ವಿಶ್ವಕಪ್ ಗೆದ್ದ ದಿನಕ್ಕೆ 11 ವರ್ಷ: ಟ್ರೋಫಿ ಜಯಿಸಿದ ಪಯಣದ ಮೆಲುಕು!

ಭಾರತೀಯ ಕ್ರಿಕೆಟಗ ಅಭಿಮಾನಿಗಳು ಐಪಿಎಲ್ 15ನೇ ಆವೃತ್ತಿಯ ಸಂಭ್ರಮದಲ್ಲಿದ್ದಾರೆ. ರೋಮಾಂಚಕ ಪಂದ್ಯಗಳು ಅಭಿಮಾನಿಗಳ ಮನಗೆಲ್ಲುತ್ತಿದೆ. ಈ ಇದೆಲ್ಲದರ ಜೊತೆಗೆ ಭಾರತೀಯ ಕ್ರಿಕೆಟ್ ತಂಡಕ್ಕೆ ಇಂದು ಮತ್ತೊಂದು ಮಹತ್ವದ ಸಾಧನೆ ಮಾಡಿದ ದಿನ. ಭಾರತ ಕ್ರಿಕೆಟ್ ಪ್ರೇಮಿಗಳು ಕಂಡ ಸುದೀರ್ಘ ಕಾಲದ ಕನಸು 11 ವರ್ಷದ ಹಿಂದೆ ನಿಜವಾಗಿತ್ತು. ವಿಶ್ವ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಎರಡನೇ ಬಾರಿಗೆ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತು. ಈ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಭಾರತ ಕ್ರಿಕೆಟ್ ತಂಡ ಬಹುದೊಡ್ಡ ಸಾಧನೆ ಮಾಡಿ ಬೀಗಿತ್ತು.
ಹೌದು, 2011ರ ಇದೇ ದಿನ ಟೀಮ್ ಇಂಡಿಯಾ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ವಿಶ್ವಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತ್ತು. ಧೋನಿ ನಾಯಕತ್ವದ ಟೀಮ್ ಇಂಡಿಯಾ ಮುಂಬೈನ ವಾಂಖೆಡೆ ಮೈದಾನದಲ್ಲಿ ಸಾಧಿಸಿದ ದಿಗ್ವಿಜಯ ಭಾರತದ ಗಲ್ಲಿ ಗಲ್ಲಿಯಲ್ಲೂ ಸಂಭ್ರಮದಿಂದ ಕುಣೀದಾಡುವಂತೆ ಮಾಡಿತ್ತು . ವಿಶ್ವಗೆದ್ದ ಆ ವಿಶೇಷ ದಿನದ ಮೆಲುಕು ನಿಮಗಾಗಿ..

ಟೂರ್ನಿಯ ಆರಂಭಕ್ಕೂ ಮುನ್ನವೇ ಭರವಸೆ ಮೂಡಿಸಿದ್ದ ಭಾರತ
ಟೀಮ್ ಇಂಡಿಯಾ 2011ರ ವಿಶ್ವಕಪ್ ಟ್ರೋಫಿ ಗೆಲ್ಲುವ ಫೇವರೀಟ್ ತಂಡವಾಗಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಧೋನಿ ನಾಯಕತ್ವದಲ್ಲಿ ಭಾರತ ತಂಡ ಸರಣಿಗೂ ಮುನ್ನ ಭರ್ಜರಿ ಫಾರ್ಮ್‌ನಲ್ಲಿತ್ತು. ಇದು ವಿಶ್ವಕಪ್ ಗೆಲ್ಲುವ ವಿಶ್ವಾಸವನ್ನು ಮೂಡಿಸಿತ್ತು.

ಭಾರತಕ್ಕೆ ಎದುರಾಗಿತ್ತು ಕಠಿಣ ಸವಾಲು
ಟೀಮ್ ಇಂಡಿಯಾಗೆ ವಿಶ್ವಕಪ್‌ಲ್ಲಿ ಕಠಿನ ಸವಾಲು ಎದುರಾಗಿತ್ತು. ಲೀಗ್ ಹಂತವನ್ನು ಸುಲಭವಾಗಿ ಮೀರಿ ಬಂದ ಭಾರತ ತಂಡಕ್ಕೆ ನಾಕೌಟ್ ಹಂತದಲ್ಲಿ ಬಲಿಷ್ಟ ಆಸ್ಟ್ರೇಲಿಯಾ ತಂಡ ಮುಖಾಮುಖಿಯಾಗಿತ್ತು. ಸತತ ವಿಶ್ವಕಪ್ ಗೆಲುವಿನ ರುಚಿ ಕಂಡಿದ್ದ ಆಸ್ಟ್ರೇಲಿಯಾ ತಂಡ ಈ ಭಾರಿ ಭಾರತವನ್ನು ಕಟ್ಟಿ ಹಾಕಲು ಸಫಲವಾಗಲಿಲ್ಲ. ಆಸ್ಟ್ರೇಲಿಯಾ ವಿರುದ್ಧ ಭಾರತ 5 ವಿಕೆಟ್‌ಗಳ ಗೆಲುವು ಸಾಧಿಸಿತು. ಈ ಮೂಲಕ ವಿಶ್ವಕಪ್‌ನ ಸೆಮಿಫೈನಲ್ ಹಂತಕ್ಕೆ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು.

ಸೆಮಿಫೈನಲ್‌ನಲ್ಲಿ ಎದುರಾಗಿದ್ದು ಪಾಕಿಸ್ತಾನ
ಟೀಮ್ ಇಂಡಿಯಾಗೆ ಸೆಮಿಫೈನಲ್ ಕಣದಲ್ಲಿ ಎದುರಾಗಿದ್ದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ. ವಿಶ್ವಕಪ್‌ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯ ಸಾಧನೆ ಮಾಡಿದ ಭಾರತ ತಂಡಕ್ಕೆ ಈ ಬಾರಿಯೂ ಪಾಕಿಸ್ತಾನವನ್ನು ಮಣಿಸುವ ಆತ್ಮವಿಶ್ವಾಸವಿತ್ತು. ಅಂತೆಯೇ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡ ಟೀಮ್ ಇಂಡಿಯಾ ವಿರುದ್ಧ 29 ರನ್‌ಗಳ ಅಂತರದಿಂದ ಶರಣಾಯಿತು. ಈ ಮೂಲಕ ಭಾರತ ವಿಶ್ವಕಪ್ ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿತ್ತು.

ಫೈನಲ್‌ನಲ್ಲಿ ಶ್ರೀಲಂಕಾ ಎದುರಾಳಿ
ಟೀಮ್ ಇಂಡಿಯಾಗೆ ಫೈನಲ್‌ನಲ್ಲಿ ಎದುರಾಗಿದ್ದು ಬಲಿಷ್ಠ ಶ್ರೀಲಂಕಾ ತಂಡ. ಲಂಕಾ ತಂಡ ನಾಕೌಟ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ಮತ್ತು ಸೆಮಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಸೋಲುಣಿಸಿ ಫೈನಲ್‌ಗೆ ಪ್ರವೇಶವನ್ನು ಗಿಟ್ಟಿಸಿಕೊಂಡಿತ್ತು.

ಸವಾಲಿನ ಗುರಿ ನೀಡಿದ ಲಂಕಾ ಪಡೆ
ಈ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಮೊದಲಿಗೆ ಬ್ಯಾಟಿಂಗ್ ಮಾಡಲು ಕಣಕ್ಕಿಳಿದಿತ್ತು. ಫೈನಲ್‌ನಲ್ಲಿ ಶ್ರೀಲಂಕಾ ತಂಡ ಭಾರತ ತಂಡಕ್ಕೆ ಸವಾಲಿನ ಗುರಿಯನ್ನು ನೀಡಿತ್ತು. 50 ಓವರ್‌ಗಳಲ್ಲಿ ಲಂಕನ್ನರು ಭಾರತಕ್ಕೆ 275 ರನ್‌ಗಳ ದೊಡ್ಡ ಮೊತ್ತವನ್ನು ಗುರಿಯಾಗಿ ನೀಡಿತು. ಫೈನಲ್ ಪಂದ್ಯದಲ್ಲಿ ಶ್ರೀಲಂಕಾದ ಮಹೇಲ ಜಯವರ್ಧನೆ ಅಮೋಘ ಶತಕ ಸಿಡಿಸಿ ಮಿಂಚಿದರು.

ವೀರು ವಿಫಲ, ಗಂಭೀರ್ ಬೆಂಬಲ
ಶ್ರೀಲಂಕಾ ನೀಡಿದ ಟಾರ್ಗೆಟ್ ಬೆನ್ನತ್ತಿದ ಭಾರತ ತಂಡಕ್ಕೆ ಆರಂಭದಲ್ಲಿಯೇ ಆಘಾತ ಉಂಟಾಯಿತು. ಭಾರತ ತಂಡದ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಆರಂಭದಲ್ಲಿಯೇ ತಮ್ಮ ವಿಕೆಟ್ ಕಳೆದುಕೊಂಡರು. ಆದರೆ ಮತ್ತೊಂದು ತುದಿಯಲ್ಲಿದ್ದ ಗೌತಮ್ ಗಂಭೀರ್ ಉತ್ತಮ ಪ್ರದರ್ಶನವನ್ನು ನೀಡಿದರು. ನಿರ್ಣಾಯಕ ಪಂದ್ಯದಲ್ಲಿ ಅಮೋಘ ಆಟವಾಡಿದ ಗಂಭೀರ್ ಶತಕದಂಚಿನಲ್ಲಿ ಎಡವಿದ 97ರನ್‌ಗೆ ಔಟಾದರು.

ನಾಯಕನ ಆಟವಾಡಿದ ಮಾಹಿ
ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಲು ಗೌಥಮ್ ಗಂಭೀರ್ ಮತ್ತು ನಾಯಕ ಧೋನಿ ನೀಡಿದ ಪ್ರದರ್ಶನ ಪ್ರಮುಖವಾಗಿತ್ತು. ಫೈನಲ್‌ನಲ್ಲಿ ಧೋನಿ ಔಟಾಗದೆ 91 ರನ್‌ಗಳನ್ನು ದಾಖಲಿಸಿದರು. ಗೆಲ್ಲಲು ನಾಲ್ಕು ರನ್‌ಗಳ ಅವಶ್ಯಕತೆಯಿದ್ದಾಗ ಧೋನಿ ಭರ್ಜರಿ ಸಿಕ್ಸರ್ ಸಿಡಿಸಿ ಟೀಮ್ ಇಂಡಿಯಾದ ವಿಶ್ವಕಪ್ ಎತ್ತಿ ಹಿಡಿಯುವಂತೆ ಮಾಡಿದರು. ಇನ್ನೂ 8 ಎಸೆತ ಬಾಕಿಯಿರುವಂತೆಯೇ ಭಾರತ ಗೆದ್ದುಬೀಗಿತ್ತು

ಎಂಎಸ್ ಧೋನಿ ಪಂದ್ಯಶ್ರೇಷ್ಠ, ಯುವಿ ಸರಣಿ ಶ್ರೇಷ್ಠ
ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ ನಾಯಕ ಧೋನಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಮತ್ತೊಂದೆಡೆ ಸರಣಿಯುದ್ದಕ್ಕೂ ಆಲ್‌ರೌಂಡರ್ ಪ್ರದರ್ಶನ ನೀಡಿ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಯುವರಾಜ್ ತಮ್ಮ ಪ್ರದರ್ಶನಕ್ಕೆ ಅರ್ಹವಾಗಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications