Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಿವೀಸ್ ವಿರುದ್ಧ 350 ರನ್ ಚೇಸ್ ಮಾಡಿದ ಕ್ರಿಕೆಟ್ ಜನಕರು

ನಾಟಿಂಗ್ಹ್ಯಾಮ್, ಜೂ. 18: ಕ್ರಿಕೆಟ್ ಜನಕ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಅವಿಸ್ಮರಣೀಯ ಗೆಲುವು ದಾಖಲಿಸಿದೆ. 350 ರನ್ ಗಳ ಬೃಹತ್ ಮೊತ್ತವಮನ್ನು ಚೇಸ್ ಮಾಡಿದ ಇಂಗ್ಲೆಂಡ್ ಸರಣಿಯಲ್ಲಿ ಸಮಬಲ ಸಾಧಿಸಿದೆ.

ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಅವರ ಭರ್ಜರಿ ಶತಕ (82 ಎಸೆತಗಳಲ್ಲಿ 113 ರನ್) ಮತ್ತು ಜೋಯ್ ರೂಟ್ (97 ಎಸೆತದಲ್ಲಿ 106) ಇಂಗ್ಲೆಂಡ್ ತಂಡಕ್ಕೆ ಜಯ ತಂದು ಕೊಟ್ಟಿತು. ಆರಂಭಿಕರಾದ ಜಾನ್ಸನ್ ರಾಯ್ ಮತ್ತು ಹೇಲ್ಸ್ ಅವರ ಸ್ಫೋಟಕ ಆಟ ಇಂಗ್ಲೆಂಡ್ ಮಧ್ಯಮ ಕ್ರಮಾಂಕದ ಆಟಗಾರರ ಮೇಲೆ ಹೆಚ್ಚಿನ ಒತ್ತಡ ಉಂಟಾಗದಂತೆ ಮಾಡಿತು.[ಭಾರತ-ಬಾಂಗ್ಲಾದೇಶ ಏಕದಿನ ಕ್ರಿಕೆಟ್ ಸರಣಿಗೆ ಗೈಡ್]

|

cricket

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಕಿವೀಸ್ ಕೇನ್ ವಿಲಿಯಮ್ಸನ್ (70 ಚೆಂಡುಗಳಲ್ಲಿ 90) ಮಾರ್ಟಿನ್ ಗುಪ್ಟಿಲ್ ಮತ್ತು ಇಲಿಯಟ್ ಅವರ ಅರ್ಧಶತಕ ಮತ್ತು ಮಿಚೆಲ್ ಸಾಟ್ನರ್ (19 ಎಸೆತ 44 ರನ್) ಸ್ಫೋಟಕ ಆಟದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 349 ರನ್ ಕಲೆ ಹಾಕಿತ್ತು.[ಕಿವೀಸ್ ಮಣಿಸಿ ಇತಿಹಾಸ ನಿರ್ಮಿಸಿದ ಇಂಗ್ಲೆಂಡ್]

ಸರಣಿ ಸದ್ಯ 2-2 ರಿಂದ ಸಮಬಲವಾಗಿದ್ದು ಜೂನ್ 20 ರಂದು ಅಂತಿಮ ಪಂದ್ಯ ನಡೆಯಲಿದೆ. ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ ಪಾಲಿಗೆ ಇದು ಅತಿ ಹೆಚ್ಚು ರನ್ ಚೇಸ್ ಆಗಿದೆ. ಇದಕ್ಕೂ ಮೊದಲು ಪಾಕಿಸ್ತಾನದ ವಿರುದ್ಧ 306 ರನ್ ಚೇಸ್ ಮಾಡಿದ್ದು ಇಂಗ್ಲೆಂಡ್ ದಾಖಲೆಯಾಗಿತ್ತು. ಆಸ್ಟ್ರೇಲಿಯಾ ವಿರುದ್ಧ 434 ರನ್ ಚೇಸ್ ಮಾಡಿರುವ ದಕ್ಷಿಣ ಆಫ್ರಿಕಾ(438) ದಾಖಲೆಯನ್ನು ತನ್ನ ಹೆಸರಿನಲ್ಲಿ ಇರಿಸಿಕೊಂಡಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+