RCB ಅಭಿಮಾನಿಗಳನ್ನು ಟಾರ್ಗೆಟ್ ಮಾಡಿ ಹೊಸ ಫೋನ್ ಲಾಂಚ್ ಮಾಡಿದ ನಥಿಂಗ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವಾಗಿ ಈಗ ಉಳಿದಿಲ್ಲ. ಇದು ಒಂದು ಬ್ರ್ಯಾಂಡ್ ಆಗಿ ಪರಿವರ್ತಿತವಾಗಿದೆ. ವಿಶ್ವದಲ್ಲೇ ಯಾವೊಂದು ಕ್ರಿಕೆಟ್ ತಂಡಕ್ಕೆ ಇರದಷ್ಟು ಫ್ಯಾನ್ ಫಾಲೋಯಿಂಗ್ ಈ ತಂಡಕ್ಕೆ ಇದೆ. ಆರ್‌ಸಿಬಿ ಎಂದರೆ ಅಭಿಮಾನಿಗಳಿಗೆ ಒಂದು ರೀತಿ ಎಮೋಷನ್.. ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ಹಲವು ಕಂಪನಿಗಳು ಹೊಸ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುತ್ತಲೇ ಇರುತ್ತಾರೆ. ಈಗ ಈ ಕಂಪನಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ಆರ್‌ಸಿಬಿ ತಂಡಕ್ಕಾಗಿ ಸ್ಪೇಷಲ್ ಉತ್ಪನ್ನವನ್ನು ತಯಾರು ಮಾಡಿದೆ.
ನಥಿಂಗ್ ಆರ್‌ಸಿಬಿ ತಂಡದ ಈ ಬಾರಿಯ ಜೆರ್ಸಿ ಪ್ರಾಯೋಜಕರು. ಆಟಗಾರರು ಮೈದಾನಕ್ಕೆ ಇಳಿದಾಗಲೆಲ್ಲಾ ಕಂಪನಿಯ ಪ್ರಚಾರ ಭರ್ಜರಿಯಾಗಿ ಆಗುತ್ತಿತ್ತು. ಈಗ ಕಂಪನಿ ತನ್ನ ಹೆಸರಿನೊಂದಿಗೆ ಆರ್‌ಸಿಬಿಯನ್ನು ಬಳಸಿಕೊಂಡು ಮಾರುಕಟ್ಟೆಗೆ ನಥಿಂಗ್ 4 (ಬಿ) ಆರ್‌ಸಿಬಿ ಎಡಿಷನ್ ಲಾಂಚ್ ಮಾಡಿದೆ. ಇದರ ವೈಶಿಷ್ಟ್ಯತೆ ಏನು? ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ನಥಿಂಗ್ 4 (ಬಿ) ಆರ್‌ಸಿಬಿ ಎಡಿಷನ್ ಫೋನ್ ಕಾಣಲು ಸಖತ್ ಸ್ಟೈಲಿಷ್ ಆಗಿದೆ. ಫೋನ್ ಆರ್‌ಸಿಬಿ ಜೆರ್ಸಿ ಕೆಂಪು ಬಣ್ಣದಿಂದ ಕೂಡಿದ್ದಾಗಿದೆ. ಹಿಂಭಾಗದಲ್ಲಿ ಆರ್‌ಸಿಬಿ ಲೋಗೋ ಸಹ ಫೋನ್‌ನಲ್ಲಿ ಕಾಣಬಹುದಾಗಿದೆ. ಈ ಫೋನ್ ನೀಲಿ ಹಾಗೂ ಬಿಳಿ ಬಣ್ಣದಲ್ಲಿ ಗ್ರಾಹಕರ ಕೈ ಸೇರುವ ಸಾಧ್ಯತೆ ಇದೆ.
ಬಿಡುಗಡೆ ಯಾವಾಗ?
ಈ ವಿಶೇಷ ಆವೃತ್ತಿಯು ನಥಿಂಗ್ ಫೋನ್ ಜುಲೈ 7 ರಂದು ಬೆಂಗಳೂರಿನ ಕಂಪನಿಯ ಸ್ಟೋರ್‌ಗಳಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ. ಅಂದು ಸಂಜೆ 4 ಗಂಟೆಯಿಂದ ಮಾರಾಟ ಆರಂಭವಾಗಲಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಎಂದು ಕಂಪನಿ ತಿಳಿಸಿದೆ. ಇನ್ನು ಈ ಫೋನ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುವ ಬಗ್ಗೆ ಸ್ಪಷ್ಟತೆ ಇಲ್ಲ.
ನಥಿಂಗ್ ಫೋನ್ 4ಬಿ ಆರ್‌ಸಿಬಿ ಆವೃತ್ತಿಯ ಸ್ಪೇಷಲ್ ಎಡಿಷನ್ ಫೋನ್, ನಥಿಂಗ್ ಫೋನ್ 4ಬಿ ರೀತಿಯೇ ಇದೆ. ಇದಕ್ಕೆ ಬಳಸಿದ ತಂತ್ರಜ್ಞಾನವನ್ನು ಇದರಲ್ಲಿ ಬಳಸಲಾಗಿದೆ. ಈ ಫೋನ್ ಸ್ನಾಪ್‌ಡ್ರಾಗನ್ ಪ್ರೊಸೆಸರ್‌ನೊಂದಿಗೆ ಮಾರುಕಟ್ಟೆಗೆ ಬರಲಿದೆ ಎಂದು ಕಂಪನಿ ಈ ಮೊದಲೇ ತಿಳಿಸಿದೆ. ಅಲ್ಲದೆ ಆನ್-ಡಿವೈಸ್ ಏಐ ಸಾಮರ್ಥ್ಯಗಳನ್ನು ಹೊಂದಿರಲಿದೆ ಎಂದು ಭರವಸೆ ನೀಡಿದೆ.
ನಥಿಂಗ್ ಫೋನ್ 4ಬಿ ವೈಶಿಷ್ಟ್ಯ ಏನು?
- 6.7 ಇಂಚ್ ಫುಲ್ ಎಚ್‌ಡಿ ಪ್ಲಸ್ ಓಎಲ್‌ಇಡಿ ಡಿಸ್‌ಪ್ಲೇ, 120Hz ರಿಫ್ರೇಷ್ ರೇಟ್
- ಸ್ನ್ಯಾಪ್ ಡ್ರ್ಯಾಗನ್ 6 ಜನ್ 4 ಚಿಪ್ ಸೆಟ್
- 8ಜಿಬಿ ರ್ಯಾಮ್
- 256 ಜಿಬಿ ಇಂಟರ್‌ನಲ್ ಸ್ಟೋರೇಜ್
- ಪ್ರೈಮರಿ ಕ್ಯಾಮರಾ 50 ಎಂಪಿ
- ಅಲ್ಟ್ರಾ ವೈಡ್ 8 ಎಂಪ ಕ್ಯಾಮರಾ
- IP64 ರೇಟಿಂಗ್
- 6000 ಎಂಎಎಚ್, 33 ವ್ಯಾಟ್ ಚಾರ್ಜರ್
ಸದ್ಯ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ ನಥಿಂಗ್ 4 ಬಿ ಬೆಲೆ 30 ಸಾವಿರ ಆಸುಪಾಸಿನಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಫೋನ್ ಒನ್‌ಪ್ಲಸ್ ನಾರ್ಡ್ ಸಿಇ, ಮೊಟೊರೊಲಾ ಎಡ್ಜ್ ಮತ್ತು ರೆಡ್ಮಿ ನೋಟ್ 15 ಪ್ರೊ ಫೋಟೋಗಳಿಗೆ ಪೈಪೋಟಿ ನೀಡಬಲ್ಲದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications