For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2023ರ ಕ್ವಾಲಿಫಯರ್ ಪಂದ್ಯಗಳ ವೇಳಾಪಟ್ಟಿ ಪ್ರಕಟ; 10 ತಂಡಗಳ ಪೈಪೋಟಿ!

ODI World Cup 2023 qualifier schedule announced by ICC

ಕ್ರಿಕೆಟ್ ಪ್ರಿಯರ ನೆಚ್ಚಿನ ಹಾಗೂ ಕ್ರಿಕೆಟ್ ಲೋಕದ ಪ್ರತಿಷ್ಟೆಯ ಟೂರ್ನಿಯಾಗಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಮೆಂಟ್ ಇದೇ ವರ್ಷ ನಡೆಯಲಿದೆ. ಈ ಬಾರಿ ಭಾರತದಲ್ಲಿ ಟೂರ್ನಿ ಆಯೋಜನೆಯಾಗಿರುವುದು ವಿಶೇಷವಾಗಿದೆ. ಇನ್ನು ಟೂರ್ನಿ ಅಕ್ಟೋಬರ್ 5ರಂದು ಆರಂಭವಾಗಲಿದ್ದು, ನವೆಂಬರ್ 19ರಂದು ಫೈನಲ್ ಪಂದ್ಯ ಜರುಗಲಿದೆ.

ಇನ್ನು ಇದಕ್ಕೂ ಮುನ್ನ ವಿಶ್ವಕಪ್‌ ಕ್ವಾಲಿಫಯರ್ ಪಂದ್ಯಗಳು ಜರುಗಲಿದ್ದು, ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಈ ಹಿಂದೆ ಚಾಂಪಿಯನ್ ಆಗಿದ್ದ ವೆಸ್ಟ್ ಇಂಡೀಸ್, ಶ್ರೀಲಂಕಾ ಸೇರಿದಂತೆ ಒಟ್ಟು ಹತ್ತು ತಂಡಗಳು ಸೆಣಸಾಟ ನಡೆಸಲಿವೆ.

ಇನ್ನು ಈ ಕ್ವಾಲಿಫಯರ್ ಪಂದ್ಯಗಳು ಸಂಪೂರ್ಣವಾಗಿ ಜಿಂಬಾಬ್ವೆಯಲ್ಲಿ ನಡೆಯಲಿದ್ದು, ಜೂನ್ 18ರಂದು ಆರಂಭವಾಗಲಿದ್ದು, ಜುಲೈ 9ರಂದು ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಮುಕ್ತಾಯಗೊಳ್ಳಲಿದೆ. ಹತ್ತು ತಂಡಗಳನನ್ನು ಎ ಹಾಗೂ ಬಿ ತಂಡಗಳೆಂದು ವಿಂಗಡಣೆ ಮಾಡಲಾಗಿದ್ದು, ತಮ್ಮ ಗುಂಪಿನಲ್ಲಿನ ಎಲ್ಲಾ ತಂಡಗಳ ಜತೆ ಒಂದೊಂದು ಪಂದ್ಯದಲ್ಲಿ ಕಣಕ್ಕಿಳಿಯಲಿವೆ. ಎರಡೂ ಗುಂಪುಗಳಲ್ಲಿ ಟಾಪ್ 3 ಸ್ಥಾನಗಳನ್ನು ಪಡೆದುಕೊಳ್ಳಲಿರುವ 6 ತಂಡಗಳು ಸೂಪರ್ ಸಿಕ್ಸ್ ಸುತ್ತಿಗೆ ಲಗ್ಗೆ ಇಡಲಿವೆ.

ಸೂಪರ್ ಸಿಕ್ಸ್ ಸುತ್ತಿನಲ್ಲಿ ಗ್ರೂಪ್ ಹಂತದಲ್ಲಿ ಸೆಣಸಾಡದೇ ಇರುವ ತಂಡಗಳ ವಿರುದ್ಧ ತಂಡಗಳು ಸೆಣಸಾಟ ನಡೆಸಲಿದ್ದು, ಇದರಲ್ಲಿ ಟಾಪ್ 2 ಸ್ಥಾನಗಳನ್ನು ಪಡೆದುಕೊಳ್ಳಲಿರುವ ತಂಡಗಳು ಫೈನಲ್ ಪ್ರವೇಶಿಸಲಿವೆ ಹಾಗೂ ವಿಶ್ವಕಪ್ ಟೂರ್ನಿಯಲ್ಲಿ ಸೆಣಸಾಡುವ ಅರ್ಹತೆ ಗಿಟ್ಟಿಸಿಕೊಳ್ಳಲಿವೆ. ಇನ್ನು ಗ್ರೂಪ್ ಹಂತದಲ್ಲಿ ಸೋಲಲಿರುವ ತಂಡಗಳು ಪ್ಲೇಆಫ್ ಪಂದ್ಯಗಳಲ್ಲಿ ಪರಸ್ಪರ ಸೆಣಸಾಡಲಿವೆ. ಆದರೆ ಪ್ಲೇಆಫ್ ಪಂದ್ಯಗಳಲ್ಲಿ ಗೆದ್ದ ತಂಡಗಳಿಗೆ ಫೈನಲ್ ಪ್ರವೇಶಿಸುವ ಅವಕಾಶ ಇರುವುದಿಲ್ಲ. ಆದರೆ ಟೂರ್ನಿ ಮುಗಿದ ನಂತರ ಹೊರಬೀಳುವ ಟಾಪ್ 10 ಪಟ್ಟಿಯಲ್ಲಿ ಈ ಪಂದ್ಯಗಳ ಅಂಕಗಳೂ ಸಹ ಗಣನೆಗೆ ಬರಲಿವೆ.

ಒಟ್ಟಿನಲ್ಲಿ ಸೂಪರ್ ಸಿಕ್ಸ್ ಅವಕಾಶ ಗಿಟ್ಟಿಸಿಕೊಂಡು ಅದರಲ್ಲಿ ಗೆದ್ದು ಫೈನಲ್ ತಲುಪುವ ತಂಡಗಳು ವಿಶ್ವಕಪ್ ಆಡುವ ಅವಕಾಶ ಪಡೆದುಕೊಳ್ಳಲಿವೆ. ಇನ್ನು ಯಾವ ಗುಂಪಿನಲ್ಲಿ ಯಾವ ತಂಡಗಳಿವೆ ಹಾಗೂ ಪಂದ್ಯಗಳ ವೇಳಾಪಟ್ಟಿ ಹೇಗಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಭಾನುವಾರ, 18 ಜೂನ್
ಜಿಂಬಾಬ್ವೆ vs ನೇಪಾಳ, ಹರಾರೆ ಸ್ಪೋರ್ಟ್ಸ್ ಕ್ಲಬ್
ವೆಸ್ಟ್ ಇಂಡೀಸ್ vs ಯುಎಸ್ಎ, ಬ್ರೇವ್ ಕ್ರಿಕೆಟ್ ಕ್ಲಬ್

ಸೋಮವಾರ, 19 ಜೂನ್
ಶ್ರೀಲಂಕಾ vs ಯುಎಇ, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್
ಐರ್ಲೆಂಡ್ vs ಒಮಾನ್, ಬುಲವಾಯೊ ಅಥ್ಲೆಟಿಕ್ ಕ್ಲಬ್

ಮಂಗಳವಾರ, 20 ಜೂನ್
ಜಿಂಬಾಬ್ವೆ vs ನೆದರ್ಲೆಂಡ್ಸ್, ಹರಾರೆ ಸ್ಪೋರ್ಟ್ಸ್ ಕ್ಲಬ್
ನೇಪಾಳ vs ಯುಎಸ್ಎ, ಬ್ರೇವ್ ಕ್ರಿಕೆಟ್ ಕ್ಲಬ್

ಬುಧವಾರ, 21 ಜೂನ್
ಐರ್ಲೆಂಡ್ vs ಸ್ಕಾಟ್ಲೆಂಡ್, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್
ಓಮನ್ vs ಯುಎಇ, ಬುಲವಾಯೊ ಅಥ್ಲೆಟಿಕ್ ಕ್ಲಬ್

ಗುರುವಾರ, 22 ಜೂನ್
ವೆಸ್ಟ್ ಇಂಡೀಸ್ vs ನೇಪಾಳ, ಹರಾರೆ ಸ್ಪೋರ್ಟ್ಸ್ ಕ್ಲಬ್
ನೆದರ್ಲ್ಯಾಂಡ್ಸ್ vs ಯುಎಸ್ಎ, ತಕಾಶಿಂಗಾ ಕ್ರಿಕೆಟ್ ಕ್ಲಬ್

ಶುಕ್ರವಾರ, 23 ಜೂನ್
ಶ್ರೀಲಂಕಾ vs ಓಮನ್, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್
ಸ್ಕಾಟ್ಲೆಂಡ್ vs ಯುಎಇ, ಬುಲವಾಯೊ ಅಥ್ಲೆಟಿಕ್ ಕ್ಲಬ್

ಶನಿವಾರ, 24 ಜೂನ್
ಜಿಂಬಾಬ್ವೆ vs ವೆಸ್ಟ್ ಇಂಡೀಸ್, ಹರಾರೆ ಸ್ಪೋರ್ಟ್ಸ್ ಕ್ಲಬ್
ನೆದರ್ಲ್ಯಾಂಡ್ಸ್ vs ನೇಪಾಳ, ತಕಾಶಿಂಗಾ ಕ್ರಿಕೆಟ್ ಕ್ಲಬ್

ಭಾನುವಾರ, 25 ಜೂನ್
ಶ್ರೀಲಂಕಾ vs ಐರ್ಲೆಂಡ್, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್
ಸ್ಕಾಟ್ಲೆಂಡ್ vs ಓಮನ್, ಬುಲವಾಯೊ ಅಥ್ಲೆಟಿಕ್ ಕ್ಲಬ್

ಸೋಮವಾರ, 26 ಜೂನ್
ಜಿಂಬಾಬ್ವೆ vs ಯುಎಸ್ಎ, ಹರಾರೆ ಸ್ಪೋರ್ಟ್ಸ್ ಕ್ಲಬ್
ವೆಸ್ಟ್ ಇಂಡೀಸ್ vs ನೆದರ್ಲ್ಯಾಂಡ್ಸ್, ತಕಾಶಿಂಗಾ ಕ್ರಿಕೆಟ್ ಕ್ಲಬ್

ಮಂಗಳವಾರ, 27 ಜೂನ್
ಶ್ರೀಲಂಕಾ vs ಸ್ಕಾಟ್ಲೆಂಡ್, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್
ಐರ್ಲೆಂಡ್ vs ಯುಎಇ, ಬುಲವಾಯೊ ಅಥ್ಲೆಟಿಕ್ ಕ್ಲಬ್

ಗುರುವಾರ, 29 ಜೂನ್
ಸೂಪರ್ 6: A2 vs B2, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್

ಶುಕ್ರವಾರ, 30 ಜೂನ್
ಸೂಪರ್ 6: A3 vs B1, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್
ಪ್ಲೇಆಫ್: A5 vs B4, ಬ್ರೇವ್ ಕ್ರಿಕೆಟ್ ಕ್ಲಬ್

ಶನಿವಾರ, ಜುಲೈ 1
ಸೂಪರ್ 6: A1 v B3, ಹರಾರೆ ಸ್ಪೋರ್ಟ್ಸ್ ಕ್ಲಬ್

ಭಾನುವಾರ, ಜುಲೈ 2
ಸೂಪರ್ 6: A2 v B1, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್
ಪ್ಲೇಆಫ್: A4 v B5, ತಕಾಶಿಂಗಾ ಕ್ರಿಕೆಟ್ ಕ್ಲಬ್

ಸೋಮವಾರ, ಜುಲೈ 3
ಸೂಪರ್ 6: A3 v B2, ಹರಾರೆ ಸ್ಪೋರ್ಟ್ಸ್ ಕ್ಲಬ್

ಮಂಗಳವಾರ, 4 ಜುಲೈ
ಸೂಪರ್ 6: A2 v B3, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್
ಪ್ಲೇಆಫ್: 7ನೇ ತಂಡ vs 8ನೇ ತಂಡ ತಕಾಶಿಂಗಾ ಕ್ರಿಕೆಟ್ ಕ್ಲಬ್

ಬುಧವಾರ, 5 ಜುಲೈ
ಸೂಪರ್ ಸಿಕ್ಸ್: A1 v B2, ಹರಾರೆ ಸ್ಪೋರ್ಟ್ಸ್ ಕ್ಲಬ್

ಗುರುವಾರ, 6 ಜುಲೈ
ಸೂಪರ್ ಸಿಕ್ಸ್: A3 v B3, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್
ಪ್ಲೇಆಫ್: 9ನೇ ತಂಡ vs 10ನೇ ತಂಡ ತಕಾಶಿಂಗಾ ಕ್ರಿಕೆಟ್ ಕ್ಲಬ್

ಶುಕ್ರವಾರ, 07 ಜುಲೈ
ಸೂಪರ್ ಸಿಕ್ಸ್: A1 v B1, ಹರಾರೆ ಸ್ಪೋರ್ಟ್ಸ್ ಕ್ಲಬ್

ಭಾನುವಾರ, 09 ಜುಲೈ
ಫೈನಲ್, ಹರಾರೆ ಸ್ಪೋರ್ಟ್ಸ್ ಕ್ಲಬ್

ವಾರ್ಮ್-ಅಪ್ ಪಂದ್ಯಗಳು

ಮಂಗಳವಾರ, 13 ಜೂನ್
ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್, ಹರಾರೆ ಸ್ಪೋರ್ಟ್ಸ್ ಕ್ಲಬ್
ಜಿಂಬಾಬ್ವೆ vs ಒಮನ್, ತಕಾಶಿಂಗಾ ಕ್ರಿಕೆಟ್ ಕ್ಲಬ್
ನೇಪಾಳ vs ಯುಎಇ, ಓಲ್ಡ್ ಹರಾರಿಯನ್ಸ್ ಕ್ರಿಕೆಟ್ ಕ್ಲಬ್
ಶ್ರೀಲಂಕಾ vs ನೆದರ್ಲ್ಯಾಂಡ್ಸ್, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್
ಐರ್ಲೆಂಡ್ vs ಯುಎಸ್ಎ, ಬುಲವಾಯೊ ಅಥ್ಲೆಟಿಕ್ ಕ್ಲಬ್

ಗುರುವಾರ, 15 ಜೂನ್
ನೇಪಾಳ vs ಓಮನ್, ಹರಾರೆ ಸ್ಪೋರ್ಟ್ಸ್ ಕ್ಲಬ್
ವೆಸ್ಟ್ ಇಂಡೀಸ್ vs ಯುಎಇ, ತಕಾಶಿಂಗಾ ಕ್ರಿಕೆಟ್ ಕ್ಲಬ್
ಜಿಂಬಾಬ್ವೆ vs ಸ್ಕಾಟ್ಲೆಂಡ್, ಓಲ್ಡ್ ಹರಾರಿಯನ್ಸ್ ಕ್ರಿಕೆಟ್ ಕ್ಲಬ್
ಐರ್ಲೆಂಡ್ vs ನೆದರ್ಲ್ಯಾಂಡ್ಸ್, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್
ಶ್ರೀಲಂಕಾ vs ಯುಎಸ್ಎ, ಬುಲವಾಯೊ ಅಥ್ಲೆಟಿಕ್ ಕ್ಲಬ್

Story first published: Tuesday, May 23, 2023, 18:04 [IST]
Other articles published on May 23, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+