ಐಪಿಎಲ್ 2022: ಧೋನಿ ಬದಲು ಜಡೇಜಾಗೆ ಸಿಎಸ್‌ಕೆ ನಾಯಕ ಸ್ಥಾನ; ಸ್ಪಷ್ಟನೆ ಕೊಟ್ಟ ಫ್ರಾಂಚೈಸಿ

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೆ ಇನ್ನೂ 3 ತಿಂಗಳು ಬಾಕಿ ಇದ್ದು ಟೂರ್ನಿ ತನ್ನದೇ ಆದ ವಿಶೇಷತೆಗಳಿಂದ ಈಗಾಗಲೇ ಸಾಕಷ್ಟು ದೊಡ್ಡ ಮಟ್ಟದ ಸದ್ದು ಮಾಡಲು ಆರಂಭಿಸಿದೆ. ಹೌದು, ಕಳೆದ ವರ್ಷದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಿಂದಲೇ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕುರಿತಾದ ಚಟುವಟಿಕೆಗಳು ಆರಂಭವಾಗಿದ್ದು, ಹೊಸದಾಗಿ ಲಕ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳ ಸೇರ್ಪಡೆಯಾಯಿತು. ಹೀಗೆ ಈ ನೂತನ ಫ್ರಾಂಚೈಸಿಗಳ ಸೇರ್ಪಡೆಯಾಗಿರುವುದರಿಂದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಟ್ರೋಫಿಗಾಗಿ 8 ತಂಡಗಳ ಬದಲಾಗಿ ಹತ್ತು ತಂಡಗಳ ನಡುವೆ ಪೈಪೋಟಿ ನಡೆಯಲಿದೆ.
ಹೀಗೆ ನೂತನ ತಂಡಗಳ ಸೇರ್ಪಡೆಯಾಗಿರುವುದರಿಂದ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು ಇದಕ್ಕೂ ಮುನ್ನ ಅಸ್ತಿತ್ವದಲ್ಲಿರುವ ತಂಡಗಳು ತಮಗೆ ಬೇಕಾದ ಆಟಗಾರರನ್ನು ( ಗರಿಷ್ಠ 4 ) ರಿಟೈನ್ ಮಾಡಿಕೊಳ್ಳಲು ಬಿಸಿಸಿಐ ಅನುಮತಿಯನ್ನು ನೀಡಿತ್ತು. ಈ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ರವೀಂದ್ರ ಜಡೇಜಾ, ಎಂಎಸ್ ಧೋನಿ, ಮೊಯಿನ್ ಅಲಿ ಮತ್ತು ರುತುರಾಜ್ ಗಾಯಕ್ವಾಡ್ ಈ 4 ಆಟಗಾರರನ್ನು ರಿಟೈನ್ ಮಾಡಿಕೊಂಡಿತು. ಈ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ ಫ್ರಾಂಚೈಸಿ ಮೊದಲ ಆದ್ಯತೆಯನ್ನು ಎಂಎಸ್ ಧೋನಿ ಅವರಿಗೆ ನೀಡಲು ಮುಂದಾಗಿತ್ತು ಆದರೆ ತಂಡದಲ್ಲಿ ಇನ್ನೂ ಹೆಚ್ಚು ವರ್ಷಗಳ ಕಾಲ ಇರಲಿರುವ ರವೀಂದ್ರ ಜಡೇಜಾಗೆ ಮೊದಲ ಆದ್ಯತೆಯನ್ನು ನೀಡಿ ಎಂದು ಎಂ ಎಸ್ ಧೋನಿ ಮೊದಲನೇ ಆದ್ಯತೆಯನ್ನು ತಿರಸ್ಕರಿಸಿ ರವೀಂದ್ರ ಜಡೇಜಾಗೆ ಕೊಡಿಸಿದ್ದರು. ಈ ರೀತಿ ನಿರ್ಧಾರವನ್ನು ಕೈಗೊಳ್ಳುವುದರ ಮೂಲಕ ಮುಂಬರುವ ಆವೃತ್ತಿಗಳಲ್ಲಿ ತಾನು ಇಂಡಿಯನ್ ಪ್ರಿಮಿಯರ್ ಲೀಗ್‌ಗೆ ರಾಜೀನಾಮೆ ನೀಡುವ ಸುಳಿವನ್ನು ಧೋನಿ ನೀಡಿದ್ದರು.
ಹಾಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚಿಗಷ್ಟೆ ಕೆಲವೊಂದಿಷ್ಟು ಸುದ್ದಿಗಳು ಹರಿದಾಡಿದ್ದು ಎಂ ಎಸ್ ಧೋನಿ ಬದಲು ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿತ್ತು. ಈ ಕುರಿತಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೂಲವೊಂದು ಕ್ರೀಡಾ ವೆಬ್ ತಾಣವಾದ ಇನ್ ಸೈಡ್ ಸ್ಪೋರ್ಟ್‌ಗೆ ಈ ಕೆಳಕಂಡಂತೆ ಮಾಹಿತಿಯನ್ನು ನೀಡಿದೆ.

ರವೀಂದ್ರ ಜಡೇಜಾಗೆ ನಾಯಕತ್ವ ನೀಡಿ ತರಬೇತಿ ಕೊಡುವ ಉದ್ದೇಶವಿದೆ ಎನ್ನಲಾಗಿತ್ತು
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಂ ಎಸ್ ಧೋನಿ ಬದಲು ರವೀಂದ್ರ ಜಡೇಜಾ ಅವರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ನೀಡಿ ಧೋನಿ ಮಾರ್ಗದರ್ಶನದಲ್ಲಿಯೇ ಜಡೇಜಾಗೆ ತರಬೇತಿ ನೀಡುವ ಉದ್ದೇಶವನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಹೊಂದಿದೆ ಎಂಬ ಸುದ್ದಿ ಹರಿದಾಡಿತ್ತು.

ನಾಯಕತ್ವದ ಬದಲಾವಣೆ ಸುದ್ದಿ ನಿಜಾನಾ?
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಂ ಎಸ್ ಧೋನಿ ಬದಲು ರವೀಂದ್ರ ಜಡೇಜಾ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎನ್ನುವುದರ ಕುರಿತು ಮಾಹಿತಿ ನೀಡಿರುವ ಚೆನ್ನೈ ಸೂಪರ್ ಕಿಂಗ್ಸ್ ಮೂಲವು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ನಾಯಕತ್ವ ಬದಲಾಯಿಸುವ ಯಾವುದೇ ಚಿಂತನೆಯನ್ನೂ ನಡೆಸಿಲ್ಲ ಎಂಎಸ್ ಧೋನಿ ಅವರೇ ಈ ಆವೃತ್ತಿಯಲ್ಲಿ ನಾಯಕನಾಗಿ ಇರಲಿದ್ದಾರೆ ಎಂಬ ಸ್ಪಷ್ಟನೆಯನ್ನು ನೀಡಿದೆ.

ಈಗ ನಮ್ಮ ಚಿತ್ತ ಹರಾಜಿನತ್ತ ಎಂದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ
ಎಂಎಸ್ ಧೋನಿ ನಾಯಕತ್ವ ಬದಲಾಯಿಸುವ ಚರ್ಚೆಯೇ ನಡೆದಿಲ್ಲ, ಎಂಎಸ್ ಧೋನಿ ಕಳೆದ ಆವೃತ್ತಿಯಲ್ಲಿ ಟ್ರೋಫಿಯನ್ನು ಗೆಲ್ಲಿಸಿ ಮತ್ತೆ ಕಣಕ್ಕಿಳಿದು ಅಬ್ಬರಿಸಿವಷ್ಟು ಫಿಟ್ ಆಗಿದ್ದಾರೆ ಹೀಗಿರುವಾಗ ಕಾರಣವಿಲ್ಲದೆ ಅವರು ನಾಯಕತ್ವವನ್ನು ಏಕೆ ತ್ಯಜಿಸುತ್ತಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಪ್ರಶ್ನೆ ಹಾಕಿದೆ. ಹಾಗೂ ಸದ್ಯ ನಾಯಕತ್ವದ ಬದಲಾವಣೆಯ ಯಾವುದೇ ಚಿಂತನೆ ಇಲ್ಲ ಎಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಈಗೇನಿದ್ದರೂ ತಮ್ಮ ಚಿತ್ತ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ಐಪಿಎಲ್ ಮೆಗಾ ಹರಾಜಿನತ್ತ ಎಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications