Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶ್ರೀಲಂಕಾ ವಿರುದ್ಧದ ಸರಣಿಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್

NZ vs SL: New Zealand Announce 13 members Squad For 2 match test series against Sri Lanka

ನ್ಯೂಜಿಲೆಂಡ್ ಪ್ರವಾಸ ಕೈಗೊಂಡು ಶ್ರೀಲಂಕಾ ಕಿವೀಸ್ ತಂಡದ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಈ ಸರಣಿಗೆ ಆತಿಥೇಯ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಮಾರ್ಚ್ 9ರಿಂದ ನಡೆಯಲಿರುವ ಟೆಸ್ಟ್ ಸರಣಿ ಇದಾಗಿದ್ದು ಪ್ರಸ್ತುತ ನಡೆಯುತ್ತಿರುವ ಟೆಸ್ಟ್ ಚಾಂಪಿಯನ್ ಶಿಪ್ ಆವೃತ್ತಿಯ ಕಡೇಯ ಸರಣಿ ಇದಾಗಿದೆ.

ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ರೋಚಕ ಗೆಲುವು ಸಾಧಿಸಿತು. ಹಾಗಾಗಿ ಗೆಲುವಿನ ಕಾಂಬಿನೇಶನ್ ಉಳಿಸಿಕೊಂಡೇ ತಂಡವನ್ನು ಆಯ್ಕೆ ಮಾಡಲಾಗಿದೆ ಎಂಬುದು ಗಮನಾರ್ಹ ಅಂಶ. ಇಂಗ್ಲೆಂಡ್ ವಿರುದ್ಧದ ಎರಡು ಪಮದ್ಯಗಳ ಟೆಸ್ಟ್ ಸರಣಿಯನ್ನು ನ್ಯೂಜಿಲೆಂಡ್ 1-1 ಅಂತರದಿಂದ ಸಮಬಲಗೊಳಿಸಿತ್ತು.

ಇಂಗ್ಲೆಂಡ್ ವಿರುದ್ಧ ವೆಲ್ಲಿಂಗ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಒಂದು ರನ್ ಅಂತರದಿಂದ ಗೆದ್ದ ನ್ಯೂಜಿಲೆಂಡ್ ಐತಿಹಾಸಿಕ ಸಾಧನೆ ಮಾಡಿತ್ತು. ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಫಾಲೋ ಆನ್‌ಗೆ ತುತ್ತಾಗಿಯೂ ಗೆಲುವು ಸಾಧಿಸಿದ ಕೇವಲ ನಾಲ್ಕನೇ ತಂಡ ಎನಿಸಿಕೊಂಡಿತು.

ನ್ಯೂಜಿಲೆಂಡ್ ತಂಡದಲ್ಲಿ ಅನುಭವಿ ಆಟಗಾರ ಕೇನ್ ವಿಲಿಯಮ್ಸನ್ ಫಾರ್ಮ್ ಕಂಡುಕೊಂಡಿದ್ದು ತವರಿನಲ್ಲಿ ಲಂಕಾ ವಿರುದ್ಧವೂ ಇಂಚಲು ಸಿದ್ಧವಾಗಿದ್ದಾರೆ. ಇವರಿಗೆ ಟಾಮ್ ಲ್ಯಾಥಮ್, ಹೆನ್ರಿ ನಿಕೋಲ್ಸ್, ಡೆವೊನ್ ಕಾನ್ವೇ, ಡ್ಯಾರಿಲ್ ಮಿಚೆಲ್ ಮತ್ತು ವಿಲ್ ಯಂಗ್ ಬ್ಯಾಟಿಂಗ್ ಲೈನ್-ಅಪ್‌ನಲ್ಲಿ ಸಾಥ್ ನೀಡಲಿದ್ದಾರೆ. ಮೈಕೆಲ್ ಬ್ರೇಸ್‌ವೆಲ್ ಏಕೈಕ ಸ್ಪಿನ್ನರ್ ಆಗಿ ಮುಂದುವರಿಯಲಿದ್ದು ಟಾಮ್ ಬ್ಲಂಡೆಲ್ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯಲಿದ್ದಾರೆ. ಇನ್ನು ನಾಯಕ ಟಿಮ್ ಸೌಥಿ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದು ನೀಲ್ ವ್ಯಾಗ್ನರ್, ಮ್ಯಾಟ್ ಹೆನ್ರಿ, ಬ್ಲೇರ್ ಟಿಕ್ನರ್ ಮತ್ತು ಸ್ಕಾಟ್ ಕುಗ್ಗೆಲೆಯ್ನ್ ತಂಡದಲ್ಲಿದ್ದಾರೆ.

ಇನ್ನು ನ್ಯೂಜಿಲೆಂಡ್ ತಂಡ 2021ರ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು. ಆದರೆ ಈ ಬಾರಿಯ ಆವೃತ್ತಿಯಲ್ಲಿ ಫೈನಲ್ ಸ್ಪರ್ಧೆಯಿಂದ ಕಿವೀಸ್ ಪಡೆ ಹೊರಬಿದ್ದಿದೆ. ಇತ್ತ ಶ್ರೀಲಂಕಾ ತಂಡಕ್ಕೆ ಅವಕಾಶವಿದ್ದು ಈ ಸರಣಿಯ ಎರಡು ಪಂದ್ಯಗಳಲ್ಲಿಯೂ ಗೆದ್ದರೆ ಸಣ್ಣ ಅವಕಾಶವೊಂದು ಇರಲಿದೆ. ಆದರೆ ಇದಕ್ಕೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಮೂಲಕ ಸರಣಿ ಗೆಲ್ಲಬೇಕು.

ನ್ಯೂಜಿಲೆಂಡ್ ತಂಡ: ಟಿಮ್ ಸೌಥಿ (ನಾಯಕ), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಡ್ಯಾರಿಲ್ ಮಿಚೆಲ್, ಬ್ಲೇರ್ ಟಿಕ್ನರ್, ನೀಲ್ ವ್ಯಾಗ್ನರ್, ಸ್ಕಾಟ್ ಕುಗ್ಗೆಲೀಜ್ನ್, ಹೆನ್ರಿ ನಿಕೋಲ್ಸ್, ಕೇನ್ ವಿಲಿಯಮ್ಸನ್, ವಿಲ್ ಯಂಗ್

Story first published: Thursday, March 2, 2023, 16:27 [IST]
Other articles published on Mar 2, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+