Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ನಡೆದ ಬೆಟ್‌ ಮೌಲ್ಯವೆಷ್ಟು ಗೊತ್ತ?!

On BCCI’s radar: Rs 225-crore bets on a Tamil Nadu T20 game

ಚೆನ್ನೈ, ಡಿಸೆಂಬರ್ 7: ಭಾರತದ ಕ್ರಿಕೆಟ್‌ನಲ್ಲಿ ಅದರಲ್ಲೂ ಟಿ20 ಮಾದರಿಯಲ್ಲಿ ಬೆಟ್ಟಿಂಗ್ ದಂಧೆ ಭರ್ಜರಿಯಾಗೇ ನಡೆಯುತ್ತಿದೆ. ದಿನದಿನಕ್ಕೆ ಬೆಟ್ಟಿಂಗ್ ಕಗ್ಗತ್ತಲು ದೇಸಿ ಕ್ರಿಕೆಟ್‌ ರಂಗದಲ್ಲಿ ಆವರಿಸುತ್ತಲೇಯಿದೆ. ಹೀಗಾಗಿ ಬಿಸಿಸಿಐ ಬೆಟ್ಟಿಂಗ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಮುಂದಾಗಿದೆ.

ಬಿಸಿಸಿಐಯ ಆ್ಯಂಟಿ ಕರಪ್ಶನ್ ಯುನಿಟ್ (ಎಸಿಯು) ಬೆಟ್ಟಿಂಗ್ ದಂಧೆಯ ಬಗ್ಗೆ ಬಿಸಿಸಿಐಗೆ ನೀಡಿರುವ ಮಾಹಿತಿ, ಬಿಸಿಸಿಐಗೆ ದೇಶದಲ್ಲಿ, ಹೊರದೇಶದಲ್ಲಿ ದೇಸಿ ಕ್ರಿಕೆಟ್‌ಗೆ ಸಂಬಂಧಿಸಿ ನಡೆಯುತ್ತಿರುವ ಬೆಟ್ಟಿಂಗ್‌ ನ ಕರಾಳ ಮುಖವನ್ನು ಪರಿಚಯಿಸಿದೆ. ಎಸಿಯು ಮಾಹಿತಿ ಆಘಾತ ರೀತಿಯಲ್ಲೂ ಇದೆ.

ವರದಿಯೊಂದರ ಪ್ರಕಾರ, ಎಸಿಯು ಬಿಸಿಸಿಐಗೆ ಬೆಟ್ಟಿಂಗ್‌ ಕುರಿತಾಗಿ ಒಂದು ವರದಿ ಒಪ್ಪಿಸಿದೆ. ಇದರಲ್ಲಿ, ಈ ವರ್ಷ ನಡೆದ ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್‌) ನಲ್ಲಿ ಟೂಟಿ ಪ್ಯಾಟ್ರಿಯೋಟ್ಸ್‌ ಮತ್ತು ಮದುರೈ ಪ್ಯಾಂಥರ್ಸ್ ನಡುವಿನ ಪಂದ್ಯಗಳಿಗೆ ಅಂತಾರಾಷ್ಟ್ರೀಯ ಬೆಟ್ಟಿಂಗ್ ಸೈಟ್, 'ಬೆಟ್‌ಫೇರ್‌'ನಲ್ಲಿ ಸುಮಾರು 225 ಕೋ.ರೂ.ಗಳ ಬೆಟ್ಟಿಂಗ್ ನಡೆದಿರುವುದನ್ನು ತಿಳಿಸಿದೆ.

ಎಸಿಯು ಸಲ್ಲಿಸಿರುವ ವರದಿಯಲ್ಲಿ, ಬೆಟ್‌ಫೇರ್ ಸೈಟ್ ಭಾರತದಲ್ಲಿ ನಡೆಯುವ ರಾಜ್ಯಗಳ ಅದ್ದೂರಿ ಲೀಗ್‌ಗಳ ಪಂದ್ಯಗಳನ್ನಾಧರಿಸಿ ಮಿತಿಮೀರಿ ದಂಧೆ ನಡೆಸುತ್ತಿರುವ ವಿಚಾರವನ್ನು ಬಿಚ್ಚಿಟ್ಟಿದೆ. ಅದರಲ್ಲೂ ಟಿಎನ್‌ಪಿಎಲ್‌ನಲ್ಲಿನ ಟೂಟಿ ಪ್ಯಾಟ್ರಿಯೋಟ್‌ ಪಂದ್ಯಗಳಿಗೆ ಅತೀ ಹೆಚ್ಚಿನ ಬೆಲೆಯ ಬೆಟ್‌ ನಡೆಸುತ್ತಿದ್ದನ್ನು ಹೇಳಿದೆ. ಹೀಗಾಗಿ ಬಿಸಿಸಿಐ ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.

Story first published: Saturday, December 7, 2019, 13:19 [IST]
Other articles published on Dec 7, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+