For Quick Alerts
ALLOW NOTIFICATIONS  
For Daily Alerts
 

NZ vs BAN 1st Test: ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಕೇನ್ ವಿಲಿಯಮ್ಸನ್!

ಬುಧವಾರ, ನವೆಂಬರ್ 29ರಂದು ಸಿಲ್ಹೆಟ್‌ನಲ್ಲಿ ನಡೆಯುತ್ತಿರುವ ಆತಿಥೇಯ ಬಾಂಗ್ಲಾದೇಶದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಸನ್ ತಮ್ಮ 29ನೇ ಟೆಸ್ಟ್ ಶತಕವನ್ನು ಬಾರಿಸಿದರು.

ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಟೆಸ್ಟ್ ಶತಕಗಳ ಸಂಖ್ಯೆಯನ್ನು ಕೇನ್ ವಿಲಿಯಮ್ಸನ್ ಸರಿಗಟ್ಟಿದರು. ಅಲ್ಲದೆ, ಭಾರತದ ಶ್ರೇಷ್ಠ ಕ್ರಿಕೆಟಿಗನಿಗಿಂತ ನ್ಯೂಜಿಲೆಂಡ್ ಆಟಗಾರ 26 ಟೆಸ್ಟ್ ಪಂದ್ಯಗಳನ್ನು ಕಡಿಮೆ ಆಡಿದ್ದಾರೆ ಎಂಬುದು ಗಮನಾರ್ಹ.

ಮೊದಲ ಟೆಸ್ಟ್ ಪಂದ್ಯದ 2ನೇ ದಿನದಂದು ಇಬ್ಬರೂ ಆರಂಭಿಕರು ಕಡಿಮೆ ರನ್‌ಗಳಿಗೆ ಔಟಾದ ಬಲಿಕ ಕ್ರೀಸ್‌ಗೆ ಬಂದ ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡವನ್ನು ಅಪಾಯದಿಂದ ರಕ್ಷಿಸಿದರು.

NZ vs BAN 1st Test: Kane Williamson Matches Virat Kohlis Test Cricket Record

ಬಲಗೈ ಬ್ಯಾಟರ್ ಕೇನ್ ವಿಲಿಯಮ್ಸನ್ ಇನ್ನಿಂಗ್ಸ್‌ನ 13ನೇ ಓವರ್‌ನಲ್ಲಿ 3ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಆಗಮಿಸಿದರು ಮತ್ತು ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಉಳಿಸಿಕೊಳ್ಳಲು ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಅವರೊಂದಿಗೆ ಉತ್ತಮ ಜೊತೆಯಾಟ ನಿರ್ಮಿಸಿದರು.

ನ್ಯೂಜಿಲೆಂಡ್ ತಂಡದ ಮಾಜಿ ಟೆಸ್ಟ್ ನಾಯಕ ಕೇನ್ ವಿಲಿಯಮ್ಸನ್ ಬಾಂಗ್ಲಾದೇಶದ ಸ್ಪಿನ್ನರ್‌ಗಳ ವಿರುದ್ಧ ತಾಳ್ಮೆಯ ಇನ್ನಿಂಗ್ಸ್ ಆಡಿದ ಬಳಿಕ 189 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು.

ಕೇನ್ ವಿಲಿಯಮ್ಸನ್ ಅವರು ತಮ್ಮ 95ನೇ ಟೆಸ್ಟ್ ಪಂದ್ಯದಲ್ಲಿ 29 ಟೆಸ್ಟ್ ಶತಕಗಳ ಸಂಖ್ಯೆಯನ್ನು ತಲುಪಿದರು. ವೆಸ್ಟ್ ಇಂಡೀಸ್ ವಿರುದ್ಧ ಆಡುವಾಗ ತಮ್ಮ 121ನೇ ಟೆಸ್ಟ್‌ ಪಂದ್ಯದಲ್ಲಿ ಗಳಿಸಿದ ವಿರಾಟ್ ಕೊಹ್ಲಿಗಿಂತ ಹೆಚ್ಚು ವೇಗವಾಗಿ.

ಇದೇ ವೇಳೆ ಕೇನ್ ವಿಲಿಯಮ್ಸನ್ ಅವರು 52 ಟೆಸ್ಟ್ ಪಂದ್ಯಗಳಿಂದ 29 ಶತಕಗಳನ್ನು ಹೊಂದಿದ್ದ ಆಸ್ಟ್ರೇಲಿಯಾದ ಲೆಜೆಂಡ್ ಬ್ಯಾಟರ್ ಡಾನ್ ಬ್ರಾಡ್‌ಮನ್ ಅವರ ಟೆಸ್ಟ್ ಶತಕಗಳ ಸಂಖ್ಯೆಯನ್ನು ಸರಿಗಟ್ಟಿದರು.

2010ರಿಂದ ನ್ಯೂಜಿಲೆಂಡ್ ಪರ ಆಡುತ್ತಿರುವ ಕೇನ್ ವಿಲಿಯಮ್ಸನ್, ಟೆಸ್ಟ್ ಮಾದರಿಯಲ್ಲಿ ನ್ಯೂಜಿಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ ಮತ್ತು ಇದೀಗ ತಮ್ಮ ಟೆಸ್ಟ್ ಶತಕಗಳ ದಾಖಲೆಯನ್ನು 29ಕ್ಕೆ ವಿಸ್ತರಿಸಿದ್ದಾರೆ.

ನ್ಯೂಜಿಲೆಂಡ್‌ನ ಸಕ್ರಿಯ ಆಟಗಾರರಲ್ಲಿ ಟಾಮ್ ಲ್ಯಾಥಮ್ ಮಾತ್ರ ತಮ್ಮ ಹೆಸರಿಗೆ 13 ಟೆಸ್ಟ್ ಶತಕಗಳೊಂದಿಗೆ ಕೇನ್ ವಿಲಿಯಮ್ಸನ್ ಅವರಿಗೆ ಹತ್ತಿರವಾಗಿದ್ದಾರೆ.

ಇದು ಕೇನ್ ವಿಲಿಯಮ್ಸನ್ ಅವರ ಟೆಸ್ಟ್ ಮಾದರಿಯಲ್ಲಿ ಸತತ ನಾಲ್ಕನೇ ಶತಕವಾಗಿದೆ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ಶತಕ ಬಾರಿಸಿದ್ದರು.

ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್ 310 ರನ್‌ಗಳಿಗೆ ಪ್ರತ್ಯುತ್ತರವಾಗಿ, ಎರಡನೇ ದಿನದಾಟದ ಅಂತ್ಯದ ವೇಳೆಗೆ ನ್ಯೂಜಿಲೆಂಡ್ ತಂಡವು 266 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಹಿನ್ನಡೆಯ ಭೀತಿಯಲ್ಲಿದೆ. ಕೇನ್ ವಿಲಿಯಮ್ಸನ್ ತೈಜುಲ್ ಇಸ್ಲಾಂ ಬೌಲಿಂಗ್‌ನಲ್ಲಿ ಔಟಾಗುವ ಮುನ್ನ 205 ಎಸೆತಗಳಲ್ಲಿ 104 ರನ್ ಗಳಿಸಿದ್ದರು.

ಕೇನ್ ವಿಲಿಯಮ್ಸನ್ ನಿರ್ಗಮನದ ನಂತರ, ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್ ಸ್ಕೋರ್ 310 ರನ್‌ಗಳನ್ನು ಸಮಗೊಳಿಸಲು ನ್ಯೂಜಿಲೆಂಡ್‌ಗೆ ಇನ್ನೂ 44 ರನ್‌ಗಳ ಅಗತ್ಯವಿದೆ. ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025ರ ಚಕ್ರದಲ್ಲಿ ನ್ಯೂಜಿಲೆಂಡ್‌ನ ಮೊದಲ ಟೆಸ್ಟ್ ಪಂದ್ಯವಾಗಿದೆ.

Story first published: Wednesday, November 29, 2023, 18:02 [IST]
Other articles published on Nov 29, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+