ಭಾರತ ಎ ವಿರುದ್ಧ ದಕ್ಷಿಣ ಆಫ್ರಿಕಾ ಎ ಗೆ ಜುಬಾಯರ್ ಹಮ್ಜಾ ರನ್ ಬಲ

ಬೆಂಗಳೂರು, ಆಗಸ್ಟ್ 11: ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ಎ ತಂಡ ಬೆಂಗಳೂರಿನಲ್ಲಿ ಭಾರತ ಎ ವಿರುದ್ಧ ಅನಧಿಕೃತ ಎರಡನೇ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಪ್ರಥಮ ಇನ್ನಿಂಗ್ಸ್ ಗೆ ಇಳಿದಿರುವ ದ. ಆಫ್ರಿಕಾ ಎಗೆ ಜುಬಾಯರ್ ಹಮ್ಜಾ (93/125) ರನ್ ಬಲ ತುಂಬಿದ್ದಾರೆ. ಪ್ರಥಮ ಇನ್ನಿಂಗ್ಸ ನಲ್ಲಿ ಭಾರತ ಹನುಮ ವಿಹಾರಿ ಶತಕದ ನೆರವಿನೊಂದಿಗೆ 345 ರನ್ ಗಳಿಸಿತ್ತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ಎ ಯಿಂದ ವಿಹಾರಿ ಭರ್ಜರಿ 148 (295) ರನ್ ಪೇರಿಸಿ ತಂಡವನ್ನು ಬೆಂಬಲಿಸಿದರು. ಅಂಕಿತ್ ಬಾವ್ನೆ ಅವರೂ 80 (146) ರನ್ ಸೇರಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ನೆರವಾದರು. ಅದು ಬಿಟ್ಟರೆ ಶ್ರೇಯಸ್ ಐಯ್ಯರ್ 39 (54), ಶ್ರೀಕಾರ್ ಭರತ್ 34 (69) ರನ್ ಬೆಂಬಲ ತಂಡಕ್ಕೆ ದೊರೆಯಿತು.
ಪ್ರಥಮ ಇನ್ನಿಂಗ್ಸ್ ನಲ್ಲಿ ಭಾರತ 101 ಓವರ್ ಮುಕ್ತಾಯಕ್ಕೆ ಎಲ್ಲಾ ವಿಕೆಟ್ ಕಳೆದು 345ರನ್ ಪೇರಿಸಿತ್ತು. ಈ ವೇಳೆ ದಕ್ಷಿಣ ಆಫ್ರಿಕಾ ಎ ತಂಡದ ಡುವಾನ್ನೆ ಒಲಿವಿಯರ್ 63 ರನ್ನಿಗೆ 6 ವಿಕೆಟ್ ಕಬಳಿಸಿ ಭಾರತವನ್ನು ಕಾಡಿದರು. ಆಫ್ರಿಕಾದ ಇನ್ನೊಬ್ಬ ಬೌಲರ್ ಆರಿಚ್ ನಾರ್ಜ್ 69ಕ್ಕೆ 2 ವಿಕೆಟ್ ಉರುಳಿಸಿದರು.
ಇನ್ನಿಂಗ್ಸ್ ಗೆ ಇಳಿದ ಆಫ್ರಿಕಾ ಎ ತಂಡದಿಂದ ಸಾರೆಲ್ ಎರ್ವೀ 58 (118), ಹಮ್ಜಾ (93/125) ರನ್ ಬಾರಿಸಿ ಔಟಾದರು. ಇಬ್ಬರ ವಿಕೆಟ್ ಕೂಡ ಯುಜುವೇಂದ್ರ ಚಾಹಲ್ ಪಾಲಾಯಿತು. ರಾಸ್ಸಿ ವ್ಯಾನ್ ಡೆರ್ ಡಸೆನ್ (18/63), ರೂಡಿ ಸೆಕೆಂಡ್ (35/65) ಕ್ರೀಸ್ ನಲ್ಲಿದ್ದಾರೆ. ಶನಿವಾರ (ಆ.11) ಎರಡನೇ ದಿನದಾಂತ್ಯಕ್ಕೆ ಆಫ್ರಿಕಾ ಎ ತಂಡ 59.5 ಓವರ್ ಮುಕ್ತಾಯಕ್ಕೆ 3 ವಿಕೆಟ್ ಕಳೆದು 219 ರನ್ ಪೇರಿಸಿದೆ. ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡ 30 ರನ್ ಗೆಲುವು ಸಾಧಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications