For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಲಂಕಾ ತಂಡವನ್ನು ಮಣಿಸಿದ ಓಮನ್

ಇನ್ನೇನು ಮೂರು ದಿನಗಳಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದೆ. ಈ ಟೂರ್ನಿಗೂ ಮುನ್ನ ಭಾಗವಹಿಸುವ ತಂಡಗಳು ಈಗಾಗಲೇ ಅಭ್ಯಾಸ ಪಂದ್ಯವನ್ನು ಆರಂಭಿಸಿವೆ. ಉತ್ತಮ ತಂಡಗಳು ತಮ್ಮ "ಎ" ತಂಡವನ್ನು ಕಣಕ್ಕೆ ಇಳಿಸಿದೆ. ಓಮನ್‌ ಮಂಗಳವಾರ ಅಭ್ಯಾಸ ಪಂದ್ಯದಲ್ಲಿ ಕಣಕ್ಕೆ ಇಳಿಯಿತು. ಈ ವೇಳೆ ಶ್ರೀಲಂಕಾ "ಎ" ತಂಡದ ವಿರುದ್ಧ ಕಾದಾಟವನ್ನು ನಡೆಸಿತು. ಈ ಪಂದ್ಯದಲ್ಲಿ ಓಮನ್ ತಂಡ 5 ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿ ಅಬ್ಬರಿಸಿದೆ. ಅಲ್ಲದೆ ಟೂರ್ನಿಯಲ್ಲಿ ತಮ್ಮ ತಂಡವನ್ನು ಹಗುರವಾಗಿ ಪರಿಗಣಿಸಬೇಡಿ ಎಂಬ ಸಂದೇಶವನ್ನು ರವಾನಿಸಿದೆ.

ಕೊಲಂಬೊದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಟಾಸ್‌ ಗೆದ್ದ ಲಂಕಾ "ಎ" ಮೊದಲ ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಈ ವೇಳೆ ಟಾಪ್ ಆರ್ಡರ್ ಬ್ಯಾಟರ್‌ ಸಿನೆತ್ ಜಯವರ್ಧನ (9), ಪುಲಿಂದು ಪೆರೇರಾ (9), ಪವನ್ ಸಂದೇಶ (3) ರನ್ ಕಲೆ ಹಾಕಲು ಪರದಾಟ ನಡೆಸಿದರು. ಆರಂಭಿಕ ಆಟಗಾರ ದುಲ್ನಿತ್ ಸಿಗೇರಾ 20 ರನ್‌ ಬಾರಿಸಿದರೂ ಅದನ್ನು ದೊಡ್ಡ ಇನಿಂಗ್ಸ್‌ ಆಗಿ ಕನ್ವರ್ಟ್ ಮಾಡುವಲ್ಲಿ ವಿಫಲರಾದರು.

Oman

ಶ್ರೀಲಂಕಾ ತಂಡದ ಬ್ಯಾಟರ್‌ಗಳ ಉತ್ತಮ ಜೊತೆಯಾಟದ ಕಾಣಿಕೆ ನೀಡುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಸಹನ್ ಕೋಸಲ (21) ಕವಿಜಾ ಗಮಗೆ (12), ವನುಜಾ ಸಹನ್ (29), ಕೆಳ ಕ್ರಮಾಂಕದಲ್ಲಿ ಲಹಿರು ಸಮರಕೂನ್ (24) ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಅಂತಿಮವಾಗಿ ಶ್ರೀಲಂಕಾ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 145 ರನ್‌ ಸೇರಿಸಿತು. ಓಮನ್ ಪರ ಜೇ ಒಡೆದ್ರಾ, ಶಕೀಲ್ ಅಹ್ಮದ್, ಶಾ ಫೈಸಲ್ ತಲಾ 2 ವಿಕೆಟ್‌ ಕಬಳಿಸಿದರು.

ಓಮನ್ ತಂಡದ ಪರ ಮೊದಲ ವಿಕೆಟ್‌ಗೆ ಆಮಿರ್ ಕಲೀಮ್ ಹಾಗೂ ಹಮ್ಮದ್ ಮಿರ್ಜಾ ಮೊದಲ ವಿಕೆಟ್‌ಗೆ 25 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಆಮಿರ್ ಕಲೀಮ್ 47 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 8 ಬೌಂಡರಿಗಳೊಂದಿಗೆ 80 ರನ್ ಗಳಿಸಿ ಔಟಾದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ವಿನಾಯಕ್ ಶುಕ್ಲಾ 24 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ ಅಜೇಯ 39 ರನ್ ಗಳಿಸಿ ಜಯದಲ್ಲಿ ಮಿಂಚಿದರು. ಶ್ರೀಲಂಕಾ ಎ ಪರ ವನುಜಾ ಸಹನ್ 3 ವಿಕೆಟ್ ಪಡೆದರು.

ಜಿಂಬಾಬ್ವೆ, ನೇಪಾಳಗೆ ಜಯ

ಇನ್ನೊಂದು ಅಭ್ಯಾಸ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 178 ರನ್‌ ಸೇರಿಸಿತು. ಗುರಿಯನ್ನು ಬೆನ್ನಟ್ಟಿದ ನೆದರ್ಲ್ಯಾಂಡ್ಸ್ 20 ಓವರ್‌ಗಳಲ್ಲಿ 149 ರನ್‌ಗಳಿಗೆ ಆಲೌಟ್ ಆಯಿತು. ಚೆನ್ನೈನಲ್ಲಿ ನಡೆದ ಮತ್ತೊಂದು ಅಭ್ಯಾಸ ಪಂದ್ಯದಲ್ಲಿ ಯುಎಇ ಮೊದಲು ಬ್ಯಾಟ್ ಮಾಡಿ 6 ವಿಕೆಟ್‌ಗೆ 145 ರನ್‌ ಸೇರಿಸಿತು. ಯುಎಇ ನೀಡಿದ್ದ ಗುರಿಯನ್ನು ಬೆನ್ನಟ್ಟಿದ ನೇಪಾಳ 17 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 148 ರನ್‌ ಕಲೆ ಹಾಕಿ ಜಯ ಸಾಧಿಸಿತು.

Story first published: Tuesday, February 3, 2026, 20:36 [IST]
Other articles published on Feb 3, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+