T20 World Cup 2026: ನ್ಯೂಜಿಲೆಂಡ್ ತಂಡ ಪ್ರಕಟ: ಆರ್‌ಸಿಬಿ ಆಟಗಾರನಿಗೆ ಸ್ಥಾನ
ನ್ಯೂಜಿಲೆಂಡ್ ತಂಡ ಮುಂಬರುವ ಟಿ20 ವಿಶ್ವಕಪ್ 2026ಗೆ ತನ್ನ ತಂಡವನ್ನು ಪ್ರಕಟಿಸಿದೆ. ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯುತ್ತಿದ್ದರಿಂದ ನ್ಯೂಜಿಲೆಂಡ್ ಅಳೆದು ತೂಗಿ ತಂಡವನ್ನು ಪ್ರಕಟಿಸಿದ್ದು, ಸ್ಪಿನ್ ಬೌಲರ್‌ಗಳಿಗೆ ಮಣೆ ಹಾಕಿದೆ. ಈ ತಂಡದಲ್ಲಿ ಆರ್‌ಸಿಬಿ ತಂಡ ಮಿನಿ ಹರಾಜಿನಲ್ಲಿ ಖರೀದಿಸಿದ ಜೇಕಬ್ ಡಫಿ ಅವರನ್ನು ಸಹ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.
ಜೇಕಬ್ ಡಫಿ 2025ರಲ್ಲಿ ನ್ಯೂಜಿಲೆಂಡ್ ಪರವಾಗಿ ಅಮೋಘ ಪ್ರದರ್ಶನ ನೀಡಿದ್ದರು. 31 ವರ್ಷದ ವೇಗದ ಬೌಲರ್ ಕಳೆದ ವರ್ಷ ಒಟ್ಟು 36 ಪಂದ್ಯಗಳಲ್ಲಿ 81 ವಿಕೆಟ್ ಪಡೆದು ಬೀಗಿದ್ದರು. ಈ ಮೂಲಕ ಇವರು ಸರ್ ರಿಚರ್ಡ್ ಹೆಡ್ಲಿ ಅವರ 40 ವರ್ಷಗಳ ದಾಖಲೆಯನ್ನು ಅಳಿಸಿ ಹಾಕಿದ್ದರು. ಸರ್ ರಿಚರ್ಡ್ ಹೆಡ್ಲಿ 79 ವಿಕೆಟ್‌ಗಳನ್ನು ಪಡೆದಿದ್ದರು. ಈ ತಂಡದಲ್ಲಿರುವ ಆಟಗಾರರ ಪೈಕಿ ಡಫಿ ಒಬ್ಬರೇ ಟಿ20 ವಿಶ್ವಕಪ್ ಆಡದ ಏಕೈಕ ಆಟಗಾರರಾಗಿದ್ದಾರೆ. ಇವರನ್ನು ಆರ್‌ಸಿಬಿ ಹರಾಜಿನಲ್ಲಿ 2 ಕೋಟಿ ನೀಡಿ ಖರೀದಿಸಿತ್ತು.

ಟಿ20 ವಿಶ್ವಕಪ್‌ಗ ಘೋಷಿಸಲಾದ ತಂಡದಲ್ಲಿ ಕಿವೀಸ್ ತಂಡದ ಸ್ಟಾರ್ ವೇಗದ ಬೌಲರ್ ಲಾಕಿ ಫರ್ಗ್ಯೂಸನ್, ಮ್ಯಾಟ್ ಹೆನ್ರಿ, ಆಡಂ ಮಿಲ್ನೆ, ಜೇಮ್ಸ್ ನೀಶಮ್ ಇದ್ದಾರೆ. ಉಳಿದಂತೆ ಕೈಲ್ ಜೇಮಿಸನ್ ಅವರನ್ನು ಕಾಯ್ದಿರಿಸಿದ ಆಟಗಾರರಾಗಿ ಇರಿಸಿಕೊಳ್ಳಲಾಗಿದೆ.
ಸ್ಯಾಂಟ್ನರ್‌ಗೆ ಪಟ್ಟ
ಒಂಬತ್ತನೇ ಐಸಿಸಿ ಟೂರ್ನಿ ಆಡುತ್ತಿರುವ ಸ್ಪಿನ್ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್ ಅವರಿಗೆ ತಂಡದಲ್ಲಿ ನಾಯಕತ್ವ ನೀಡಲಾಗಿದೆ. ಭಾರತ ಹಾಗೂ ಶ್ರೀಲಂಕಾದಲ್ಲಿ ಟೂರ್ನಿ ನಡೆಯುತ್ತಿದ್ದರಿಂದ ಸ್ಪಿನ್ ಬೌಲರ್‌ಗಳಿಗೆ ಕಿವೀಸ್ ಹೆಚ್ಚಾಗಿ ಮಣೆ ಹಾಕಿದೆ. ತಂಡದಲ್ಲಿ ಮೈಕೆಲ್ ಬ್ರೇಸ್‌ವೆಲ್, ಗ್ಲೆನ್ ಫಿಲಿಪ್ಸ್ ಮತ್ತು ರಾಚಿನ್ ರವೀಂದ್ರ. ಸ್ಯಾಂಟ್ನರ್ ಮತ್ತು ಸೋಧಿ ಪಿರ್ಕಿ ಜಾದು ತೋರಿಸಲಿದ್ದಾರೆ.

ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ಕ್ರಮಾಂಕ ಸ್ಥಿರವಾಗಿದೆ. ಫಿನ್ ಅಲೆನ್, ಡೆವೊನ್ ಕಾನ್ವೇ, ಡ್ಯಾರಿಲ್ ಮಿಚೆಲ್, ಮಾರ್ಕ್ ಚಾಪ್ಮನ್ ಮತ್ತು ವಿಕೆಟ್ ಕೀಪರ್ ಟಿಮ್ ಸೀಫರ್ಟ್ ತಂಡಕ್ಕೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಲ ತುಂಬಬಲ್ಲರು.
ನ್ಯೂಜಿಲೆಂಡ್ ತಂಡಕ್ಕೆ ಗಾಯದ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಪ್ರಮುಖ ಆಟಗಾರರಾದ ಫಿನ್ ಅಲೆನ್ ಬೆರಳಿನ ಗಾಯ, ಚಾಪ್ಮನ್, ಫರ್ಗುಸನ್, ಹೆನ್ರಿ ಹಾಗೂ ನಾಯಕ ಸ್ಯಾಂಟ್ನರ್ ಅವರಿಗೆ ಸ್ನಾಯು ಸೆಳೆತ ಕಾಣಿಸಿಕೊಂಡಿದ್ದು, ಇವರು ಈಗ ಚೇತರಿಕೆ ಹಂತದಲ್ಲಿದ್ದಾರೆ. ಇನ್ನು ಟಿ20 ವಿಶ್ವಕಪ್ ಸಂದರ್ಭದಲ್ಲಿ ವೇಗಿಗಾಳದ ಫರ್ಗುಸನ್ ಮತ್ತು ಹೆನ್ರಿ ಪಿತೃತ್ವ ರಜೆ ಪಡೆಯುವ ಸಾಧ್ಯತೆ ಇದೆ.
ನ್ಯೂಜಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್ಮನ್, ಡೆವನ್ ಕಾನ್ವೇ, ಜೇಕಬ್ ಡಫಿ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಡ್ಯಾರಿಲ್ ಮಿಚೆಲ್, ಆಡಮ್ ಮಿಲ್ನೆ, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಟಿಮ್ ಸೀಫರ್ಟ್ ಮತ್ತು ಇಶ್ ಸೋಧಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications