For Quick Alerts
ALLOW NOTIFICATIONS  
For Daily Alerts
 

NZ vs BAN: 15 ವರ್ಷಗಳ ನಂತರ ಬಾಂಗ್ಲಾದೇಶ ಕೋಟೆ ಭೇದಿಸಿ ಏಕದಿನ ಸರಣಿ ಗೆದ್ದ ಕಿವೀಸ್ ಪಡೆ

ಮಂಗಳವಾರ, ಸೆಪ್ಟೆಂಬರ್ 26ರಂದು ಢಾಕಾದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ವಿರುದ್ಧ ಪ್ರವಾಸಿ ನ್ಯೂಜಿಲೆಂಡ್ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದರೆ, ಎರಡನೇ ಏಕದಿನ ಪಂದ್ಯವನ್ನು 86 ರನ್‌ಗಳಿಂದ ನ್ಯೂಜಿಲೆಂಡ್ ಗೆಲುವು ಸಾಧಿಸಿತ್ತು. ಇದೀಗ ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ 2-0 ಅಂತರದಲ್ಲಿ ನ್ಯೂಜಿಲೆಂಡ್ ಸರಣಿ ವಶಪಡಿಸಿಕೊಂಡಿದೆ. ಅಲ್ಲದೆ, 2008ರ ನಂತರ ಮೊದಲ ಬಾರಿಗೆ ಬಾಂಗ್ಲಾದೇಶ ನೆಲದಲ್ಲಿ ಏಕದಿನ ಸರಣಿ ಗೆದ್ದಿದೆ.

ಶಕೀಬ್ ಅಲ್ ಹಸನ್ ಅನುಪಸ್ಥಿತಿಯಲ್ಲಿ ಬಾಂಗ್ಲಾದೇಶ ತಂಡವನ್ನು ಮುನ್ನಡೆಸಿದ ನಜ್ಮುಲ್ ಹೊಸೈನ್ ಶಾಂಟೊ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಬ್ಯಾಟಿಂಗ್ ಆರಂಭಿಸಿದ ತಂಜಿದ್ ಹಸನ್ 5 ರನ್ ಮತ್ತು ಜಾಕಿರ್ ಹಸನ್ 1 ರನ್ ಗಳಿಸಿ ತಂಡದ ಸ್ಕೋರ್ ಬೋರ್ಡ್‌ನಲ್ಲಿ ಕೇವಲ 8 ರನ್ ಗಳಿಸಿದ್ದಾಗ ಔಟಾದರು.

nz-vs-ban-3rd-odi

ನಂತರ ಬಂದ ತೌಹಿದ್ ಹೃದೋಯ್ 17 ಎಸೆತಗಳಲ್ಲಿ 18 ರನ್, ಮುಶ್ಫಿಕರ್ ರಹೀಮ್ 18 ರನ್, ಮಹಮ್ಮುದುಲ್ಲಾ 21 ರನ್, ಮಹೆದಿ ಹಸನ್ 13 ರನ್ ಗಳಿಸಿದರು.

ನಾಯಕ ಶಾಂಟೊ ಮಾತ್ರ 84 ಎಸೆತಗಳಲ್ಲಿ 10 ಬೌಂಡರಿಗಳ ಸಹಾಯದಿಂದ 76 ರನ್ ಗಳಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸಲು ನೆರವಾದರು ಮತ್ತು ಇತರ ಆಟಗಾರರಿಂದ ಯಾವುದೇ ಬೆಂಬಲವನ್ನು ಪಡೆಯಲು ವಿಫಲರಾದರು. ಅಂತಿಮವಾಗಿ ಬಾಂಗ್ಲಾದೇಶ ತಂಡವು 171 ರನ್‌ ಆಲೌಟ್ ಆಯಿತು.

ನ್ಯೂಜಿಲೆಂಡ್ ಪರ ಬೌಲಿಂಗ್‌ನಲ್ಲಿ ಆಡಮ್ ಮಿಲ್ನೆ 6.3 ಓವರ್‌ಗಳಲ್ಲಿ 34 ರನ್ 4 ವಿಕೆಟ್ ಕಬಳಿಸಿದರೆ, ಟ್ರೆಂಟ್ ಬೌಲ್ಟ್ 6 ಓವರ್‌ಗಳಲ್ಲಿ 33 ರನ್ ನೀಡಿ 2 ವಿಕೆಟ್ ಪಡೆದರು. ಕೋಲ್ ಮೆಕಾಂಚಿ 5 ಓವರ್‌ಗಳಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದರೆ, ಲಾಕಿ ಫರ್ಗ್ಯುಸನ್ ಮತ್ತು ರಚಿನ್ ರವೀಂದ್ರ ತಲಾ ವಿಕೆಟ್ ಪಡೆದರು.

nz-vs-ban-3rd-odi

172 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಆರಂಭಿಕರಾದ ಫಿನ್ ಅಲೆನ್ 26 ಎಸೆತಗಳಲ್ಲಿ 28 ರನ್ ಮತ್ತು ವಿಲ್ ಯಂಗ್ ಮೊದಲ ವಿಕೆಟ್‌ಗೆ 49 ರನ್‌ಗಳ ಜೊತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿದರು.

ಶೋರಿಫುಲ್ ಇಸ್ಲಾಮ್ ಅವರು ಫಿನ್ ಅಲೆನ್ ಮತ್ತು ಡೀನ್ ಫಾಕ್ಸ್‌ಕ್ರಾಫ್ಟ್ ಅವರನ್ನು ಸತತ ಎರಡು ಎಸೆತಗಳಲ್ಲಿ ಔಟ್ ಮಾಡುವ ಮೂಲಕ ಮೇಲುಗೈ ಸಾಧಿಸಲು ಪ್ರಯತ್ನಿಸಿದರು.

ಆ ಬಳಿಕ ವಿಲ್ ಯಂಗ್ ಮತ್ತು ಹೆನ್ರಿ ನಿಕೋಲ್ಸ್ 118 ಎಸೆತಗಳಲ್ಲಿ 81 ರನ್‌ಗಳ ಜೊತೆಯಾಟದೊಂದಿಗೆ ನ್ಯೂಜಿಲೆಂಡ್ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದರು. 30ನೇ ಓವರ್‌ನಲ್ಲಿ ನಸುಮ್ ಅಹ್ಮದ್ ಬೌಲಿಂಗ್‌ನಲ್ಲಿ ವಿಲ್ ಯಂಗ್ ಔಟಾಗುವ ಮುನ್ನ 80 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 70 ರನ್ ಬಾರಿಸಿದರು.

ಹೆನ್ರಿ ನಿಕೋಲ್ಸ್ 86 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಮೇತ ಅಜೇಯ 50 ರನ್ ಗಳಿಸಿದರೆ, ಟಾಮ್ ಬ್ಲಂಡೆಲ್ 16 ಎಸೆತಗಳಲ್ಲಿ 23 ರನ್ ಗಳಿಸಿ 34.5 ಓವರ್‌ಗಳಲ್ಲಿ ಕಿವೀಸ್ ತಂಡಕ್ಕೆ ಗೆಲುವು ತಂದುಕೊಟ್ಟರು. ಇದು 15 ವರ್ಷಗಳ ನಂತರ ಬಾಂಗ್ಲಾದೇಶ ನೆಲದಲ್ಲಿ ನ್ಯೂಜಿಲೆಂಡ್ ತಂಡದ ಮೊದಲ ಏಕದಿನ ಸರಣಿ ಗೆಲುವಾಗಿದೆ.

Story first published: Tuesday, September 26, 2023, 22:17 [IST]
Other articles published on Sep 26, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+