ODI World Cup 2023: ಎದುರಾಳಿಗಳ ಎದೆಯಲ್ಲಿ ಅವಲಕ್ಕಿ ಕುಟ್ಟಲು ಈ ಇಂಗ್ಲೆಂಡ್ ಬ್ಯಾಟರ್ ಸಜ್ಜು
ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆ ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸಿವೆ. ಆಟಗಾರರು ಸಹ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಭರ್ಜರಿ ಪ್ರದರ್ಶನ ನೀಡಿ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳುತ್ತಿದ್ದಾರೆ. ಈ ಸಾಲಿನಲ್ಲಿ ಕಾಣಿಸಿಕೊಳ್ಳುವ ಮೊದಲ ಆಟಗಾರ ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್..
ಸದ್ಯ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ 4 ಪಂದ್ಯಗಳ ಏಕದಿನ ಸರಣಿಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್‌ನ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ಮಲಾನ್ ಅವರ ಬ್ಯಾಟ್‌ನಿಂದ ಭರ್ಜರಿ ಇನ್ನಿಂಗ್ಸ್ ಮೂಡಿ ಬಂದಿದೆ. ಕಿವೀಸ್ ತಂಡದ ಬೌಲಿಂಗ್ ವಿಭಾಗದ ಕಿವಿಯನ್ನು ಹಿಂಡಿದ ಮಲಾನ್ ಅಬ್ಬರಿಸಿದ್ದಾರೆ.

ಇವರು 114 ಎಸೆತಗಳಲ್ಲಿ 127 ರನ್‌ಗಳ ಬಾರಿಸಿ ಅಬ್ಬರಿಸಿದ್ದಾರೆ. ಮಲಾನ್ ಅವರು ODI ಸ್ವರೂಪದಲ್ಲಿ ಪದಾರ್ಪಣೆ ಮಾಡಿದ ನಂತರ, ಅವರು 50 ಓವರ್‌ಗಳ ಸ್ವರೂಪದಲ್ಲಿ ಬ್ಯಾಟ್‌ನೊಂದಿಗೆ ಅತ್ಯುತ್ತಮ ದಾಖಲೆಯನ್ನು ಬರೆಯುತ್ತಲೇ ಸಾಗಿದ್ದಾರೆ.
ಡೇವಿಡ್ ಮಲಾನ್ ಇದುವರೆಗೆ 21 ODI ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ ಮತ್ತು 61.53 ಸರಾಸರಿಯಲ್ಲಿ 1,088 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ, ಅವರ ಬ್ಯಾಟ್‌ನಿಂದ 5 ಶತಕ ಮತ್ತು 5 ಅರ್ಧಶತಕಗಳ ಇನ್ನಿಂಗ್ಸ್‌ಗಳು ಸಹ ಹೊರ ಬಂದಿವೆ. ಇದರೊಂದಿಗೆ ಏಕದಿನ ಮಾದರಿಯಲ್ಲಿ ಅತಿವೇಗವಾಗಿ ಸಾವಿರ ರನ್‌ಗಳ ಗಡಿ ದಾಟಿದ ಇಂಗ್ಲೆಂಡ್‌ನ ಆಟಗಾರ ಎಂಬ ಹೆಗ್ಗಳಿಕೆಗೆ ಮಲಾನ್ ಪಾತ್ರರಾಗಿದ್ದಾರೆ.
ಇದಕ್ಕೂ ಮೊದಲು, ಡೇವಿಡ್ ಮಲಾನ್ ಟಿ 20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಇಂಗ್ಲೆಂಡ್ ಪರ ಅತಿವೇಗವಾಗಿ ಸಾವಿರ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದರು. ಅವರು ಈ ಸಾಧನೆ ಮಾಡಲು ಕೇವಲ 24 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್
ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಇದಾದ ನಂತರ, ಒಂದು ತುದಿಯಿಂದ ವಿಕೆಟ್‌ಗಳ ಪತನವಾಗುತ್ತಾ ಸಾಗಿದರೂ, ಮಲಾನ್ ಒಂದು ತುದಿಯಿಂದ ಇನ್ನಿಂಗ್ಸ್ ನಲ್ಲಿ ಗಟ್ಟಿ ನೆಲಕಚ್ಚಿ ನಿಂತಿದ್ದರು. ವಿಕೆಟ್ ಗಳು ಬೀಳುತ್ತಾ ಇದ್ದರೂ ಧೃತಿ ಗೆಡದೆ ಬ್ಯಾಟ್ ಮಾಡಿದ ಮಲಾನ್ ರನ್ ಗಳನ್ನು ಕಲೆ ಹಾಕಿ ಅಬ್ಬರಿಸಿದ್ದಾರೆ.
ಮಲಾನ್ ಅವರ ಅಮೋಘ ಆಟ
ಮಲಾನ್ ಅವರ ಅಮೋಘ ಆಟದಿಂದಾಗಿ ಇಂಗ್ಲೆಂಡ್ ತಂಡ ಈ ಪಂದ್ಯದಲ್ಲಿ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದಲ್ಲಿ ನಡೆಯಲಿರುವ ಮುಂಬರುವ ಏಕದಿನ ವಿಶ್ವಕಪ್‌ಗೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ.
ಈ ತಂಡದಲ್ಲಿ ಡೇವಿಡ್ ಮಲಾನ್ ಕೂಡ ಸೇರ್ಪಡೆಗೊಂಡಿದ್ದಾರೆ. ಅವರ ಫಾರ್ಮ್ ಅನ್ನು ನೋಡಿದರೆ, ಅವರು ಭಾರತದ ಪಿಚ್‌ಗಳಲ್ಲಿ ಎದುರಾಳಿ ತಂಡಗಳ ಬೌಲರ್‌ಗಳಿಗೆ ದೊಡ್ಡ ತಲೆ ನೋವಾಗುವ ಸಾಧ್ಯತೆ ಇದೆ. ಇಂಗ್ಲೆಂಡ್ ತಂಡ ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 5 ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications