ODI World Cup 2023: ಅತಿ ಶೀಘ್ರದಲ್ಲೇ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಐಸಿಸಿ
ಅಕ್ಟೋಬರ್ 5ರಿಂದ 19 ನವೆಂಬರ್‌ವರೆಗೆ ಭಾರತದಲ್ಲೇ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ವೇಳಾಪಟ್ಟಿಯನ್ನು ಆದಷ್ಟು ಬೇಗ ಪ್ರಕಟಿಸಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಖಚಿತಪಡಿಸಿದೆ.
ಈ ಕುರಿತು ಮಾತನಾಡಿರುವ ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಯೋಫ್ ಅಲ್ಲಾರ್ಡಿಸ್, 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ವೇಳಾಪಟ್ಟಿಯನ್ನು ಅತಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಸದ್ಯ ಲಂಡನ್‌ನ ಓವಲ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದ ವೇಳೆಯೇ ಮುಂಬರುವ ವಿಶ್ವಕಪ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಇತ್ತೀಚೆಗೆ ಹೇಳಿದ್ದರು.
ಆದರೆ, ಐಸಿಸಿ ಸಿಇಒ ಜಿಯೋಫ್ ಅಲ್ಲಾರ್ಡಿಸ್ ಅವರು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಉಲ್ಲೇಖಿಸಿದ ಸಮಯದ ಚೌಕಟ್ಟಿಗೆ ಬದ್ಧರಾಗಲು ನಿರಾಕರಿಸಿದ್ದಾರೆ.
ಜಿಯೋಫ್ ಅಲಾರ್ಡಿಸ್ ಪ್ರಕಾರ, ಐಸಿಸಿ ಎಲ್ಲಾ ಭಾಗವಹಿಸುವ ತಂಡಗಳು ಮತ್ತು ಮಾಧ್ಯಮ ಪ್ರಸಾರಕರೊಂದಿಗೆ ವೇಳಾಪಟ್ಟಿ ಕುರಿತು ಸಮಾಲೋಚಿಸಬೇಕು. ಎಲ್ಲಾ ಮಾತುಕತೆಗಳು ಕಾರ್ಯಸಾಧ್ಯವಾದ ತಕ್ಷಣ ಐಸಿಸಿ ವೇಳಾಪಟ್ಟಿಯನ್ನು ಪ್ರಕಟಿಸಲಿದೆ ಎಂದು ಹೇಳಿದರು.

"ನಾವು ಆತಿಥೇಯ ದೇಶದಿಂದ ವೇಳಾಪಟ್ಟಿಯನ್ನು ಸ್ವೀಕರಿಸುತ್ತಿರಬಹುದು ಎಂದು ನಾನು ಭಾವಿಸುತ್ತೇನೆ. ಭಾಗವಹಿಸುವ ಎಲ್ಲಾ ತಂಡಗಳು ಮತ್ತು ಮಾಧ್ಯಮ ಪ್ರಸಾರಕರೊಂದಿಗೆ ನಾವು ಸ್ವಲ್ಪ ಸಮಾಲೋಚನೆ ನಡೆಸಬೇಕಿದೆ. ನಂತರ ನಾವು ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸುತ್ತೇವೆ," ಎಂದರು.
"ಟೂರ್ನಿಗಳನ್ನು ಆಯೋಜಿಸುವಾಗ, ನಾವು ಆತಿಥೇಯ ತಂಡಗಳೊಂದಿಗೆ ಕೈಜೋಡಿಸುತ್ತೇವೆ," ಎಂದು ಐಸಿಸಿ ಸಿಇಒ ಜಿಯೋಫ್ ಅಲ್ಲಾರ್ಡಿಸ್ ಇಎಸ್‌ಪಿಎನ್ ಕ್ರಿಕ್‌ಇನ್‌ಫೋಗೆ ತಿಳಿಸಿದ್ದಾರೆ.
ಐಸಿಸಿ ತಂಡವು ಟೂರ್ನಿಗೆ ಪ್ರಗತಿ ಸಾಧಿಸಬಹುದಾದ ವಿಷಯಗಳ ಮೇಲೆ ಕೆಲಸ ಮಾಡುತ್ತಿದೆ;
ಭಾರತದಲ್ಲಿ ಏಕದಿನ ವಿಶ್ವಕಪ್ ಆಡದಿರಲು ಪಾಕಿಸ್ತಾನದ ನಿರ್ಧಾರವು ವೇಳಾಪಟ್ಟಿ ಘೋಷಣೆಗೆ ವಿಳಂಬವಾಗುತ್ತಿರುವುದಕ್ಕೆ ಏನಾದರೂ ಸಂಬಂಧ ಹೊಂದಿದೆಯೇ ಎಂದು ಐಸಿಸಿ ಸಿಇಒ ಜಿಯೋಫ್ ಅಲ್ಲಾರ್ಡಿಸ್ ಅವರಿಗೆ ಪ್ರಶ್ನಿಸಲಾಯಿತು.

ಐಸಿಸಿ ತಂಡವು ಅನೇಕ ದೇಶಗಳಲ್ಲಿ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸುವಲ್ಲಿ ಬಹಳ ಅನುಭವಿಯಾಗಿದೆ. ಬೇರೆ ಯಾವುದೇ ದೇಶಗಳು ಇದನ್ನು ನಿಯಂತ್ರಿಸುವುದಿಲ್ಲ. ಟೂರ್ನಿಗಾಗಿ ಮುಂದುವರಿಯಬಹುದಾದ ಪರಿಸ್ಥಿತಿಗಳ ಮೇಲೆ ಐಸಿಸಿ ಕೇಂದ್ರೀಕರಿಸುತ್ತಿದೆ ಎಂದರು.
"ನಾನು ವೇಳಾಪಟ್ಟಿಯನ್ನು ನೋಡುವವರೆಗೆ, ನಾನು ಕಾಯುತ್ತಿದ್ದೇನೆ. ಮುಂದಿನ ಎರಡು ದಿನಗಳಲ್ಲಿ ವಿಶ್ವಕಪ್ ವೇಳಾಪಟ್ಟಿ ನೋಡಬಹುದೆಂದು ಭಾವಿಸುತ್ತೇನೆ. ನಮ್ಮ ಟೂರ್ನಿ ಆಯೋಜಕ ತಂಡವು ಎಲ್ಲಾ ವಿವಿಧ ದೇಶಗಳಲ್ಲಿ ಕ್ರಿಕೆಟ್ ಟೂರ್ನಿಗಳನ್ನು ಹಾಕುವಲ್ಲಿ ಬಹಳ ಅನುಭವಿಯಾಗಿದೆ," ಎಂದು ಜಿಯೋಫ್ ಅಲ್ಲಾರ್ಡಿಸ್ ಸ್ಪಷ್ಟಪಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications