Sri Lanka vs New Zealand: ಕಿವೀಸ್ ವಿರುದ್ಧ ಮ್ಯಾಥ್ಯೂಸ್ ಶತಕ: WTC ಫೈನಲ್‌ಗೆ ಮುಂದುವರಿದ ಹೋರಾಟ

ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿರುವ ಶ್ರೀಲಂಕಾ ಮೊದಲ ಟೆಸ್ಟ್ ಪಂದ್ಯದಲ್ಲಿ ಪೈಪೋಟಿಯ ಪ್ರದರ್ಶನ ನೀಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಶ್ರೀಲಂಕಾ ಉತ್ತಮ ಪ್ರದರ್ಶನ ನೀಡಿದೆ. ಅದರಲ್ಲೂ ಏಂಜಲೋ ಮ್ಯಾಥ್ಯೂಸ್ ಭರ್ಜರಿ ಶತಕ ಸಿಡಿಸಿದ್ದು ಕಿವೀಸ್ ಪಡೆಗೆ ಸವಾಲಿನ ಗುರಿ ನಿಗದಿಪಡಿಸಿದೆ.
ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶ್ರೀಲಂಕಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ 18 ರನ್‌ಗಳ ಅಲ್ಪ ಹಿನ್ನಡೆ ಅನುಭವಿಸಿತ್ತು. ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ ಆರಂಭದಲ್ಲಿ ಹಿನ್ನಡೆ ಅನುಭವಿಸಿದ ಶ್ರೀಲಂಕಾ ಈ ಹಂತದಲ್ಲಿ ಮುಗ್ಗರಿಸುವ ಸೂಚನೆ ನೀಡಿತು. ಆದರೆ ಮಧ್ಯಮ ಕ್ರಮಾಂಕದ ಆಟಗಾರರು ಶ್ರೀಲಂಕಾ ತಂಡಕ್ಕೆ ಮತ್ತೊಮ್ಮೆ ಆಸರೆಯಾದರು.
14ನೇ ಶತಕ ಸಿಡಿಸಿದ ಮ್ಯಾಥ್ಯೂಸ್: ಈ ಪಂದ್ಯದಲ್ಲಿ ಏಂಜಲೋ ಮ್ಯಾಥ್ಯೂಸ್ ಶ್ರೀಲಂಕಾ ಪರವಾಗಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ನ್ಯೂಜಿಲೆಮಡ್ ಬೌಲಿಂಗ್ ವಿಭಾಗದ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಮ್ಯಾಥ್ಯೂಸ್ ವೃತ್ತಿ ಜೀವನದಲ್ಲಿ 14ನೇ ಟೆಸ್ಟ್ ಶತಕ ಸಿಡಿಸಿದ್ದಾರೆ. ಈ ಮೂಲಕ ಶ್ರೀಲಂಕಾದ ದಿಗ್ಗಜ ಆಟಗಾರ ಸನತ್ ಜಯಸೂರ್ಯ ಸಾಧನೆಯನ್ನು ಸರಿಗಟ್ಟಿದ್ದಾರೆ. ಇವರಿಗೆ ಮತ್ತೊಂದು ತುದಿಯಲ್ಲಿ ಚಾಂಡಿಮಲ್ ಹಾಗೂ ಧನಂಜಯ ಡಿಸಿಲ್ವ ಉತ್ತಮ ಸಾರ್ಥ ನೀಡಿದರು. ಇವರಿಬ್ಬರು ಕ್ರಮವಾಗಿ 42 ಹಾಗೂ 47 ರನ್‌ಗಳ ಕೊಡುಗೆ ನೀಡಿದರು.
ಈ ಮೂಲಕ ಶ್ರೀಲಂಕಾ ಎರಡನೇ ಇನ್ನಿಂಗ್ಸ್‌ನಲ್ಲಿ 302 ರನ್‌ಗಳಿಗೆ ಆಲೌಟ್ ಆಗಿದೆ. ಹೀಗಾಗಿ ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಲು 285 ರನ್‌ಗಳ ಗುರಿ ನಿಗದಿಪಡಿಸಿತು. ಇದನ್ನು ಬೆನ್ನಟ್ಟಲು ಆರಂಭಿಸಿರುವ ನ್ಯೂಜಿಲೆಂಡ್ ತಂಡ ನಾಲ್ಕನೇ ದಿನದಾಟದ ಅಂತ್ಯದಲ್ಲಿ 28 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿದೆ. ಅಂತಿಒಮ ದಿನ 9 ವಿಕೆಟ್‌ಗಳಲ್ಲಿ 257 ರನ್‌ಗಳನ್ನು ಗಳಿಸುವ ಸವಾಲು ನ್ಯೂಜಿಲೆಂಡ್ ತಂಡದ ಮುಂದಿದೆ.
ಇನ್ನು ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡ 355 ರನ್‌ಗಳ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಬಳಿಕ ನ್ಯೂಜಿಲೆಂಡ್ ತಂಡ ಕೂಡ ಅದ್ಭುತ ಪ್ರದರ್ಶನ ನೀಡಿದ್ದು 373 ರನ್‌ಗಳಿಸಿ ಆಲೌಟ್ ಆಗಿತ್ತು. ಹೀಗಾಗಿ ಕೊನೆಯ ದಿನದಾಟ ಮಾತ್ರವೇ ಈಗ ಬಾಕಿಯಿದ್ದು ಯಾವ ತಂಡ ಮೇಲುಗೈ ಸಾಧಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
ಈ ಪಂದ್ಯದಲ್ಲಿ ಶ್ರೀಲಂಕಾ ಗೆಲುವು ಸಾಧಿಸಿದರೆ ಭಾರತದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಕನಸಿಗೆ ಅಡ್ಡಿಯುಂಟು ಮಾಡುವ ಸಾಧ್ಯತೆಯೂ ಇದೆ. ಆದರೆ ಇದು ಸಾಧ್ಯವಾಗಬೇಕಾದರೆ ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಈ ಟೆಸ್ಟ್ ಸರಣಿಯಲ್ಲಿ 2-0 ಅಂತರದ ಗೆಲುವು ಸಾಧಿಸಬೇಕು. ಇತ್ತ ಭಾರತ ಅಹ್ಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡೆ ಮಾತ್ರ ಇದು ಸಾಧ್ಯ.
ನ್ಯೂಜಿಲೆಂಡ್ ಆಡುವ ಬಳಗ: ಟಾಮ್ ಲ್ಯಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ಹೆನ್ರಿ ನಿಕೋಲ್ಸ್, ಡ್ಯಾರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್, ಟಿಮ್ ಸೌಥಿ (ನಾಯಕ), ಮ್ಯಾಟ್ ಹೆನ್ರಿ, ನೀಲ್ ವ್ಯಾಗ್ನರ್, ಬ್ಲೇರ್ ಟಿಕ್ನರ್
ಬೆಂಚ್: ಸ್ಕಾಟ್ ಕುಗ್ಗೆಲೀಜ್ನ್, ವಿಲ್ ಯಂಗ್
ಶ್ರೀಲಂಕಾ ಆಡುವ ಬಳಗ: ಓಷಾಡ ಫೆರ್ನಾಂಡೊ, ದಿಮುತ್ ಕರುಣಾರತ್ನೆ (ನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಲ್, ಧನಂಜಯ ಡಿ ಸಿಲ್ವಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಕಸುನ್ ರಜಿತ, ಪ್ರಭಾತ್ ಜಯಸೂರ್ಯ, ಅಸಿತ ಫೆರ್ನಾಂಡೋ, ಲಹಿರು ಕುಮಾರ
ಬೆಂಚ್: ವಿಶ್ವ ಫೆರ್ನಾಂಡೊ, ಚಾಮಿಕಾ ಕರುಣಾರತ್ನೆ, ರಮೇಶ್ ಮೆಂಡಿಸ್, ಕಮಿಂದು ಮೆಂಡಿಸ್, ನಿಶಾನ್ ಮದುಷ್ಕ, ಮಿಲನ್ ಪ್ರಿಯನಾಥ್ ರತ್ನಾಯಕೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications