NZ vs ENG Test: ಇಂಗ್ಲೆಂಡ ತಂಡಕ್ಕೆ ಆಧಾರವಾದ RCB ಬ್ಯಾಟರ್
ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಣ ಎರಡನೇ ಟೆಸ್ಟ್ ವೆಲಿಂಗ್ಟನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಭರವಸೆಯ ಆರಂಭಿಕ ಆಟಗಾರ ಬೆನ್ ಡಕೆಟ್ ಹಾಗೂ ಜಾಕಬ್ ಬೆಥೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. ಈ ಪ್ಲೇಯರ್‌ಗಳು ವಿದೇಶದಲ್ಲಿ ತಮ್ಮ ತಮ್ಮ ತಂಡದ ಪರ ಅಮೋಘ ಇನಿಂಗ್ಸ್ ಕಟ್ಟಿದರೆ, ಇತ್ತ ಭಾರತದಲ್ಲಿ ಆರ್‌ಸಿಬಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಸೌದಿಯಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಇಂಗ್ಲೆಂಡ್ ತಂಡದ ಯುವ ಆಟಗಾರ ಜಾಕಬ್ ಬೆಥೆಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು. ಇವರಲ್ಲಿನ ಕ್ಷಮತೆಯನ್ನು ಆರ್‌ಸಿಬಿ ಮ್ಯಾನೇಜ್ಮೆಂಟ್ ಗುರುತಿಸಿ ತಂಡದಲ್ಲಿ ಮಣೆ ಹಾಕಿದೆ. ಇವರು ಆರ್‌ಸಿಬಿ ತಂಡ ಸೇರುತ್ತಿದ್ದಂತೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದರು. ಮೊದಲ ಇನಿಂಗ್ಸ್‌ನಲ್ಲಿ ವಿಶೇಷ ಸಾಧನೆ ಮಾಡದ ಇವರು, ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು.

ಈಗ ವೆಲಿಂಗ್ಟನ್‌ನಲ್ಲಿ ನಡೆಯುತ್ತಿರು ಟೆಸ್ಟ್‌ನಲ್ಲೂ ಆರ್‌ಸಿಬಿ ಪ್ಲೇಯರ್ ತಮ್ಮ ಅಮೋಘ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಇವರು, ಆರಂಭಿಕ ಆಟಗಾರ ಬೆನ್ ಡಕೆಟ್ ಅವರೊಂದಿಗೆ ಎರಡನೇ ವಿಕೆಟ್‌ಗೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಇವರ ಸೊಗಸಾದ ಆಟದ ನೆರವಿನಿಂದ ಇಂಗ್ಲೆಂಡ್ ದೊಡ್ಡ ಮೊತ್ತದ ಕನಸು ಕಾಣುಲು ಸಾಕಾರವಾಯಿತು. ಈ ಜೋಡಿ 220 ಎಸೆತಗಳಲ್ಲಿ 187 ರನ್ ಸಿಡಿಸಿತು. ಈ ವೇಳೆ ತಮ್ಮ ಚೊಚ್ಚಲ ಶತಕದ ಹೊಸ್ತಿಲಲ್ಲಿ ಜಾಕಬ್ ಬೆಥೆಲ್ ಎಡವಿದರು.
ಜಾಕಬ್ ಮಿಂಚು
ಜಾಕಬ್ ಅಮೋಘ ಇನಿಂಗ್ಸ್‌ನ 118 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್‌ಗಳು ಸೇರಿದಂತೆ 96 ರನ್ ಬಾರಿಸಿ ತಂಡಕ್ಕೆ ಆಧಾರವಾದರು.ಇವರು ಔಟ್ ಆಗುತ್ತಿದ್ದಂತೆ ಬೆನ್ ಡಕೆಟ್ ಸಹ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 92 ರನ್ ಸಿಡಿಸಿ ಪೆವಿಲಿಯನ್ ಸೇರಿದರು.
4ನೇ ವಿಕೆಟ್‌ಗೆ ಉತ್ತಮ ಜೊತೆಯಾಟ
ನಾಲ್ಕನೇ ವಿಕೆಟ್‌ಗೆ ಅನುಭವಿ ಆಟಗಾರರಾದ ಜೋ ರೂಟ್, ಹ್ಯಾರಿ ಬ್ರೂಕ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 125 ಎಸೆತಗಳಲ್ಲಿ 95 ರನ್ ಸಿಡಿಸಿತು. ಹ್ಯಾರಿ ಬ್ರೂಕ್ 5 ಬೌಂಡರಿ ನೆರವಿನಿಂದ 55 ರನ್ ಸಿಡಿಸಿ ಔಟ್ ಆದರು. ಓಲಿ ಪೋಲ್ 10 ರನ್‌ಗಳಿಗೆ ಆಟ ಮುಗಿಸಿದರು. ಜೋ ರೂಟ್ ಅಜೇಯ 73 ಹಾಗೂ ಬೆನ್ ಸ್ಟೋಕ್ಸ್ ಅಜೇಯ 35 ರನ್ ಸಿಡಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಪಂದ್ಯದ ಚಿತ್ರಣ
ಶನಿವಾರ ಎರಡನೇ ದಿನದಾಟವನ್ನು 5 ವಿಕೆಟ್‌ಗೆ 86 ರನ್‌ಗಳಿಂದ ಮುಂದುವರೆಸಿದ ನ್ಯೂಜಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 125 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ದಿನದಾಟದಂತ್ಯಕ್ಕೆ 5 ವಿಕೆಟ್‌ಗೆ 378 ರನ್ ಕಲೆ ಹಾಕಿದ್ದು, 533 ರನ್‌ಗಳ ಮುನ್ನಡೆ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications