For Quick Alerts
ALLOW NOTIFICATIONS  
For Daily Alerts
 

ಅತೀ ಅಪರೂಪದ, ಬಲು ರೋಚಕ ವಿಶ್ವಕಪ್ ಫೈನಲ್ ಪಂದ್ಯದ ವೀಡಿಯೋ!

On this day: England vs New Zealand World Cup final

ಬೆಂಗಳೂರು, ಜುಲೈ 14: ಜಿದ್ದಾಜಿದ್ದಿಯ ಪಂದ್ಯ, ಪಂದ್ಯ ಟೈ, ಸೂಪರ್ ಓವರ್‌, ಸೂಪರ್‌ ಓವರ್‌ನಲ್ಲೂ ಸಮ ಬಲದ ಫಲಿತಾಂಶ. ಇಂಥದ್ದೊಂದು ಬಲು ಅಪರೂಪದ ವಿಶ್ವಕಪ್ ಫೈನಲ್ ಪಂದ್ಯ ಕಾಣಸಿಕ್ಕಿದ್ದು 2019ರ ಜುಲೈ 14ರ ಇದೇ ದಿನ. ಕ್ರಿಕೆಟ್‌ ಪ್ರೇಮಿಗಳನ್ನು ಕುತೂಹಲದ ತುದಿಗಾಲಲ್ಲಿ ನಿಲ್ಲಿಸಿತ್ತು ಆವತ್ತಿನ ಇಂಗ್ಲೆಂಡ್ vs ನ್ಯೂಜಿಲೆಂಡ್ ವಿಶ್ವಕಪ್ ಕಾದಾಟ.

ಲಂಡನ್‌ ಲಾರ್ಡ್ಸ್‌ ಸ್ಟೇಡಿಯಂನಲ್ಲಿ ನಡೆದಿದ್ದ ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ನ್ಯೂಜಿಲೆಂಡ್ ತಂಡ, ಹೆನ್ರಿ ನಿಕೋಲ್ಸ್ 55, ನಾಯಕ ಕೇನ್ ವಿಲಿಯಮ್ಸನ್ 30, ಟಾಮ್ ಲ್ಯಾಥಮ್ 47 ರನ್‌ನೊಂದಿಗೆ 50 ಓವರ್‌ಗೆ 8 ವಿಕೆಟ್ ಕಳೆದು 241 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಇಂಗ್ಲೆಂಡ್, ಜಾನಿ ಬೇರ್ಸ್ಟೋವ್ 36, ಬೆನ್ ಸ್ಟೋಕ್ಸ್ ಅಜೇಯ 84, ಜೋಸ್ ಬಟ್ಲರ್ 59, ಜೇಸನ್ ರಾಯ್ 17 ರನ್‌ನೊಂದಿಗೆ 50 ಓವರ್‌ ಮುಕ್ತಾಯಕ್ಕೆ ಎಲ್ಲಾ ವಿಕೆಟ್ ಕಳೆದು 241 ರನ್ ಬಾರಿಸಿ ಪಂದ್ಯವನ್ನು ಟೈ ಮಾಡಿಕೊಂಡಿತ್ತು. ಕೊನೇ ಕ್ಷಣದಲ್ಲಿ ಆದಿಲ್ ರಶೀದ್ ಮತ್ತು ಮಾರ್ಕ್‌ವುಡ್ ರನ್‌ ಔಟ್ ಆಗಿದ್ದರಿಂದ ಪಂದ್ಯ ಸೂಪರ್ ಓವರ್‌ನತ್ತ ತಿರುಗಿತ್ತು.

ಸೂಪರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 16 ರನ್ ಗಳಿಸಿತ್ತು. ಚೇಸಿಂಗ್‌ಗೆ ಇಳಿದ ಕಿವೀಸ್‌ನಿಂದ ಜೇಮ್ಸ್ ನೀಶಮ್ ಸಿಕ್ಸ್ ಬಾರಿಸಿ ಫಲಿತಾಂಶವನ್ನು ಮತ್ತೆ ಟೈ ಆಗಿಸಿದರು. ಸೂಪರ್ ಓವರ್‌ನಲ್ಲೂ ಎರಡೂ ತಂಡಗಳು 16 ರನ್ ಬಾರಿಸಿದ್ದರಿಂದ ಅದಾಗಲೇ ಇಂಗ್ಲೆಂಡ್‌ನ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.

ಸೂಪರ್ ಓವರ್‌ನಲ್ಲೂ ಪಂದ್ಯ ಟೈ ಅನ್ನಿಸಿದರೆ ಬೌಂಡರಿ ಕೌಂಟ್ ನಿಯಮದ ಆಧಾರದಲ್ಲಿ ವಿಜೇತರನ್ನು ನಿರ್ಧರಿಸಲಾಗುತ್ತದೆ ಎಂಬ ನಿಯಮವಿದ್ದರಿಂದ ಸೂಪರ್ ಓವರ್ ಟೈ ಅನ್ನಿಸುತ್ತಲೇ ಇಂಗ್ಲೆಂಡ್ ಆಟಗಾರರು ಐತಿಹಾಸಿಕ ಗೆಲುವಿನ ಸಂಭ್ರಮಾಚರಿಸಿದ್ದರು. ಪಂದ್ಯದಲ್ಲಿ 26 ಬೌಂಡರಿ (ಸಿಕ್ಸ್/ಫೋರ್) ಬಾರಿಸಿದ್ದ ಇಂಗ್ಲೆಂಡ್ ಅನ್ನು ವಿಜಯಿ ಎಂದು ಘೋಷಿಸಲಾಯ್ತು. 17 ಬೌಂಡರಿಗಳನ್ನು ಬಾರಿಸಿದ್ದ ಕೇನ್ ವಿಲಿಯಮ್ಸ್ ಬಳಗ ಆಘಾತದಿಂದ ಕುಸಿದಿತ್ತು. ಆದರೆ ಉತ್ತಮ ಪ್ರದರ್ಶನ ನೀಡಿದ್ದ ಕೇನ್ ವಿಲಿಯಮ್ಸನ್ ಪಡೆ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿತ್ತು.

Story first published: Tuesday, July 14, 2020, 15:47 [IST]
Other articles published on Jul 14, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+