For Quick Alerts
ALLOW NOTIFICATIONS  
For Daily Alerts
 

NZ vs SA: ಕಿವೀಸ್ ವಿರುದ್ಧದ ಟೆಸ್ಟ್‌ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ; 8 ಅನ್‌ಕ್ಯಾಪ್ಡ್ ಆಟಗಾರರಿಗೆ ಒಲಿದ ಲಕ್!

ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‌ಎ) ಮಂಗಳವಾರ, ಜನವರಿ 16ರಂದು ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೆ ನಾಯಕನಾಗಿ ಅನ್‌ಕ್ಯಾಪ್ಡ್ ಬ್ಯಾಟರ್ ನೀಲ್ ಬ್ರಾಂಡ್ ಅವರನ್ನು ನೇಮಿಸಿ ಅಚ್ಚರಿ ಮೂಡಿಸಿದೆ.

ಮುಂದಿನ ತಿಂಗಳು ರೆಡ್ ಬಾಲ್ ಸರಣಿಗಾಗಿ ಕಿವೀಸ್ ಪ್ರವಾಸಕ್ಕೆ ತಮ್ಮ ತಂಡಕ್ಕೆ ಆರಂಭಿಕ ಎಡ್ವರ್ಡ್ ಮೂರ್ ಸೇರಿದಂತೆ ಏಳು ಅನ್‌ಕ್ಯಾಪ್ಡ್ ಆಟಗಾರರನ್ನು ಸೇರಿಸಿಕೊಳ್ಳಲಾಗಿದೆ.

NZ vs SA: South Africa Squad Announced for 2-Match Test Series Against New Zealand

30 ವರ್ಷದ ಆರಂಭಿಕ ಬ್ಯಾಟರ್ ಎಡ್ವರ್ಡ್ ಮೂರ್ ಅವರು ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಗಾಗಿ 15 ಸದಸ್ಯರ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆದ ಎಂಟನೇ ಅನ್‌ಕ್ಯಾಪ್ಡ್ ಆಟಗಾರನಾಗಿದ್ದಾರೆ.

ಎಡ್ವರ್ಡ್ ಮೂರ್ ಅವರು ಪಶ್ಚಿಮ ಪ್ರಾಂತ್ಯಕ್ಕಾಗಿ 117 ಪ್ರಥಮ ದರ್ಜೆ ಪಂದ್ಯಗಳಲ್ಲಿ 7743 ರನ್‌ಗಳನ್ನು ಕಲೆಹಾಕಿದ್ದು, ದೇಶೀಯ ಸರ್ಕ್ಯೂಟ್‌ನಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ.

ಅನ್‌ಕ್ಯಾಪ್ಡ್ ಎಡ್ವರ್ಡ್ ಮೂರ್ ಅವರು ಡಿವಿಷನ್ 1 ಕ್ರಿಕೆಟ್ ಸೌಥ್ ಆಫ್ರಿಕಾ 4-ದಿನ ಸರಣಿಯಲ್ಲಿ 51.75ರ ಸರಾಸರಿಯಲ್ಲಿ 414 ರನ್ ಗಳಿಸುವ ಮೂಲಕ ಈ ಋತುವಿನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ.

ಇದೇ ವೇಳೆ, ಮತ್ತೊಂದು ಕುತೂಹಲಕಾರಿ ಅಂಶದಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಲು ಅನ್‌ಕ್ಯಾಪ್ಡ್ ಆಟಗಾರ ನೀಲ್ ಬ್ರಾಂಡ್ ಅವರನ್ನು ಆಯ್ಕೆ ಮಾಡಲಾಯಿತು.

ಎಡಗೈ ಬ್ಯಾಟರ್ ನೀಲ್ ಬ್ರಾಂಡ್ 1995ರಲ್ಲಿ ಮಾಜಿ ಕಿವೀಸ್ ಕ್ರಿಕೆಟಿಗ ಲೀ ಜರ್ಮನ್ ನಂತರ, ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಪುರುಷರ ತಂಡವನ್ನು ಮುನ್ನಡೆಸುತ್ತಿರುವ ಮೊದಲ ಕ್ರಿಕೆಟಿಗನಾಗಲಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕಾ ತಂಡ

ನೀಲ್ ಬ್ರಾಂಡ್ (ನಾಯಕ), ಡೇವಿಡ್ ಬೆಡಿಂಗ್ಹ್ಯಾಮ್, ರುವಾನ್ ಡಿ ಸ್ವಾರ್ಡ್ಟ್, ಕ್ಲೈಡ್ ಫಾರ್ಟುಯಿನ್, ಜುಬೇರ್ ಹಮ್ಜಾ, ಎಡ್ವರ್ಡ್ ಮೂರ್, ತ್ಶೆಪೊ ಮೊರೆಕಿ, ಮಿಹ್ಲಾಲಿ ಎಂಪೊಂಗ್ವಾನಾ, ಡುವಾನ್ನೆ ಒಲಿವಿಯರ್, ಡೇನ್ ಪ್ಯಾಟರ್ಸನ್, ಕೀಗನ್ ಪೀಟರ್ಸನ್, ಡೇನ್ ಪೀಡ್ಟ್, ರೇನಾರ್ಡ್ ವ್ಯಾನ್ ಟೋಂಡರ್, ಶಾನ್ ವಾನ್ ಬರ್ಗ್, ಖಯಾ ಜೊಂಡೋ.

Story first published: Tuesday, January 16, 2024, 21:21 [IST]
Other articles published on Jan 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+