ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ vs ಇಂಗ್ಲೆಂಡ್: ಮಳೆಗೆ ಆಹುತಿಯಾದ ಅಂತಿಮ ಏಕದಿನ ಪಂದ್ಯ

ODI series: England missed clean sweep against Sri Lanka due to rain

ಶ್ರೀಲಂಕಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಸೀಮಿತ ಓವರ್‌ಗಳ ಸರಣಿ ಅಂತ್ಯವಾಗಿದೆ. ಮೂರು ಪಂದ್ಯಗಳ ಏಕದಿನ ಪಂದ್ಯದ ಅಂತಿಮ ಪಂದ್ಯವನ್ನು ಗೆದ್ದು ಮತ್ತೊಂದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಇಂಗ್ಲೆಂಡ್ ತಂಡದ ಉತ್ಸಾಹಕ್ಕೆ ಮಳೆ ತಣ್ಣೀರೆರಚಿದೆ. ಮೂರು ಪಂದ್ಯಗಳ ಏಕದಿನ ಸರಣಿ 2-0 ಅಂತರದಿಂದ ಇಂಗ್ಲೆಂಡ್ ಪಾಲಾಗಿದೆ.

ಟಾಸ್ ಗೆದ್ದ ಇಂಗ್ಲೆಂಡ್ ಮೊದಲಿಗೆ ಶ್ರೀಲಂಕಾ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಈ ಪಂದ್ಯದಲ್ಲಿಯೂ ಶ್ರೀಲಂಕಾ ತಂಡ ತನ್ನ ನೀರಸ ಪ್ರದರ್ಶನವನ್ನು ಮುಂದುವರಿಸಿತು. ಇಂಗ್ಲೆಂಡ್ ಬೌಲರ್‌ಗಳು ಮೇಲುಗೈ ಸಾಧಿಸುತ್ತಲೇ ಸಾಗಿದರು. ಆರಂಭಿದಿಂದಲೂ ಲಂಕಾ ದಾಂಡಿಗರ ವಿಕೆಟ್‌ಅನ್ನು ಒಂದರ ನಂತರ ಮತ್ತೊಂದರಂತೆ ಕಬಳಿಸುತ್ತಾ ಸಾಗಿದರು. ದೊಡ್ಡ ಮೊಯತ್ತದ ಜೊತೆಯಾಟವನ್ನು ನೀಡಲು ಯಾವ ಜೋಡಿಯಿಂದಲೂ ಸಾಧ್ಯವಾಗಲಿಲ್ಲ.

ದ್ವಿತೀಯ ದರ್ಜೆಯ ತಂಡ ಎಂದ ಅರ್ಜುನ್ ರಣತುಂಗಾಗೆ ಆಕಾಶ್ ಚೋಪ್ರ ತಿರುಗೇಟುದ್ವಿತೀಯ ದರ್ಜೆಯ ತಂಡ ಎಂದ ಅರ್ಜುನ್ ರಣತುಂಗಾಗೆ ಆಕಾಶ್ ಚೋಪ್ರ ತಿರುಗೇಟು

ಲಂಕಾ ತಂಡದ ಪರವಾಗಿ ದಸುನ್ ಶನಕ 48 ರನ್‌ಗಳಿಸುವ ಮೂಲಕ ಹೈಯೆಸ್ಟ್ ಸ್ಕೋರರ್ ಎನಿಸಿದರು. ಉಳಿದಂತೆ ಯಾವ ಬ್ಯಾಟ್ಸ್‌ಮನ್ ಕೂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲೇ ಇಲ್ಲ. ಅಂತಿಮವಾಗಿ ಶ್ರೀಲಂಕಾ ತಂಡ 166 ರನ್‌ಗಳಿಗೆ ಆಲೌಟ್ ಆಗಿತ್ತು.

ಇಂಗ್ಲೆಂಡ್ ತಂಡದ ಪರವಾಗಿ ಟಾಮ್ ಕರನ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಮಿಂಚಿದರು. ಕ್ರಿಸ್ ವೋಕ್ಸ್ ಹಾಗೂ ಡೇವಿಡ್ ವಿಲ್ಲೆ ತಲಾ 2 ವಿಕೆಟ್ ಪಡೆದರೆ ಆದಿಲ್ ರಶೀದ್ ಒಂದು ವಿಕೆಟ್ ತಮ್ಮದಾಗಿಸಿದರು.

IPL ಗೆ ಕೈ ಕೊಟ್ಟ ಸ್ಟೀವ್ ಸ್ಮಿತ್ | Steve Smith | Oneindia Kannada

ಶ್ರೀಲಂಕಾ ಇನ್ನಿಂಗ್ಸ್ ಅಂತ್ಯವಾದ ಬಳಿಕ ಮಳೆ ಸುರಿಯಲು ಆರಂಭಿಸಿತು. ಆ ನಂತರ ಇಂಗ್ಲೆಂಡ್‌ಗೆ ಬ್ಯಾಟಿಂಗ್ ನಡೆಸುವ ಅವಕಾಶವೇ ದೊರೆಯಲಿಲ್ಲ. ಹೀಗಾಗಿ ಪಂದ್ಯವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಈ ಕಾರಣದಿಂದಾಗಿ ಶ್ರೀಲಂಕಾ ಮತ್ತೊಂದು ವೈಟ್‌ವಾಶ್ ಅವಮಾನದಿಂದ ಪಾರಾಯಿತು. ಇದಕ್ಕೂ ಮುನ್ನ ಮೂರು ಪಂದ್ಯಗಳ ಟಿ20 ಸರಣಿಯನ್ನು ಕೂಡ ಶ್ರೀಲಂಕಾ ಹೀನಾಯವಾಗಿ ಸೋತಿತ್ತು. ಶ್ರೀಲಂಕಾ ಕ್ರಿಕೆಟ್ ತಂಡ ಮುಂದಿನ ಸರಣಿಯನ್ನು ತವರಿನಲ್ಲಿ ಭಾರತದ ವಿರುದ್ಧ ಆಡಲಿದೆ.

Story first published: Monday, July 5, 2021, 9:16 [IST]
Other articles published on Jul 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X