NZ vs SL: 2023ರ ವಿಶ್ವಕಪ್‌ನಲ್ಲಿ ಅರ್ಧಶತಕದೊಂದಿಗೆ ದಾಖಲೆ ನಿರ್ಮಿಸಿದ ಶ್ರೀಲಂಕಾದ ಕುಸಲ್ ಪೆರೇರಾ!
ಗುರುವಾರ, ನವೆಂಬರ್ 9ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಏಕದಿನ ವಿಶ್ವಕಪ್‌ನ 41ನೇ ಪಂದ್ಯದಲ್ಲಿ ಶ್ರೀಲಂಕಾ ತಂಡವು ನ್ಯೂಜಿಲೆಂಡ್ ತಂಡವನ್ನು ಎದುರಿಸುತ್ತಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಮತ್ತೊಮ್ಮೆ ಕಳಪೆ ಆರಂಭ ಕಂಡಿತು. ತಂಡದ ಮೊತ್ತ 3 ರನ್‌ಗಳಾಗುವಷ್ಟರಲ್ಲಿ ಪ್ರಮುಖ ಬ್ಯಾಟರ್ ಪಾಥುಮ್ ನಿಸ್ಸಾಂಕ ಅವರ ವಿಕೆಟ್ ಕಳೆದುಕೊಂಡಿತು. ಸದ್ಯ ತಂಡದ ಮೊತ್ತ 11 ಓವರ್‌ಗಳಲ್ಲಿ 78 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿದೆ.

ಆದಾಗ್ಯೂ, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾದ ಆರಂಭಿಕ ಬ್ಯಾಟರ್ ಕುಸಾಲ್ ಪೆರೇರಾ ಅವರು ಸದ್ಯ ನಡೆಯುತ್ತಿರುವ 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಅತಿ ವೇಗದ ಅರ್ಧಶತಕ ದಾಖಲಿಸಿದರು.
ಎಡಗೈ ಬ್ಯಾಟರ್ ಕುಸಾಲ್ ಪೆರೇರಾ 22 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ತಲುಪಿದರು. ಅಂತಿಮವಾಗಿ, ಕುಸಾಲ್ ಪೆರೆರಾ 28 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಒಳಗೊಂಡ 51 ರನ್ ಗಳಿಸಿದ್ದಾಗ ಲಾಕಿ ಫರ್ಗುಸನ್ ಅವರಿಗೆ ವಿಕೆಟ್ ಒಪ್ಪಿಸಿದರು.
ಗುರುವಾರ ಕುಸಾಲ್ ಪೆರೇರಾ ಅವರ ಅರ್ಧಶತಕಕ್ಕೂ ಮುನ್ನ, ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಮತ್ತು ಶ್ರೀಲಂಕಾದ ಕುಸಾಲ್ ಮೆಂಡಿಸ್ ಸದ್ಯ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ವೇಗದ ಅರ್ಧಶತಕಗಳ ದಾಖಲೆಯನ್ನು ಹೊಂದಿದ್ದರು. ಅವರು ನ್ಯೂಜಿಲೆಂಡ್ ವಿರುದ್ಧ ಟ್ರಾವಿಸ್ ಹೆಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಕುಸಾಲ್ ಮೆಂಡಿಸ್ ಕ್ರಮವಾಗಿ 25 ಎಸೆತಗಳಲ್ಲಿ ಅರ್ಧಶತಕಗಳನ್ನು ಗಳಿಸಿದರು.

ಇದೇ ವೇಳೆ ಕುಸಾಲ್ ಪೆರೇರಾ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಶ್ರೀಲಂಕಾ ತಂಡದ ಪರ ಜಂಟಿ ಎರಡನೇ ವೇಗದ ಅರ್ಧಶತಕವನ್ನು ಗಳಿಸಿದರು. 2015ರಲ್ಲಿ ಸ್ಕಾಟ್ಲೆಂಡ್ ವಿರುದ್ಧ ಏಂಜೆಲೊ ಮ್ಯಾಥ್ಯೂಸ್ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರೆ, ಶ್ರೀಲಂಕಾದ ಮತ್ತೊಬ್ಬ ಬ್ಯಾಟರ್ ದಿನೇಶ್ ಚಾಂಡಿಮಾಲ್ 22 ಎಸೆತಗಳಲ್ಲಿ ವಿಶ್ವಕಪ್ ಅರ್ಧಶತಕ ಬಾರಿಸಿದ್ದರು.
ಕುಸಾಲ್ ಪೆರೇರಾ ಇದೀಗ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅತಿ ವೇಗದ ಅರ್ಧಶತಕವನ್ನು ಗಳಿಸಿದ ಬ್ಯಾಟರ್ ಎನಿಸಿದರು. ಹಿಂದಿನ ದಾಖಲೆಯನ್ನು ಕೆನಡಾದ ಜಾನ್ ಡೇವಿಸನ್ ಹೊಂದಿದ್ದರು. ಅವರು 2007ರ ವಿಶ್ವಕಪ್ ಆವೃತ್ತಿಯಲ್ಲಿ ಗ್ರೋಸ್ ಐಲೆಟ್‌ನಲ್ಲಿ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.
ಶ್ರೀಲಂಕಾ ಪರ ವಿಶ್ವಕಪ್‌ನಲ್ಲಿ ಅತಿ ವೇಗದ ಅರ್ಧಶತಕ (ಎಸೆತಗಳಿಂದ)
20 - ಏಂಜೆಲೊ ಮ್ಯಾಥ್ಯೂಸ್ vs ಸ್ಕಾಟ್ಲೆಂಡ್, ಹೋಬರ್ಟ್, 2015
22 - ಕುಸಾಲ್ ಪೆರೆರಾ vs ನ್ಯೂಜಿಲೆಂಡ್, ಬೆಂಗಳೂರು, 2023
22 - ದಿನೇಶ್ ಚಾಂಡಿಮಲ್ vs ಆಸ್ಟ್ರೇಲಿಯಾ, ಸಿಡ್ನಿ, 2015
25 - ಕುಸಲ್ ಮೆಂಡೀಸ್ vs ದಕ್ಷಿಣ ಆಫ್ರಿಕಾ, ದೆಹಲಿ, 2023
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications