ODI rankings: ಸ್ಮೃತಿ ಮಂಧಾನ, ಜೂಲನ್ ಗೋಸ್ವಾಮಿಗೆ ಮೊದಲ ಸ್ಥಾನ

ನವದೆಹಲಿ, ಮಾರ್ಚ್ 22: ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ವೇಗಿ ಜೂಲನ್ ಗೋಸ್ವಾಮಿ ಅವರು ಐಸಿಸಿ ಶುಕ್ರವಾರ (ಮಾರ್ಚ್ 22) ಪ್ರಕಟಿಸಿರುವ ನೂತನ ಏಕದಿನ ರ್ಯಾಂಕಿಂಗ್‌ನಲ್ಲಿ ಕ್ರಮವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಗ್ರ ಸ್ಥಾನದಲ್ಲೇ ಮುಂದುವರೆದಿದ್ದಾರೆ.
ಕಳೆದ ತಿಂಗಳು ಮುಂಬೈನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮಂಧಾನ ಬ್ಯಾಟಿಂಗ್‌ನಲ್ಲಿ ನಂ.1 ಸ್ಥಾನದಲ್ಲಿ ಗಟ್ಟಿಯಾಗಿದ್ದಾರೆ. ಮಂಧಾನ ಒಟ್ಟು 797 ರೇಟಿಂಗ್ ಪಾಯಿಂಟ್ಸ್‌ನೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.
ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ಇನ್ನುಳಿದ ಮೊದಲ ಐದು ಸ್ಥಾನಗಳಲ್ಲಿ ಕ್ರಮವಾಗಿ ಆಸ್ಟ್ರೇಲಿಯಾದ ಎಲ್ಲೈಸ್ ಪೆರ್ರಿ (756 ರೇಟಿಂಗ್), ನ್ಯೂಜಿಲ್ಯಾಂಡ್‌ನ ಆಮಿ ಸಟ್ಟರ್ವೈಟ್, ಭಾರತದ ಮಿಥಾಲಿ ರಾಜ್, ವೆಸ್ಟ್ ಇಂಡೀಸ್‌ನ ಸ್ಟೆಫಾನಿ ಟೇಲರ್ ಇದ್ದಾರೆ.
ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ಭಾರತದ ಜೂಲನ್ ಗೋಸ್ವಾಮಿ 730 ರೇಟಿಂಗ್ ಪಾಯಿಂಟ್ಸ್‌ನೊಂದಿಗೆ ಮೊದಲ ಸ್ಥಾನದಲ್ಲಿ, ಆಸ್ಟ್ರೆಲಿಯಾದ ಜೆಸ್ ಜೊನಾಸ್ಸೆನ್ (723 ರೇಟಿಂಗ್), ಪಾಕಿಸ್ತಾನದ ಸಾನ ಮೀರ್, ಆಸ್ಟ್ರೇಲಿಯಾದ ಮೇಗನ್ ಸ್ಕಟ್ ಮತ್ತು ಭಾರತದ ಶಿಖಾ ಪಾಂಡೆ ಮೊದಲ ಐದು ಸ್ಥಾನಗಳಲ್ಲಿದ್ದಾರೆ.
ಆಲ್ ರೌಂಡರ್ಸ್ ಯಾದಿಯಲ್ಲಿ ಆಸ್ಟ್ರೇಲಿಯಾದ ಎಲ್ಲೈಸ್ ಪೆರ್ರಿ, ಸ್ಟೆಫಾನಿ ಟೇಲರ್ (ವೆಸ್ಟ್ ಇಂಡೀಸ್), ದೀಪ್ತೀ ಶರ್ಮಾ (ಭಾರತ), ಡೇನ್ ವ್ಯಾನ್ ನಿಕೆರ್ಕ್ (ದಕ್ಷಿಣ ಆಫ್ರಿಕಾ), ನಟಾಲಿಯಾ ಸಿವರ್ (ಇಂಗ್ಲೆಂಡ್) ಮೊದಲ ಐದರ ಶ್ರೇಯಾಂಕ ಆವರಿಸಿಕೊಂಡಿದ್ದಾರೆ. ಇನ್ನು ತಂಡಗಳಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ ಮೊದಲ ಮೂರು ಸ್ಥಾನಗಳಲ್ಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications