Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

NZ vs ENG: ವೆಲಿಂಗ್ಟನ್‌ನಲ್ಲಿ ಇಂಗ್ಲೆಂಡ್‌ ಪ್ಲೇಯರ್‌ ಶತಕ: ಡೆಲ್ಲಿ ಕ್ಯಾಪಿಟಲ್ಸ್‌ ಮುಖದಲ್ಲಿ ಮಂದಹಾಸ

ನ್ಯೂಜಿಲೆಂಡ್‌ ಪ್ರವಾಸದಲ್ಲಿ ಇಂಗ್ಲೆಂಡ್‌ ವೆಲಿಂಗ್ಟನ್‌ನಲ್ಲಿ ಎರಡನೇ ಟೆಸ್ಟ್‌ ಆಡುತ್ತಿದೆ. ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್‌ 280 ರನ್‌ಗಳಿಗೆ ಆಲೌಟ್ ಆಯಿತು. ಶುಕ್ರವಾರ ಮೊದಲ ಇನಿಂಗ್ಸ್‌ನಲ್ಲಿ ಆರಂಭಿಸಿದ ಆತಿಥೇಯ ಕಿವೀಸ್‌ 5 ವಿಕೆಟ್‌ ಕಳೆದುಕೊಂಡು 86 ರನ್‌ ಕಲೆ ಹಾಕಿದ್ದು, 194 ರನ್‌ಗಳ ಇನಿಂಗ್ಸ್‌ ಹಿನ್ನಡೆಯನ್ನು ಅನುಭವಿಸುತ್ತದೆ. ಶನಿವಾರಕ್ಕೆ ವಿಲ್ ಒ'ರೂರ್ಕ್ ಹಾಗೂ ಟಾಮ್ ಬ್ಲಂಡೆಲ್ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇಂಗ್ಲೆಂಡ್‌ ತಂಡದ ಸ್ಟಾರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಟಾಪ್‌ ಆರ್ಡರ್‌ ಬ್ಯಾಟರ್‌ಗಳಾದ ಜಾಕ್‌ ಕ್ರಾಲಿ (17), ಬೆನ್ ಡಕೆಟ್‌ (0), ಜಾಕಬ್‌ ಬೆಥೆಲ್‌ (16), ಭರವಸೆಯ ಆಟಗಾರ ಜೋ ರೂಟ್‌ (3) ರನ್‌ ಕಲೆ ಹಾಕುವಲ್ಲಿ ವಿಫಲರಾದರು. 43 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಓಲಿ ಪೋಪ್‌ ಹಾಗೂ ಭರವಸೆಯ ಬ್ಯಾಟರ್‌ ಹ್ಯಾರಿ ಬ್ರೂಕ್‌ ಆಧಾರವಾದರು. ಓಲಿ ಪೋಪ್‌ 159 ಎಸೆತಗಳಲ್ಲಿ 174 ರನ್‌ ಸಿಡಿಸಿ ತಂಡಕ್ಕೆ ಆಧಾರವಾಯಿತು.

NZ vs ENG Harry Brook s Century in Wellington Brings Joy to Delhi Capitals

ಹ್ಯಾರಿ ಬ್ರೂಕ್‌ ಶತಕ

ಇಂಗ್ಲೆಂಡ್ ತಂಡದ ಭರವಸೆಯ ಆಟಗಾರ ಓಲಿ ಪೋಪ್‌ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ 66 ರನ್‌ ಸಿಡಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿ ಬ್ರೂಕ್‌ ಅಮೋಘ ಇನಿಂಗ್ಸ್‌ ಕಟ್ಟಿದರು. ಟೆಸ್ಟ್‌ ಪಂದ್ಯದಲ್ಲಿ ಏಕದಿನ ಶೈಲಿಯಲ್ಲಿ ಬ್ಯಾಟ್ ಮಾಡಿದ ಬ್ರೂಕ್‌ ಅಬ್ಬರಿಸಿದರು. ಇವರು 115 ಎಸೆತಗಳಲ್ಲಿ 11 ಬೌಂಡರಿ, 5 ಸಿಕ್ಸರ್ ಸಹಾಯದಿಂದ 123 ರನ್‌ ಸಿಡಿಸಿದರು.

ಉಳಿದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಪರಿಣಾಮ ಬ್ಯಾಟರ್‌ಗಳು ಜವಾಬ್ದಾರಿಯುತ ಆಟವನ್ನು ಆಡಲಿಲ್ಲ. ಆಲ್‌ರೌಂಡರ್‌ ಕ್ರಿಸ್ ವೋಕ್ಸ್‌ 18 ರನ್‌ ಸಿಡಿಸಿ ತಂಡಕ್ಕೆ ಆಧಾವಾದರು. ಇಂಗ್ಲೆಂಡ್‌ ಪರ ನಾಥನ್ ಸ್ಮಿತ್ 4, ವಿಲ್ ಒ'ರೂರ್ಕ್ 3, ಮ್ಯಾಟ್ ಹೆನ್ರಿ 2 ವಿಕೆಟ್‌ ಕಬಳಿಸಿದರು.

NZ vs ENG Harry Brook s Century in Wellington Brings Joy to Delhi Capitals

ಕಿವೀಸ್‌ಗೆ ಆರಂಭಿಕ ಪೆಟ್ಟು

ನ್ಯೂಜಿಲೆಂಡ್ ತಂಡದ ಟಾಮ್ ಲಾಥಮ್ (17), ಡೆವೊನ್ ಕಾನ್ವೇ (11), ಕೇನ್ ವಿಲಿಯಮ್ಸನ್ (37) ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು. ರಚಿನ್‌ ರವೀಂದ್ರ ಹಾಗೂ ಡೇರಿಲ್ ಮಿಚೆಲ್‌ ಸಿಂಗಲ್ಸ್ ಡಿಜಿಟ್‌ನಲ್ಲಿ ಆಟ ಮುಗಿಸಿದರು.

ಇಂಗ್ಲೆಂಡ್ ತಂಡದ ಮಧ್ಯಮ ಸ್ಟಾರ್ ಆಟಗಾರ ಹ್ಯಾರಿ ಬ್ರೂಕ್‌ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ಹರಾಜಿನಲ್ಲಿ ಖರೀದಿಸಿತು. ಇವರ ಮೂಲ ಬೆಲೆ 2 ಕೋಟಿ ರೂ ಆಗಿತ್ತು. ಆದರೆ ಡೆಲ್ಲಿ ಇವರಿಗೆ 6.25 ಕೋಟಿ ನೀಡಿ ತಂಡಕ್ಕೆ ಬರಮಾಡಿಕೊಂಡಿತು. ಇವರು ಟಿ20 ಕ್ರಿಕೆಟ್‌ನಲ್ಲೂ ಛಾಪು ಮೂಡಿಸಿದ ಆಟಗಾರ. ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ 39 ಟಿ20 ಪಂದ್ಯಗಳಲ್ಲಿ 146ರ ಸ್ಟ್ರೈಕ್‌ ರೇಟ್‌ನಲ್ಲಿ 707 ರನ್‌ ಸಿಡಿಸಿದ್ದಾರೆ. ಈ ವೇಳೆ ಮೂರು ಅರ್ಧಶತಕಗಳು ಸೇರಿವೆ.

Story first published: Friday, December 6, 2024, 16:41 [IST]
Other articles published on Dec 6, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+