ವಿರಾಟ್ ಕೊಹ್ಲಿ ಮತ್ತು ನನ್ನ ಮಧ್ಯೆ ಏನೂ ಬದಲಾಗಿಲ್ಲ: ಅಜಿಂಕ್ಯ ರಹಾನೆ

ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡ ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿದ್ದಾಗ ತಂಡದ ನಾಯಕರಾಗಿದ್ದ ಅಜಿಂಕ್ಯ ರಹಾನೆ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದರು. ಮುಂಬರಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಗೆ ಮತ್ತೆ ಎಂದಿನ ನಾಯಕ ವಿರಾಟ್ ಕೊಹ್ಲಿ ಮೂರೂ ಮಾದರಿಯ ಕ್ರಿಕೆಟ್‌ನಲ್ಲೂ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.
ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳೆ ವಿರಾಟ್ ಕೊಹ್ಲಿಗೆ ನಾಯಕತ್ವ, ತನ್ನ ಪಾಲಿಗೆ ಉಪನಾಯಕ ಜವಾಬ್ದಾರಿ ಕೊಟ್ಟಿರುವ ಬಗ್ಗೆ ಅಜಿಂಕ್ಯ ರಹಾನೆ ಮಾತನಾಡಿದ್ದಾರೆ. ಅಗತ್ಯಬಿದ್ದಾಗ ನಾಯಕನ ಜವಾಬ್ದಾರಿ ಹೊತ್ತುಕೊಳ್ಳುತ್ತೇನೆ. ಇಲ್ಲದಿದ್ದರೆ ಉಪನಾಯಕನಾಗಿ ತಂಡಕ್ಕೆ ಬಲ ತುಂಬುತ್ತೇನೆ ಎಂದು ರಹಾನೆ ಹೇಳಿದ್ದಾರೆ.
ಕೊಹ್ಲಿ ಮತ್ತು ತನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿರುವ ರಹಾನೆ, 'ವಿರಾಟ್ ಕೊಹ್ಲಿ ಮತ್ತು ನನ್ನ ಮಧ್ಯೆ ಯಾವುದೇ ಬದಲಾವಣೆಯಾಗಿಲ್ಲ. ಕೊಹ್ಲಿ ಯಾವತ್ತಿಗೂ ಟೆಸ್ಟ್ ತಂಡದ ನಾಯಕ ಮತ್ತು ನಾನು ಅವನ ಉಪನಾಯಕ,' ಎಂದಿದ್ದಾರೆ.
'ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡ ಮುನ್ನಡೆಸೋದು ನನ್ನ ಜವಾಬ್ದಾರಿ. ತಂಡದ ಯಶಸ್ಸಿಗೆ ಬೇಕಾದ ಎಲ್ಲವನ್ನೂ ನೀಡೋದು ನನ್ನ ಕರ್ತವ್ಯ,' ಎಂದು ಚೆನ್ನೈಗೆ ಬಂದಿಳಿದಿದ್ದಾಗ ರಹಾನೆ ಪಿಟಿಐ ವಿಶೇಷ ಸಂದರ್ಶನದಲ್ಲಿ ಹೇಳಿದ್ದರು. ಭಾರತ-ಇಂಗ್ಲೆಂಡ್ ಪ್ರವಾಸ ಪಂದ್ಯಗಳು ಫೆಬ್ರವರಿ 5ರಿಂದ ಟೆಸ್ಟ್ ಸರಣಿಯೊಂದಿಗೆ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications