ODI Super League: ಎರಡಕ್ಕೇರಿದ ಬಾಂಗ್ಲಾದೇಶ, ತಳ ಸೇರಿದ ಭಾರತ

ಧಾಕಾ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ ವಿಭಾಗದ ಒಡಿಐ ಸೂಪರ್ ಲೀಗ್ ಪಾಯಿಂಟ್ ಟೇಬಲ್‌ನಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡ ದ್ವಿತೀಯ ಸ್ಥಾನಕ್ಕೇರಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪ್ರವಾಸಿಗರನ್ನು 3-0ಯಿಂದ ಕ್ಲೀನ್ ಸ್ವೀಪ್ ಮಾಡಿರುವ ಬಾಂಗ್ಲಾ ಪಾಯಿಂಟ್ಸ್ ಟೇಬಲ್‌ನಲ್ಲಿ ಜಿಗಿತ ಕಂಡಿದೆ.
ಒಡಿಐ ಸೂಪರ್ ಲೀಗ್ ಪಾಯಿಂಟ್ಸ್ ಟೇಬಲ್‌ನಲ್ಲಿ ದ್ವಿತೀಯ ಸ್ಥಾನದಲ್ಲಿರುವ ಬಾಂಗ್ಲಾದೇಶ ಆಡಿರುವ 3 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 30 ಪಾಯಿಂಟ್ಸ್ ಕಲೆ ಹಾಕಿದೆ. ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಆಡಿರುವ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 2ರಲ್ಲಿ ಸೋತು 40 ಪಾಯಿಂಟ್ಸ್ ಗಳಿಸಿದೆ.
ಭಾರತ ತಂಡ ಸದ್ಯದ ಒಡಿಐ ಸೂಪರ್ ಲೀಗ್ ಪಾಯಿಂಟ್ಸ್ ಟೇಬಲ್‌ನಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ತಂಡಗಳಿಗಿಂತಲೂ ಕೆಳ ಕುಸಿದಿದೆ!

ಪಾಕ್‌ಗಿಂತ ಕೆಳಸ್ಥಾನದಲ್ಲಿ ಭಾರತ
ಅಂಕಪಟ್ಟಿಯ 3ನೇ ಸ್ಥಾನದಲ್ಲಿ ಇಂಗ್ಲೆಂಡ್ (6ರಲ್ಲಿ 3 ಗೆಲುವು), 4ನೇ ಸ್ಥಾನದಲ್ಲಿ ಪಾಕಿಸ್ತಾನ (3ರಲ್ಲಿ 2 ಗೆಲುವು), 5ನೇ ಸ್ಥಾನದಲ್ಲಿ ಅಫ್ಘಾನಿಸ್ತಾನ (2ರಲ್ಲಿ 2 ಗೆಲುವು), 6ನೇ ಸ್ಥಾನದಲ್ಲಿ ಜಿಂಬಾಬ್ವೆ (3ರಲ್ಲಿ 1 ಗೆಲುವು), 7ನೇ ಸ್ಥಾನದಲ್ಲಿ ಐರ್ಲೆಂಡ್ (5ರಲ್ಲಿ 1 ಗೆಲುವು), 8ರಲ್ಲಿ ಭಾರತ (3ರಲ್ಲಿ 1 ಗೆಲುವು), 9ನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ (3ರಲ್ಲಿ 3 ಸೋಲು) ತಂಡಗಳಿವೆ.

ಇಂಗ್ಲೆಂಡ್ ವಿರುದ್ಧ ಮೇಲೇರುವ ನಿರೀಕ್ಷೆ
ಒಡಿಐ ಸೂಪರ್ ಲೀಗ್ ಪಾಯಿಂಟ್ಸ್ ಟೇಬಲ್‌ನಲ್ಲಿ ಪಾಕಿಸ್ತಾನ, ಐರ್ಲೆಂಡ್, ಅಫ್ಘಾನಿಸ್ತಾನ ತಂಡಗಳಿಗಿಂತ ಕೆಳಗಿರುವ ಭಲಿಷ್ಠ ಭಾರತ ತಂಡ ಮುಂದಿನ ಸರಣಿಯಲ್ಲಿ ಮೇಲೇರಲು ಅವಕಾಶವಿದೆ. ಫೆಬ್ರವರಿಯಲ್ಲಿ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಪ್ರವಾಸ ಸರಣಿಯಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದರೆ ಸೂಪರ್ ಲೀಗ್ ಪಾಯಿಂಟ್ಸ್ ಟೇಬಲ್‌ನಲ್ಲಿ ಮೇಲೇರಲಿದೆ.

ಆಂಗ್ಲರೆದುರು ಸೋತರೆ ಕಷ್ಟ ಕಷ್ಟ
ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಸರಣಿ ಗೆದ್ದರೆ ಮಾತ್ರ ODI Super League ಪಾಯಿಂಟ್ಸ್ ಟೇಬಲ್‌ನಲ್ಲಿ ಭಾರತ ಮೇಲೇರಲಿದೆ. ಇಲ್ಲದಿದ್ದರೆ ಕೆಳ ಸ್ಥಾನದಲ್ಲೇ ಭಾರತ ಮುಂದುವರೆಯಲಿದೆ. ಯಾಕೆಂದರೆ ಇಂಗ್ಲೆಂಡ್ ಈಗಾಗಲೇ ಮೂರನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1ರಲ್ಲಷ್ಟೇ ಗೆದ್ದಿತ್ತು. ಇಲ್ಲದಿದ್ದರೆ ಭಾರತ ಕೊನೇ ಸ್ಥಾನದಲ್ಲಿ ಇರುತ್ತಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications