ವಿಡಿಯೋː ತಲೆಗೆ ಚೆಂಡು ಬಡಿದರೂ ಲ್ಯೂಕ್ ಸಕತ್ ಲಕ್ಕಿǃ
ಬರ್ಮಿಂಗ್ ಹ್ಯಾಮ್, ಜುಲೈ 10: ಇಂಗ್ಲೆಂಡಿನ ಎಜ್ ಬಾಸ್ಟನ್ ನಲ್ಲಿ ನಡೆದ ಟಿ20 ಪಂದ್ಯದ ವೇಳೆ ಬ್ಯಾಟ್ಸ್ ಮನ್ ಬಾರಿಸಿದ ಚೆಂಡು ನೇರವಾಗಿ ಬೋಳು ತಲೆಯ ಬೌಲರ್ ನೆತ್ತಿಗೆ ಬಲವಾಗಿ ಬಡಿದಿದೆ. ಅದೃಷ್ಟವಶಾತ್, ಸಕಾಲದಲ್ಲಿ ಬೌಲರ್ ಲ್ಯೂಕ್ ಗೆ ಚಿಕಿತ್ಸೆ ನೀಡಿದ್ದರಿಂದ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ.
ಬರ್ಮಿಂಗ್ ಹ್ಯಾಮ್ ಹಾಗೂ ನ್ಯಾಟಿಂಗ್ ಹ್ಯಾಮ್ ಶೈರ್ ನಡುವೆ ಶನಿವಾರ ನಡೆದ ಪಂದ್ಯದಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಎರಡು ದಿನಗಳ ಕಾಲ ಕ್ರಿಕೆಟರ್ಸ್, ಲ್ಯೂಕ್ ಫ್ಲೆಚರ್(28) ಅವರ ಕುಟುಂಬದವರಲ್ಲಿ ಆತಂಕ ಮೂಡಿತ್ತು. ಇದೀಗ ಫ್ಲೆಚರ್ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳಿಸಿರುವ ಸುದ್ದಿ ಬಂದಿದೆ.

ಬರ್ಮಿಂಗ್ ಹ್ಯಾಮ್ ತಂಡದ ಸ್ಯಾಮ್ ಹೇನ್ ಅವರು ನ್ಯಾಟಿಂಗ್ ಮ್ ಶೈರ್ ತಂಡದ ಬೌಲರ್ ಲ್ಯೂಕ್ ಫ್ಲೆಚರ್ ಎಸೆತವೊಂದನ್ನು ಬಲವಾಗಿ ಸ್ಟ್ರೈ ಡ್ರೈವ್ ಮಾಡಲು ಯತ್ನಿಸಿದ್ದಾರೆ. ವೇಗವಾಗಿ ಬಂದ ಚೆಂಡು ಫ್ಲೆಚರ್ ತಲೆಗೆ ಅಪ್ಪಳಿಸಿದೆ.
ರಭಸವಾಗಿ ಚೆಂಡು ಬಡಿದಿದ್ದರಿಂದ ಫ್ಲೆಚರ್ ಅವರು ತಲೆ ಹಿಡಿದುಕೊಂಡು ಮೈದಾನದಲ್ಲೇ ಕುಸಿದು ಕುಳಿತ್ತಿದ್ದಾರೆ. ತಕ್ಷಣವೇ ವೈದ್ಯರನ್ನು ಕರೆಸಿ, ಚಿಕಿತ್ಸೆ ಕೊಡಿಸಲಾಯಿತು. ನಂತರ ಆಸ್ಪತ್ರೆಗೆ ದಾಖಲಿಸಲಾಯಿತು.
ಈಗ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಆರೋಗ್ಯ ಸುಧಾರಣೆಗೆ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.
Story first published: Wednesday, January 3, 2018, 10:05 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications