For Quick Alerts
ALLOW NOTIFICATIONS  
For Daily Alerts
 

NZ vs Eng: ಜೀವಮಾನದ ಇನ್ನಿಂಗ್ಸ್; ಜಾನಿ ಬೈರ್‌ಸ್ಟೋವ್ ಬ್ಯಾಟಿಂಗ್ ಬಗ್ಗೆ ವೀರೇಂದ್ರ ಸೆಹ್ವಾಗ್ ಮೆಚ್ಚುಗೆ

NZ vs Eng: Former Cricketer Virender Sehwag Praises Jonny Bairstows Batting Against New Zealand

ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡ ಇಂಗ್ಲೆಂಡ್ ತಂಡವನ್ನು ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಮುಕ್ತಕಂಠದಿಂದ ಹೊಗಳಿದ್ದಾರೆ. ಅದೇ ರೀತಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ ಅವರ 92 ಎಸೆತಗಳಲ್ಲಿ 136 ರನ್ ಬಾರಿಸಿದ್ದರಿಂದ ಅದನ್ನು 'ಜೀವಮಾನದ ಇನ್ನಿಂಗ್ಸ್' ಎಂದು ಶ್ಲಾಘಿಸಿದ್ದಾರೆ.

ಎರಡನೇ ಟೆಸ್ಟ್‌ನಲ್ಲಿ ಗೆಲ್ಲಲು 299 ರನ್‌ಗಳ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್, ಸ್ಕೋರ್ ಬೋರ್ಡ್‌ನಲ್ಲಿ 93 ರನ್‌ಗಳಾಗಿದ್ದಾಗ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ 32 ವರ್ಷದ ಇಂಗ್ಲೆಂಡ್ ಬ್ಯಾಟರ್ ಜಾನಿ ಬೈರ್‌ಸ್ಟೋವ್ ಕಿವೀಸ್ ಬೌಲಿಂಗ್ ಪಡೆಯ ಯೋಜನೆಯನ್ನು ತಲೆಕೆಳಗಾಗಿ ಆಡಿದರು. ಇದೇ ವೇಳೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದಿಂದ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ವಶಮಾಡಿಕೊಂಡರು.

14 ಬೌಂಡರಿಗಳು ಮತ್ತು ಏಳು ಸಿಕ್ಸರ್‌ಗಳ ಸಹಿತ 136 ರನ್

14 ಬೌಂಡರಿಗಳು ಮತ್ತು ಏಳು ಸಿಕ್ಸರ್‌ಗಳ ಸಹಿತ 136 ರನ್

ಜಾನಿ ಬೈರ್‌ಸ್ಟೋವ್ 14 ಬೌಂಡರಿಗಳು ಮತ್ತು ಏಳು ಸಿಕ್ಸರ್‌ಗಳ ಸಹಿತ 136 ರನ್ ಬಾರಿಸಿ ಆತಿಥೇಯ ಇಂಗ್ಲೆಂಡ್ ತಂಡ ಐದು ವಿಕೆಟ್‌ಗಳು ಬಾಕಿ ಇರುವಂತೆಯೇ ಬೃಹತ್ ಸ್ಕೋರ್ ಬೆನ್ನಟ್ಟಿ ಗೆಲ್ಲಲು ಸಹಾಯ ಮಾಡಿದರು. ಇದೇ ವೇಳೆ 70 ಎಸೆತಗಳಲ್ಲಿ 75 ರನ್ ಗಳಿಸಿದ ನಾಯಕ ಬೆನ್ ಸ್ಟೋಕ್ಸ್ ಕೂಡಾ ಇಂಗ್ಲೆಂಡ್ ಗೆಲುವಿಗೆ ಸಹಾಯ ಮಾಡಿದರು.

ಜಾನಿ ಬೈರ್‌ಸ್ಟೋವ್ ಅವರ ಅದ್ಭುತ ಇನ್ನಿಂಗ್ಸ್‌ಗೆ ಕ್ರಿಕೆಟ್ ಪ್ರಪಂಚದಿಂದ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ ಮತ್ತು ಅವರಲ್ಲಿ ಮಾಜಿ ಭಾರತೀಯ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಕೂಡ ಒಬ್ಬರು. ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿಯಾದ 43 ವರ್ಷ ವಯಸ್ಸಿನ ಸೆಹ್ವಾಗ್ ಸಾಮಾಜಿಕ ಮಾಧ್ಯಮದಲ್ಲಿ ಇಂಗ್ಲೆಂಡ್ ಬ್ಯಾಟರ್‌ನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಟೆಸ್ಟ್ ಕ್ರಿಕೆಟ್ ಆಟದ ಅತ್ಯುತ್ತಮ ಸ್ವರೂಪ

ಟೆಸ್ಟ್ ಕ್ರಿಕೆಟ್ ಆಟದ ಅತ್ಯುತ್ತಮ ಸ್ವರೂಪ

ಬೈರ್‌ಸ್ಟೋವ್ ಅದ್ಭುತ ಶತಕವನ್ನು ಜೀವಮಾನದ ಇನ್ನಿಂಗ್ಸ್ ಎಂದು ಕರೆದಿರುವ ವೀರೇಂದ್ರ ಸೆಹ್ವಾಗ್, ಇಂಗ್ಲೆಂಡ್‌ನ ಬ್ಯಾಟಿಂಗ್ ಪ್ರಯತ್ನವನ್ನು ಶ್ಲಾಘಿಸಿದರು ಮತ್ತು ಇದು ಟೆಸ್ಟ್ ಇತಿಹಾಸದಲ್ಲಿ ಅತ್ಯುತ್ತಮ ಪ್ರತಿದಾಳಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಒಂದಾಗಿದೆ ಎಂದು ಹೇಳಿದರು. ಟೆಸ್ಟ್ ಕ್ರಿಕೆಟ್ ಆಟದ ಅತ್ಯುತ್ತಮ ರೂಪ ಎಂದು ಹೇಳುವ ಮೂಲಕ ಸೆಹ್ವಾಗ್ ತಮ್ಮ ಟ್ವೀಟ್ ಅನ್ನು ಕೊನೆಗೊಳಿಸಿದರು.

"ಜಾನಿ ಬೈರ್‌ಸ್ಟೋವ್ ಅವರಿಂದ ಜೀವಮಾನದ ಇನ್ನಿಂಗ್ಸ್, ನೀವು ನೋಡಬಹುದಾದ ಅತ್ಯುತ್ತಮ ಪ್ರತಿದಾಳಿ 4ನೇ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ. ಇಂಗ್ಲೆಂಡ್ ಚೆನ್ನಾಗಿ ಆಡಿದೆ, ಟೆಸ್ಟ್ ಕ್ರಿಕೆಟ್ ಅತ್ಯುತ್ತಮ ಕ್ರಿಕೆಟ್ #ENGvNZ," ಎಂದು ವೀರೇಂದ್ರ ಸೆಹ್ವಾಗ್ ಟ್ವಿಟ್ಟರ್ ಪೋಸ್ಟ್ ಮಾಡಿದ್ದಾರೆ.

ಜಾನಿ ಬೈರ್‌ಸ್ಟೋವ್ ಹಾಡಿ ಹೊಗಳಿದ ನಾಯಕ

ಜಾನಿ ಬೈರ್‌ಸ್ಟೋವ್ ಹಾಡಿ ಹೊಗಳಿದ ನಾಯಕ

ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಕೂಡ ಜಾನಿ ಬೈರ್‌ಸ್ಟೋವ್ ಅವರನ್ನು ಹೊಗಳಿದ್ದಾರೆ. ಇವರಿಬ್ಬರು ಇಂಗ್ಲೆಂಡ್ ತಂಡವಿ ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಗೆಲ್ಲಲು 179 ರನ್‌ಗಳ ಜೊತೆಯಾಟ ಆಡಿದರು. 32 ವರ್ಷದ ಜಾನಿ ಬೈರ್‌ಸ್ಟೋವ್ ಒಮ್ಮೆ ಆಟದ ಮೇಲೆ ಕಣ್ಣು ಹಾಕಿದರೆ, ಅವನನ್ನು ತಡೆಯುವುದು ಕಷ್ಟ ಎಂದು ಸ್ಟಾರ್ ಆಲ್‌ರೌಂಡರ್ ಮತ್ತು ನಾಯಕ ಬೆನ್ ಸ್ಟೋಕ್ಸ್ ಹೇಳಿದರು.

Shanaka SLvsAus ಪಂದ್ಯದಲ್ಲಿ ವೈರಲ್ ಆದ ಹುಡುಗನನ್ನು ಭೇಟಿ ಮಾಡಿದರು
ಕೇವಲ 27 ಎಸೆತಗಳಲ್ಲಿ 50 ರನ್‌

ಕೇವಲ 27 ಎಸೆತಗಳಲ್ಲಿ 50 ರನ್‌

ಮೊದಲು 50 ಎಸೆತಗಳಲ್ಲಿ 50 ರನ್ ದಾಖಲಿಸಿದ್ದ ಬೈಸ್ಟ್ರೋವ್, ನಂತರದ 50 ರನ್‌ಗಳನ್ನು ಕೇವಲ 27 ಎಸೆತಗಳಲ್ಲಿ ದಾಖಲಿಸಿರುವುದು ವಿಶೇಷ. ಈ ಮೂಲಕ ಅಬ್ಬರಿಸಿದ ವಿಕೆಟ್ ಕೀಪರ್ ಬ್ಯಾಟರ್ ಸ್ವಲ್ಪದರಲ್ಲೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗದ ಶತಕ ದಾಖಲಿಸಿದ ಬ್ಯಾಟರ್ ಎಂಬ ಸಾಧನೆಯನ್ನ ಮಿಸ್ ಮಾಡಿಕೊಂಡರು.

ಇಂಗ್ಲಿಷ್ ಬ್ಯಾಟರ್ ಗಿಲ್ಬರ್ಟ್ ಜೆಸ್ಸಾಪ್ ಅವರು 1902 ರಲ್ಲಿ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಾ ವಿರುದ್ಧ 76 ಎಸೆತಗಳಲ್ಲಿ ಶತಕ ಗಳಿಸಿದರು. ಸುಮಾರು 120 ವರ್ಷಗಳ ಹಳೆಯ ದಾಖಲೆಯನ್ನ ಮುರಿಯುವ ಅವಕಾಶ ಬೈಸ್ಟ್ರೋವ್‌ಗಿತ್ತು. ಆದ್ರೆ ಸ್ವಲ್ಪದರಲ್ಲೇ ಮಿಸ್ ಆಗಿ 77 ಎಸೆತಗಳಲ್ಲಿ ಶತಕ ದಾಖಲಿಸಿದ್ದಾರೆ.

Story first published: Wednesday, June 15, 2022, 17:44 [IST]
Other articles published on Jun 15, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+