್ಯ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ಐಪಿಎಲ್‌ನಲ್ಲಿ ಅವರ ಇತ್ತೀಚಿನ ಪ್ರದರ್ಶನ ಮತ್ತು ಗಾಯದ ಕಾಳಜಿ ಹಾರ್ದಿಕ್ ಪಾಂಡ್ಯ ಭವಿಷ್ಯದ ಬಗ್ಗೆ ಕೆಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಕಳೆದ ಕೆಲವು ವರ್ಷಗಳಿಂದ ಶುಭ್ಮನ್ ಗಿಲ್ ಭಾರತೀಯ ಕ್ರಿಕೆಟ್ ತಂಡಕ್ಕೆ ಅಸಾಧಾರಣ ಆಟಗಾರನಾಗಿದ್ದಾರೆ ಮತ್ತು 2023ರ ಏಷ್ಯಾ ಕಪ್ ಟ್ರೋಫಿಯನ್ನು ಗೆದ್ದು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಆರಂಭಿಕ ಸ್ಥಾನದಲ್ಲಿ, ವಿಶೇಷವಾಗಿ ಸೀಮಿತ ಓವರ್ ಸ್ವರೂಪಗಳಲ್ಲಿ ಭಾರತ ತಂಡಕ್ಕೆ ಉತ್ತಮವಾಗಿ ಆಡುತ್ತಿದ್ದಾರೆ.

ಗುಜರಾತ್ ಟೈಟನ್ಸ್ vs ಪಂಜಾಬ್ ಕಿಂಗ್ಸ್ ಪಂದ್ಯದ ವಿವರ

ಭಾನುವಾರ, ಏಪ್ರಿಲ್ 21ರಂದು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಯಾವುದೇ ಅರ್ಧಶತಕ ಗಳಿಸದ ಹೊರತಾಗಿಯೂ, ನಿಗದಿತ 20 ಓವರ್‌ಗಳಲ್ಲಿ 142 ರನ್‌ಗಳಿಗೆ ಸರ್ವಪತನ ಕಂಡಿತು.

ಇನ್ನು 143 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಗುಜರಾತ್‌ ತಂಡ ತನ್ನ ಆಲ್‌ರೌಂಡ್ ಪ್ರದರ್ಶನ ನೆರವಿನಿಂದ 19.1 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 146 ರನ್‌ಗಳ ಗುರಿ ತಲುಪಿ ಗೆಲುವಿನ ಕೇಕೆ ಹಾಕಿತು.

ಈ ಮೂಲಕ ಗುಜರಾತ್‌ ಟೈಟನ್ಸ್ ತಂಡವು ಐಪಿಎಲ್ 2024ರಲ್ಲಿ ಆಡಿದ 8 ಪಂದ್ಯಗಳಲ್ಲಿ 4 ಗೆಲುವು ಮತ್ತು 4 ಸೋಲು ಕಂಡಿದ್ದು, 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಜಿಗಿದಿದೆ. ಇನ್ನು ಪಂಜಾಬ್ ಕಿಂಗ್ಸ್ ತಂಡ ಆಡಿದ 8 ಪಂದ್ಯಗಳಲ್ಲಿ 2 ಗೆಲುವು ಮತ್ತು 6 ಸೋಲು ಅನುಭವಿಸಿದಂತಾಗಿದ್ದು, ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲೇ ಮುಂದುವರೆದಿದೆ.

Story first published: Monday, April 22, 2024, 16:56 [IST]
Other articles published on Apr 22, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+