NZ Vs SL 2nd Test: ಇನ್ನಿಂಗ್ಸ್ ಸೋಲಿನ ಭೀತಿಯಲ್ಲಿ ಶ್ರೀಲಂಕಾ: ಸರಣಿ ವೈಟ್‌ವಾಶ್ ಮಾಡುವತ್ತ ನ್ಯೂಜಿಲೆಂಡ್

ಶ್ರೀಲಂಕಾ ವಿರುದ್ಧದ ಸರಣಿಯ ಮೊದಲ ಟೆಸ್ಟ್‌ನಲ್ಲಿ ರೋಚಕ ಗೆಲುವು ಕಂಡ ನ್ಯೂಜಿಲೆಂಡ್ ಎರಡನೇ ಟೆಸ್ಟ್‌ನಲ್ಲಿ ಭರ್ಜರಿ ಗೆಲುವಿನ ಸಮೀಪದಲ್ಲಿದೆ. ಶ್ರೀಲಂಕಾ ಮೊದಲನೇ ಇನ್ನಿಂಗ್ಸ್‌ನಲ್ಲಿ 164 ರನ್‌ಗಳಿಗೆ ಆಲೌಟ್ ಮಾಡಿದ ಕಿವೀಸ್ ಪಡೆ ಫಾಲೋಆನ್ ಹೇರಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಮೂರನೇ ದಿನದಾಂತ್ಯಕ್ಕೆ 113 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿರುವ ಶ್ರೀಲಂಕಾ ಇನ್ನೂ 303 ರನ್‌ಗಳ ಹಿನ್ನಡೆಯಲ್ಲಿದೆ. ಇನ್ನೂ ಎರಡು ದಿನದಾಟ ಬಾಕಿ ಇದ್ದು ನ್ಯೂಜಿಲೆಂಡ್ ಸರಣಿ ವೈಟ್‌ವಾಶ್ ಮಾಡುವ ಉತ್ಸಾಹದಲ್ಲಿದೆ.
ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಅಂಗಳದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ಬ್ಯಾಟರ್ ಗಳು ಸಂಪೂರ್ಣವಾಗಿ ವಿಫಲವಾದರು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 580 ರನ್‌ಗಳನ್ನು ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿತ್ತು.
ಕೇನ್ ವಿಲಿಯಮ್ಸನ್ ಮತ್ತು ಹೆನ್ರಿ ನಿಕೋಲಸ್ ಅಮೋಘ ದ್ವಿಶತಕ ಸಿಡಿಸುವ ಮೂಲಕ ಮಿಂಚಿದ್ದರು. ಕೇನ್ ವಿಲಿಯಮ್ಸನ್ 215 ರನ್ ಗಳಿಸಿದರೆ, ಹೆನ್ರಿ ನಿಕೋಲಸ್ ಅಜೇಯ 200 ರನ್ ಗಳಿಸಿದರು. ಈ ಮೂಲದ ಮೊದಲ ಇನ್ನಿಂಗ್ಸ್‌ನಲ್ಲೇ ನ್ಯೂಜಿಲೆಂಡ್ ದೊಡ್ಡ ಮೊತ್ತ ಗಳಿಸಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಕುಸಿದ ಶ್ರೀಲಂಕಾ
ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನ್ಯೂಜಿಲೆಂಡ್‌ಗೆ ಯಾವ ಹಂತದಲ್ಲೂ ಸವಾಲಾಕಲಿಲ್ಲ. ನಾಯಕ ದಿಮುತ್ ಕರುಣರತ್ನೆ 89 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವೊಬ್ಬ ಬ್ಯಾಟರ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಕೇವಲ ಮೂವರು ಆಟಗಾರರು ಮಾತ್ರ ಎರಡಂಕಿ ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ವಿಫಲವಾದರು.
ಕರುಣರತ್ನೆ 89, ಚಾಂಡಿಮಾಲ್ 37, ನಿಶಾನ್ ಮಧುಶ್ಕಾ 19 ರನ್ ಗಳಿಸಿದರು. ಮ್ಯಾಟ್ ಹೆನ್ರಿ ಮತ್ತು ಮಿಚೆಲ್ ಬ್ರೇಸ್‌ವೆಲ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರು. ನಾಯಕ ಟಿಮ್ ಸೌಥೀ, ಡೌಗ್ ಬ್ರೇಸ್‌ವೆಲ್ ಮತ್ತು ಬೇಲ್ ಟಿಕ್ನರ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

ಇನ್ನಿಂಗ್ಸ್ ಸೋಲಿನ ಭೀತಿ
ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ತಂಡವನ್ನು 164 ರನ್‌ಗಳಿಗೆ ಆಲೌಟ್ ಮಾಡಿದ ನ್ಯೂಜಿಲೆಂಡ್ ಫಾಲೊಆನ್ ಹೇರಿತು. ನಂತರ ಮತ್ತೆ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು, 113 ರನ್ ಗಳಿಸಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ 113 ರನ್ ಗಳಿಸಿದ ಬಳಿಕವೂ ಶ್ರೀಲಂಕಾ ಇನ್ನೂ 303 ರನ್‌ಗಳ ಹಿನ್ನಡೆಯಲ್ಲಿದೆ. ದಿಮುತ್ ಕರುಣರತ್ನೆ ಎರಡನೇ ಇನ್ನಿಂಗ್ಸ್‌ನಲ್ಲೂ 51 ರನ್ ಗಳಿಸುವ ಮೂಲಕ ಆಸರೆಯಾದರು. ಕುಶಾಲ್ ಮೆಂಡಿಸ್ ಅಜೇಯ 50 ರನ್ ಗಳಿಸಿದ್ದು ನಾಲ್ಕನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ, ಏಂಜಲೋ ಮ್ಯಾಥ್ಯೂಸ್ ಅಜೇಯ 1 ರನ್ ಗಳಿಸಿ ವಿಕೆಟ್ ಕಾಪಾಡಿಕೊಂಡಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಹೊರಕ್ಕೆ
ಮೊದಲನೇ ಟೆಸ್ಟ್‌ನಲ್ಲಿ ಸೋತ ಬಳಿಕ ಶ್ರೀಲಂಕಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಿಂದ ಹೊರಬಿದ್ದಿದೆ. ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್‌ಗೆ ಅರ್ಹತೆ ಪಡೆದುಕೊಂಡಿವೆ. ಸರಣಿ ಸೋಲನ್ನು ತಪ್ಪಿಸಿಕೊಳ್ಳಲು ಶ್ರೀಲಂಕಾಗೆ ಅವಕಾಶ ಇತ್ತಾದರೂ, ಎರಡನೇ ಟೆಸ್ಟ್‌ನಲ್ಲಿ ಕಳಪೆ ಆಟವಾಡುವ ಮೂಲಕ ಸೋಲಿನ ಭೀತಿಯಲ್ಲಿದೆ. ಈ ಪಂದ್ಯದಲ್ಲಿ ಗೆದ್ದು ಸರಣಿ ವೈಟ್ ವಾಶ್ ಮೂಡುವ ಉತ್ಸಾಹದಲ್ಲಿದೆ ಕಿವೀಸ್ ಪಡೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications