
ಕಿವೀಸ್ ವಿರುದ್ಧ ಅದ್ಭುತ ಪ್ರದರ್ಶನ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಗ್ರ ತಂಡಗಳ ಜೊತೆಗೆ ಆಡುವ ಅವಕಾಶ ಐರ್ಲೆಂಡ್ ತಂಡಕ್ಕೆ ದೊರೆಯುವುದು ಬಹಳ ಕಡಿಮೆ. ಆದರೆ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡಿರುವ ಐರ್ಲೆಂಡ್ ತಂಡ ತಮ್ಮಲ್ಲಿರುವ ಕೌಶಲ್ಯವನ್ನು ಸಮರ್ಥವಾಗಿ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದ ವಿರುದ್ಧದ ಸರಣಿಯಲ್ಲಿ ಅದ್ಭುತ ಹೋರಾಟ ಪ್ರದರ್ಶಿಸಿದ್ದ ಐರ್ಲೆಂಡ್ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿಯೂ ಅದನ್ನು ಪ್ರದರ್ಶಿಸಿದೆ.

ಕಿವೀಸ್ ವಿರುದ್ಧ ಅಮೋಘ ಹೋರಾಟ
ಐರ್ಲೆಂಡ್ ತಂಡ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ನೀಡಿದ ಪ್ರದರ್ಶನ ಎಲ್ಲರ ಗಮನ ಸೆಳೆದಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡ ಕೇವಲ 1 ವಿಕೆಟ್‌ಗಳ ಅಂತರದಿಂದ ಸೋಲು ಅನುಭವಿಸಿದ್ದರೆ ಎರಡನೇ ಪಂದ್ಯದಲ್ಲಿ ಮೂರು ವಿಕೆಟ್‌ಗಳ ಅಂತರದಿಂದ ಶರಣಾಯಿತು. ಇನ್ನು ಮೂರನೇ ಪಂದ್ಯ ಮತ್ತಷ್ಟು ಪೈಪೋಟಿಯಿಂದ ಕೂಡಿತ್ತು. 360 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಐರ್ಲೆಂಡ್ ತಂಡ ಅಮೋಘ ಹೋರಾಟ ಪ್ರದರ್ಶಿಸಿ ಕೇವಲ ಒಂದು ರನ್‌ಗಳ ಅಂತರದಿಂದ ಸೋಲು ಅನುಭವಿಸಿದೆ.

ಐರ್ಲೆಂಡ್ ನಾಯಕನ ಹೇಳಿಕೆ
ಈ ಸೋಲಿನ ಬಳಿಕ ಐರ್ಲೆಂಡ್ ನಾಯಕ ಈ ರೀತಿ ಪ್ರತಿಕ್ರಿಯಿಸಿದ್ದಾರೆ. "ಇದೊಂದು ಅದ್ಭುತವಾದ ಪಂದ್ಯವಾಗಿತ್ತು. ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ ಎಂದು ಭಾವಿಸುತ್ತೇನೆ. ಹೀಗೆ ಸೋಲು ಅನುಭವಿಸುವುದನ್ನು ಅರಗಿಸಿಕೊಳ್ಳುವುದು ಕಷ್ಟ. ಐರಿಶ್ ಜರ್ಸಿಯಲ್ಲಿ ಬಂದ ಎರಡು ಅದ್ಭುತ ಶತಕಗಳು ನಮ್ಮನ್ನು ಉತ್ತಮ ಸ್ಥಾನಕ್ಕೆ ತಂದವು. ಅದರಲ್ಲೂ ಟೆಕ್ಟರ್ ಅವರ ಪ್ರಯತ್ನ ನಮಗೆ ಹೆಮ್ಮೆ ಮೂಡಿಸುತ್ತಿದೆ. ಒಂದು ವಾರದಲ್ಲಿ ಎರಡು ಶತಕಗಳು ದಾಖಲಾಗಿದೆ. ಇಂಥಾ ಪ್ರದರ್ಶನವನ್ನು ನಾವು ಸ್ಥಿರವಾಗಿ ನೀಡಲು ಪ್ರಯತ್ನ ಪಡಲಿದ್ದೇವೆ. ಇಷ್ಟಾಗಿಯೂ ನಾವು ಈ ವರ್ಷದಲ್ಲಿ ಯಾವುದೇ ಏಕದಿನ ಪಂದ್ಯಗಳಲ್ಲಿ ಆಡಲು ಬಾಕಿಯಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ. ಆದರೆ ನಾವು ಕೆಲ ಟಿ20 ಪಂದ್ಯಗಳನ್ನು ಆಡಲಿದ್ದೇವೆ" ಎಂದಿದ್ದಾರೆ ಐರ್ಲೆಂಡ್ ನಾಯಕ ಆಂಡ್ರ್ಯೋ ಬಲ್ಬಿರ್ನೈ.

ಆಡುವ ಬಳಗ ಹೀಗಿದೆ
ಐರ್ಲೆಂಡ್: ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಆಂಡಿ ಮ್ಯಾಕ್‌ಬ್ರೈನ್, ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಜಾರ್ಜ್ ಡಾಕ್ರೆಲ್, ಕ್ರೇಗ್ ಯಂಗ್, ಜೋಶುವಾ ಲಿಟಲ್, ಗರೆಥ್ ಡೆಲಾನಿ, ಗ್ರಹಾಂ ಹ್ಯೂಮ್
ಬೆಂಚ್: ಸಿಮಿ ಸಿಂಗ್, ಮಾರ್ಕ್ ಅದೈರ್, ಸ್ಟೀಫನ್ ದೋಹೆನಿ
ನ್ಯೂಜಿಲೆಂಡ್: ಮಾರ್ಟಿನ್ ಗಪ್ಟಿಲ್, ಫಿನ್ ಅಲೆನ್, ವಿಲ್ ಯಂಗ್, ಟಾಮ್ ಲ್ಯಾಥಮ್ (ನಾಯಕ & ವಿಕೆಟ್ ಕೀಪರ್), ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಬ್ಲೇರ್ ಟಿಕ್ನರ್, ಲಾಕಿ ಫರ್ಗುಸನ್
ಬೆಂಚ್: ಜಾಕೋಬ್ ಡಫಿ, ಆಡಮ್ ಮಿಲ್ನೆ, ಇಶ್ ಸೋಧಿ, ಡೇನ್ ಕ್ಲೀವರ್


Click it and Unblock the Notifications












