Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಧೋನಿ ನಿವೃತ್ತಿ ಬಗ್ಗೆ ತುಟಿ ಬಿಚ್ಚಿದ ಮುಖ್ಯ ಆಯ್ಕೆದಾರ ಎಂಎಸ್‌ಕೆ ಪ್ರಸಾದ್

On MS Dhoni’s retirement rumours, chief selector MSK Prasad breaks his silence

ನವದೆಹಲಿ, ಸೆಪ್ಟೆಂಬರ್ 12: ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗಾಗಿ 15 ಜನರ ತಂಡವನ್ನು ಪ್ರಕಟಿಸಿದ ಬಳಿಕ, ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿಯ ಗಾಳಿ ಸುದ್ದಿ ಬಗ್ಗೆ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಮಾತನಾಡಿದ್ದಾರೆ.

ಧೋನಿ ನಿವೃತ್ತಿ ಕುರಿತ ಗಾಳಿಸುದ್ದಿ ಹಬ್ಬಿದ್ದು ನಾಯಕ ವಿರಾಟ್ ಕೊಹ್ಲಿ ಹಾಕಿದ್ದ ಫೋಟೋದಿಂದಾಗಿ. ಧೋನಿ ಜೊತೆಗಿದ್ದ ಫೋಟೋವನ್ನು ಜಾಲತಾಣದಲ್ಲಿ ಹಾಕಿ ಕೊಹ್ಲಿ, ಹಿಂದಿನ ಪಂದ್ಯವೊಂದರ ಕ್ಷಣವನ್ನು ಸ್ಮರಿಸಿಕೊಂಡಿದ್ದರು. ಇದಾದ ಬೆನ್ನಲ್ಲೇ ಧೋನಿ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗನ ಕುರಿತ ಭಾವನಾತ್ಮಕ ಪೋಸ್ಟ್‌ಗಳನ್ನು ಹಾಕಲು ಶುರುವಿಟ್ಟಿದ್ದರು.

ಎಂಎಸ್‌ಡಿ ನಿವೃತ್ತಿಗೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪ್ರಸಾದ್, ಇಂಥ ಬೆಳವಣಿಗೆಯ ಬಗ್ಗೆ ಬಿಸಿಸಿಐಗೆ ಯಾವುದೇ ಮಾಹಿತಿ ಲಭಿಸಿಲ್ಲ ಎಂದಿದ್ದಾರೆ. 'ಎಂಎಸ್ ಧೋನಿ ನಿವೃತ್ತಿ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ. ಇದು ತಪ್ಪುಸುದ್ದಿ,' ಎಂದಿರುವ ಎಂಎಸ್‌ಕೆ, ಎಂಎಸ್‌ಕೆ ಧೋನಿ ನಿವೃತ್ತಿಯ ಗಾಳಿಸುದ್ದಿಗೆ ಸದ್ಯ ತೆರೆ ಎಳೆದಿದ್ದಾರೆ.

ವಿರಾಟ್ ಕೊಹ್ಲಿ, ಗುರುವಾರ (ಸೆಪ್ಟೆಂಬರ್ 12) ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ ಆ ಫೋಟೋ 27 ಮಾರ್ಚ್ 2016ರದ್ದು. ಮೊಹಾಲಿಯಲ್ಲಿ ನಡೆದಿದ್ದ ವರ್ಲ್ಡ್ ಟಿ20 ಸೂಪರ್ ಟೆನ್ ಗ್ರೂಪ್-2ರ ಪಂದ್ಯದಲ್ಲಿ ತೆಗೆದ ಫೋಟೋವದು. ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಈ ಪಂದ್ಯದಲ್ಲಿ ಭಾರತ 6 ವಿಕೆಟ್‌ ಗೆಲುವನ್ನಾಚರಿಸಿತ್ತು.

Story first published: Thursday, September 12, 2019, 18:07 [IST]
Other articles published on Sep 12, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+