NZ vs SA: ಫಿನ್ ಅಲೇನ್ ಸ್ಫೋಟಕ ಶತಕ, ನ್ಯೂಜಿಲೆಂಡ್ ಫೈನಲ್‌ಗೆ: ಸೋತ ಆಫ್ರಿಕಾ
ಕೋಲ್ಕತ್ತಾ: ಭರವಸೆಯ ಆರಂಭಿಕ ಆಟಗಾರರಾದ ಫಿನ್ ಅಲೆನ್ ಹಾಗೂ ಟಿಮ್ ಸಿಫರ್ಟ್ ಅವರು ಬಾರಿಸಿದ ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್ 9 ವಿಕೆಟ್‌ಗಳಿಂದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿತು. ಈ ಮೂಲಕ ನ್ಯೂಜಿಲೆಂಡ್ ಪ್ರಸಕ್ತ ಟಿ20 ವಿಶ್ವಕಪ್‌ನ ಫೈನಲ್‌ಗೆ ಅರ್ಹತೆ ಪಡೆದಿದೆ. ಈ ಗೆಲುವಿನ ನ್ಯೂಜಿಲೆಂಡ್ ಟಿ20 ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಆರ್ಭಟಿಸಿತು. ಇದಕ್ಕೂ ಮೊದಲು ಉಭಯ ತಂಡಗಳು 5 ಪಂದ್ಯಗಳಲ್ಲಿ ಕಾದಾಟ ನಡೆಸಿದ್ದಾಗ ದಕ್ಷಿಣ ಆಫ್ರಿಕಾ ಕೈ ಮೇಲಾಗಿತ್ತು.
ದಕ್ಷಿಣ ಆಫ್ರಿಕಾ ನೀಡಿದ್ದ 170 ರನ್‌ಗಳ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್ ತಂಡದ ಆರಂಭಿಕರು ತಂಡಕ್ಕೆ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈಡನ್ ಗಾರ್ಡನ್ ಪಿಚ್ ಮರ್ಮ ಅರಿತು ಬ್ಯಾಟ್ ಮಾಡಿದ ಫಿನ್ ಅಲೆನ್ ಹಾಗೂ ಟಿಮ್ ಸಿಫರ್ಟ್ ಅವರನ್ನು ಕಟ್ಟಿ ಹಾಕುವುದೇ ದಕ್ಷಿಣ ಆಫ್ರಿಕಾ ತಂಡಕ್ಕೆ ತಲೆನೋವಾದರು. ನ್ಯೂಜಿಲೆಂಡ್ ತಂಡದ ಅನುಭವಿ ಬೌಲರ್‌ಗಳು ತಂಡಕ್ಕೆ ಆಧಾರವಾಗಲಿಲ್ಲ. ಈ ಹಂತದಲ್ಲಿ ನ್ಯೂಜಿಲೆಂಡ್ ಬ್ಯಾಟರ್‌ಗಳ ಕೈ ಮೇಲಾಯಿತು.

ಫಿನ್ ಅಲೆನ್ ಹಾಗೂ ಟಿಮ್ ಸಿಫರ್ಟ್ ಜೊಡಿ ಪವರ್ ಪ್ಲೇನಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಂಡು ರನ್ ವೇಗಕ್ಕೆ ಚುರುಕು ಮುಟ್ಟಿಸಿತು. ಅಲ್ಲದೆ ಮೊದಲ ಆರು ಓವರ್‌ಗಳಲ್ಲಿ ಈ ಜೋಡಿ 84 ರನ್ ಸೇರಿಸಿತು. ಪರಿಣಾಮ ಸ್ಪರ್ಧಾತ್ಮಕ ಮೊತ್ತ ಸುಲಭವಾಗುವಂತೆ ಮಾಡಿತು. ಈ ಜೋಡಿ 9.1 ಓವರ್‌ಗಳಲ್ಲಿ 117 ರನ್ ಸೇರಿಸಿ ಆರ್ಭಟಿಸಿತು. ಈ ಹಂತದಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 58 ರನ್ ಬಾರಿಸಿದ ಟಿಮ್ ಸಿಫರ್ಟ್ ರಬಾಡಾ ಅವರಿಗೆ ವಿಕೆಟ್ ಒಪ್ಪಿಸಿದರು.
ಫಿನ್ ಅಲೇನ್ ಶತಕ
ಎರಡನೇ ವಿಕೆಟ್‌ಗೆ ಫಿನ್ ಅಲೇನ್ ಹಾಗೂ ರಚಿನ್ ರವೀಂದ್ರ ಜೋಡಿ 22 ಎಸೆತಗಳಲ್ಲಿ ಅಜೇಯ 56 ರನ್ ಸಿಡಿಸಿತು. ಆರಂಭಿಕರಾದ ಫಿನ್ ಅಲೆನ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ಕೇವಲ 33 ಎಸೆತಗಳಲ್ಲಿ 10 ಬೌಂಡರಿ, 8 ಸಿಕ್ಸರ್ ನೆರವಿನಿಂದ ಅಜೇಯ 100 ರನ್ ಬಾರಿಸಿ ಮಿಂಚಿದರು. ಇವರು 303ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿ ಅಬ್ಬರಿಸಿದರು.
ನ್ಯೂಜಿಲೆಂಡ್ ಈ ಪಂದ್ಯವನ್ನು 12.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 173 ರನ್ ಸೇರಿಸಿ ಫೈನಲ್‌ಗೆ ಅರ್ಹತೆ ಪಡೆಯಿತು.

ಕಳಪೆ ಆರಂಭ
ದಕ್ಷಿಣ ಆಫ್ರಿಕಾ ತಂಡದ ಆರಂಭ ಕಳಪೆಯಾಗಿತ್ತು. ದಕ್ಷಿಣ ಆಫ್ರಿಕಾ ತಂಡದ ಭರವಸೆಯ ಬ್ಯಾಟರ್‌ಗಳಾದ ಏಡನ್ ಮಾರ್ಕ್ರಾಮ್ (18), ಕ್ವಿಂಟನ್ ಡಿ ಕಾಕ್ (10), ರಯಾನ್ ರಿಕಲ್ಟನ್ (0), ಡೇವಿಡ್ ಮಿಲ್ಲರ್ (6) ರನ್ ಬಾರಿಸಲು ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಡೆವಾಲ್ಡ್ ಬ್ರೆವಿಸ್ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 34 ರನ್ ಬಾರಿಸಿ ಔಟ್ ಅದರು. ದಕ್ಷಿಣ ಆಫ್ರಿಕಾ ತಂಡ 77 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಟ್ರಿಸ್ಟನ್ ಸ್ಟಬ್ಸ್ ಹಾಗೂ ಮಾರ್ಕೊ ಯಾನ್ಸನ್ ಜೋಡಿ 48 ಎಸೆತಗಳಲ್ಲಿ 73 ರನ್ ಸಿಡಿಸಿತು. ಈ ಜೋಡಿಯ ಉತ್ತಮ ಜೊತೆಯಾಟದ ನೆರವಿನಿಂದ ದಕ್ಷಿಣ ಆಫ್ರಿಕಾ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕುವಂತೆ ಮಾಡಿತು. ಸ್ಟಬ್ಸ್ 29 ರನ್‌ಗಳಿಗೆ ಔಟ್ ಆಯಿತು. ಆಲ್‌ರೌಂಡರ್ ಮಾರ್ಕೊ ಯಾನ್ಸನ್ 30 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 55 ರನ್ ಬಾರಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 169 ರನ್ ಸೇರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications