For Quick Alerts
ALLOW NOTIFICATIONS  
For Daily Alerts
 

NZ Vs SL ODI: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಬಲಿಷ್ಠ ತಂಡವನ್ನು ಹೆಸರಿಸಿದ ನ್ಯೂಜಿಲೆಂಡ್

NZ Vs SL ODI: Tom Latham to Lead New Zealands ODI Squad Against Sri Lanka with Potential Debutants

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗಾಗಿ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಟಾಮ್ ಲಾಥಮ್ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಅಲ್ಲದೆ ಇಬ್ಬರು ಹೊಸ ಆಟಗಾರರಿಗೆ ಅವಕಾಶ ನೀಡಲಾಗಿದೆ.

ನ್ಯೂಜಿಲೆಂಡ್ ಸದ್ಯ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿದ್ದು, 2 ಪಂದ್ಯಗಳ ಟೆಸ್ಟ್ ಸರಣಿ ನಂತರ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಮೂರು ಪಂದ್ಯ ಟಿ20 ಸರಣಿಯನ್ನು ಆಡಲಿದೆ. ಮಾರ್ಚ್ 25ರಿಂದ ಏಕದಿನ ಸರಣಿ ಆರಂಭವಾಗಲಿದೆ.

ಕ್ಯಾಂಟರ್ಬರಿಯ ಚಾಡ್ ಬೋವ್ಸ್ ಮತ್ತು ಆಕ್ಲೆಂಡ್ ಏಸ್ ಬೆನ್ ಲಿಸ್ಟರ್ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗಾಗಿ ತಂಡಕ್ಕೆ ಆಯ್ಕೆಯಾದ ಯುವ ಆಟಗಾರರಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಡಲು ಸಜ್ಜಾಗಿದ್ದಾರೆ. ಚಾಡ್ ಬೋವ್ಸ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಈ ಋತುವಿನಲ್ಲಿ 373 ರನ್ ಗಳಿಸಿದ್ದು, ಟಿ20 ಮಾದರಿಯಲ್ಲಿ 39.89 ಸರಾಸರಿಯೊಂದಿಗೆ 359 ರನ್ ಗಳಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಆಟಗಾರರು ಟೆಸ್ಟ್ ಸರಣಿ ನಂತರ ತಂಡದಿಂದ ಬಿಡುಗಡೆ ಮಾಡಲಾಗುತ್ತದೆ. ಅವರ ಬದಲಾಗಿ ಇತರೆ ಆಟಗಾರರು ತಂಡವನ್ನು ಸೇರಿಕೊಳ್ಳಲಿದ್ದಾರೆ. ಕೇನ್ ವಿಲಿಯಮ್ಸನ್, ಟಿಮ್ ಸೌಥಿ, ಡೆವೊನ್ ಕಾನ್ವೇ, ಮಿಚೆಲ್ ಸ್ಯಾಂಟ್ನರ್ ಸೇರಿದಂತೆ ಪ್ರಮುಖ ಆಟಗಾರರು ಭಾರತಕ್ಕೆ ಪ್ರಯಾಣಿಸಲಿದ್ದಾರೆ.

NZ Vs SL ODI: Tom Latham to Lead New Zealands ODI Squad Against Sri Lanka with Potential Debutants

ಮೊದಲ ಏಕದಿನ ಪಂದ್ಯದ ನಂತರ ಹಲವರು ಭಾರತಕ್ಕೆ

ಮೊದಲ ಏಕದಿನ ಪಂದ್ಯವನ್ನಾಡಿದ ನಂತರ ಹಲವು ಆಟಗಾರರು ಭಾರತಕ್ಕೆ ಪ್ರಯಾಣ ಮಾಡಲಿದ್ದು, ಎರಡು ಮತ್ತು ಮೂರನೇ ಏಕದಿನ ಪಂದ್ಯದಲ್ಲಿ ಯುವ ಆಟಗಾರರು ಅವಕಾಶ ಪಡೆಯಲಿದ್ದಾರೆ. ಫಿನ್ ಅಲೆನ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು), ಲಾಕಿ ಫರ್ಗುಸನ್ (ಕೋಲ್ಕತ್ತಾ ನೈಟ್ ರೈಡರ್ಸ್) ಮತ್ತು ಗ್ಲೆನ್ ಫಿಲಿಪ್ಸ್ (ಸನ್‌ರೈಸರ್ಸ್ ಹೈದರಾಬಾದ್) ಮಾರ್ಚ್ 25ರಂದು ನಡೆಯುವ ಮೊದಲನೇ ಪಂದ್ಯದ ನಂತರ ಭಾರತಕ್ಕೆ ಪ್ರಯಾಣ ಮಾಡಲಿದ್ದಾರೆ.

ಪ್ರಮುಖ ಆಟಗಾರರು ತಂಡದಿಂದ ಬಿಡುಗಡೆಯಾದ ನಂತರ ಮಾರ್ಕ್ ಚಾಪ್ಮನ್, ಬೆನ್ ಲಿಸ್ಟರ್ ಮತ್ತು ಹೆನ್ರಿ ನಿಕೋಲ್ಸ್ ಅವರು ಹ್ಯಾಗ್ಲೆ ಓವಲ್‌ನಲ್ಲಿ ಎರಡನೇ ಏಕದಿನ ಪಂದ್ಯಕ್ಕೆ ಮುನ್ನ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮತ್ತೊಂದು ವೈಶಿಷ್ಟ್ಯವೆಂದರೆ ಟಾಮ್ ಬ್ಲಂಡೆಲ್ ಮತ್ತು ವಿಲ್ ಯಂಗ್ ಅಂತರಾಷ್ಟ್ರೀಯ ವೈಟ್ ಬಾಲ್ ಕ್ರಿಕೆಟ್‌ಗೆ ಮರಳಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯು ಹಲವಾರು ಆಟಗಾರರಿಗೆ ಅವಕಾಶ ಒದಗಿಸುತ್ತದೆ ಎಂದು ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ.

NZ Vs SL ODI: Tom Latham to Lead New Zealands ODI Squad Against Sri Lanka with Potential Debutants

ನ್ಯೂಜಿಲೆಂಡ್ ಏಕದಿನ ತಂಡ

ಟಾಮ್ ಲಾಥಮ್ (ನಾಯಕ), ಟಾಮ್ ಬ್ಲಂಡೆಲ್, ಚಾಡ್ ಬೋವ್ಸ್, ಮೈಕೆಲ್ ಬ್ರೇಸ್ವೆಲ್, ಮ್ಯಾಟ್ ಹೆನ್ರಿ, ಡೇರಿಲ್ ಮಿಚೆಲ್, ಹೆನ್ರಿ ಶಿಪ್ಲಿ, ಇಶ್ ಸೋಧಿ, ಬ್ಲೇರ್ ಟಿಕ್ನರ್, ವಿಲ್ ಯಂಗ್. (ಮೂರು ಪಂದ್ಯಗಳಿಗೆ ಲಭ್ಯ)

ಗ್ಲೆನ್ ಫಿಲಿಪ್ಸ್, ಲಾಕಿ ಫರ್ಗುಸನ್, ಫಿನ್ ಅಲೆನ್ (ಮೊದಲ ಪಂದ್ಯಕ್ಕೆ ಮಾತ್ರ)

ಹೆನ್ರಿ ನಿಕೋಲ್ಸ್ , ಬೆನ್ ಲಿಸ್ಟರ್, ಮಾರ್ಕ್ ಚಾಪ್ಮನ್ (2 ಮತ್ತು 3 ನೇ ಏಕದಿನ ಪಂದ್ಯ).

Story first published: Monday, March 13, 2023, 23:10 [IST]
Other articles published on Mar 13, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+