ಕಪಿಲ್ ಡೆವಿಲ್ಸ್ ಜೈತಯಾತ್ರೆಗೆ 38ರ ಸಂಭ್ರಮ: ರೋಚಕ ಹಾದಿಯ ಸಂಪೂರ್ಣ ಮಾಹಿತಿ

ನಮ್ಮದೇಶ ಕ್ರಿಕೆಟ್ ನೋಡುವ ರೀತಿ ಬದಲಾದ ದಿನ | Oneindia Kannada

ಭಾರತ ಆಗಿನ್ನೂ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಿರದ ಕಾಲವದು. 1983ರ ವಿಶ್ವಕಪ್‌ಗೆ ಎಲ್ಲಾ ತಂಡಗಳು ಸಜ್ಜಾಗಿ ಬಂದಿದ್ದವು. ಆಗ ಆಸ್ಟ್ರೇಲಿಯಾದ ಮಾಜಿ ನಾಯಕ ಕಿಮ್ ಹ್ಯೂಜ್ಸ್ ಭಾರತ ಈ ವಿಶ್ವಕಪ್‌ನ(1983ರ ವಿಶ್ವಕಪ್) ಡಾರ್ಕ್ ಹಾರ್ಸಸ್ ಎಂದಾಗ ಭಾರತೀಯ ಕ್ರಿಕೆಟ್ ಪ್ರೇಮಿಗಳು ಕೂಡ ಗಂಭೀರವಾಗಿ ಪರಿಗಣಿಸಿರಲಿಲ್ಲ. ಅದಕ್ಕೆ ಕಾರಣ ವೆಸ್ಟ್ ಇಂಡೀಸ್, ಇಂಗ್ಲೆಂಡ್ ಆಸ್ಟ್ರೇಲಿಯಾದಂತ ತಂಡಗಳ ಮುಂದೆ ಭಾರತ ಮಂಕಾಗಿಯೇ ಕಾಣುತ್ತಿತ್ತು.

ಅದರಲ್ಲೂ ಈ ವಿಶ್ವಕಪ್‌ಗೂ ಮುನ್ನ ಭಾರತ ಏಕದಿನ ಕ್ರಿಕೆಟ್‌ನಲ್ಲಿ ಹೇಳಿಕೊಳ್ಳುವಂತಾ ಸಾಧನೆ ಮಾಡಿರಲಿಲ್ಲ. ಆ ವಿಶ್ವಕಪ್‌ಗೂ ಮುನ್ನ ಭಾರತ ತಂಡ ಕೇವಲ 40 ಏಕದಿನ ಪಂದ್ಯಗಳನ್ನು ಆಡಿದ ಅನುಭವವನ್ನು ಮಾತ್ರವೇ ಹೊಂದಿತ್ತು. ಅದಕ್ಕೂ ಹಿಂದೆ 1974 ಹಾಗೂ 1978ರ ವಿಶ್ವಕಪ್‌ನಲ್ಲಿ ಭಾರತ ಒಟ್ಟು ಗೆದ್ದಿದ್ದು ಕೇವಲ 2 ಪಂದ್ಯಗಳನ್ನಷ್ಟೇ. ಇಂತಾ ಹಿನ್ನೆಲೆ ಹೊಂದಿದ್ದ ಭಾರತ ವಿಶ್ವಕಪ್ ಎತ್ತಿ ಹಿಡಿಯುತ್ತೆ ಎಂದು ಯಾರಾದರೂ ಊಹಿಸಲು ಸಾಧ್ಯವೇ?

World Test Championship 2ನೇ ಆವೃತ್ತಿಗೆ ಭಾರತದ ವೇಳಾಪಟ್ಟಿ ಪ್ರಕಟ!World Test Championship 2ನೇ ಆವೃತ್ತಿಗೆ ಭಾರತದ ವೇಳಾಪಟ್ಟಿ ಪ್ರಕಟ!

ಆದರೆ ಕಿಮ್ ಹ್ಯೂಜ್ಸ್ ಹೇಳಿದ್ದ ಮಾತು ನಿಜವಾಗಿತ್ತು. ಒಂದಷ್ಟೂ ನಿರೀಕ್ಷೆಯಿಲ್ಲದೆ ಟೂರ್ನಿಗೆ ಕಾಲಿಟ್ಟಿದ್ದ ಭಾರತ ಕ್ರಿಕೆಟ್ ತಂಡ ಫೈನಲ್‌ಗೆ ಪ್ರವೇಶವನ್ನು ಪಡೆದುಕೊಂಡಿತ್ತು. ಫೈನಲ್‌ನಲ್ಲಿ ಭಾರತ ತಂಡ ಮೊದಲೆರಡು ವಿಶ್ವಕಪ್ ಟೂರ್ನಿಯ ಚಾಂಪಿಯನ್ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಊಹಿಸದ ರೀತಿಯಲ್ಲಿ ಸೋಲಿಸಿ ಗೆದ್ದು ಬೀಗಿತ್ತು. ಈ ಮೂಲಕ ಭಾರತ ಕ್ರಿಕೆಟ್‌ನಲ್ಲಿ ಕಪಿಲ್ ದೇವ್ ಪಡೆ ಹೊಸ ಶಕೆಯನ್ನು ಬರೆದಿತ್ತು. ಭಾರತೀಯ ಕ್ರಿಕೆಟ್‌ನಲ್ಲಿ ಅತಿದೊಡ್ಡ ಬದಲಾವಣೆಗೆ ಕಾರಣವಾದ ಈ ಐತಿಹಾಸಿಕ ಘಟನೆ ನಡೆದು ಇಂದಿಗೆ ಭರ್ತಿ 38 ವರ್ಷಗಳಾಗಿದೆ.

ಈ ವಿಶ್ವಕಪ್‌ನ ಭಾರತ ತಂಡದ ಗೆಲುವಿನ ಹಾದಿ ಹೇಗಿತ್ತು? ಆ ಬಗ್ಗೆ ಪೂರ್ಣ ವಿವರ ಮುಂದೆ ಓದಿ..

ವಿಶ್ವಕಪ್‌ಗೆ ಮುನ್ನವೇ ಅಬ್ಬರಿಸಿತ್ತು ಭಾರತ

ವಿಶ್ವಕಪ್‌ಗೆ ಮುನ್ನವೇ ಅಬ್ಬರಿಸಿತ್ತು ಭಾರತ

ಈ ವಿಶ್ವಕಪ್‌ಗೆ ಮುನ್ನ ಭಾರತ ವೆಸ್ಟ್ ಕೆರೀಬಿಯನ್ ನಾಡಿಗೆ ಪ್ರವಾಸ ಕೈಗೊಂಡಿತ್ತು. ಆ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಏಕದಿನ ಸರಣಿಯಲ್ಲಿ ಅದರದ್ದೇ ನೆಲದಲ್ಲಿ ಭರ್ಜರಿಯಾಗಿ ಸೋಲಿಸಿತ್ತು. ಆದರೆ ಅದು ಭಾರತಕ್ಕೆ ಸಿಕ್ಕ ಅಚಾನಕ್ ಗೆಲುವು ಎಂದು ವಿಮರ್ಶಿಸಲಾಗಿತ್ತು. ಆದರೆ ವಿಶ್ವಕಪ್‌ನಲ್ಲಿ ಭಾರತ ಫೈನಲ್ ಪಂದ್ಯವೂ ಸೇರಿದಂತೆ ವೆಸ್ಟ್ ಇಂಡೀಸ್ ತಂಡವನ್ನು ಎರಡು ಪಂದ್ಯಗಳಲ್ಲಿ ಸೋಲಿಸಿ ಇದು ತನ್ನ ಸ್ವಂತ ಸಾಮರ್ಥ್ಯದ ಗೆಲುವು ಎಂದು ಸಾರಿ ಹೇಳಿತ್ತು.

ಆರಂಭದಲ್ಲೇ ಪರಾಕ್ರಮ

ಆರಂಭದಲ್ಲೇ ಪರಾಕ್ರಮ

1983ರ ಪಂದ್ಯದಲ್ಲಿ ಭಾರತ ಮೊದಲಿಗೆ ವೆಸ್ಟ್ ಇಂಡೀಸ್ ತಂಡವನ್ನು ಲೀಗ್ ಹಂತದಲ್ಲಿ ಎದುರಿಸಿತ್ತು. ಈ ಪಂದ್ಯದಲ್ಲಿ ಭಾರತದ ತಂಡ ಯಶ್‌ಪಾಲ್ ಶರ್ಮಾ ಅವರ 89ರನ್‌ಗಳ ಅಮೂಲ್ಯ ಕೊಡುಗೆ ಸಂದೀಪ್ ಪಾಟೀಲ್ ಉಪಯುಕ್ತ ಆಟದಿಂದ ನಿಗದಿತ 60 ಓವರ್‌ಗಳಲ್ಲಿ 262 ರನ್‌ಗಳ ಸವಾಲನ್ನು ನೀಡಿತ್ತು. ಆದರೆ ಇದನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ 228ರನ್ ಗಳಿಸಿ ಭಾರತಕ್ಕೆ ಶರಣಾಗಿತ್ತು. ಈ ಮೂಲಕ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಪಡಿಸಿತ್ತು. ಮುಂದಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಕೂಡ ಸುಲಭವಾಗಿ ಸೋಲಿಸಿತ್ತು.

ಸತತ ಗೆಲುವಿನ ನಂತರ ಆಘಾತ

ಸತತ ಗೆಲುವಿನ ನಂತರ ಆಘಾತ

ಮೊದಲೆರಡು ಪಂದ್ಯಗಳಲ್ಲಿ ಗೆಲುವನ್ನು ಕಂಡ ಭಾರತ ಮುಂದಿನ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಎಡವಿತ್ತು. ಬಳಿಕ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮತ್ತೊಂದು ಲೀಗ್ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ತಂಡಕ್ಕೆ ಶರಣಾಗಿತ್ತು. ಈ ಮೂಲಕ ಭಾರತ ಟೂರ್ನಿಯಿಂದ ಹೊರ ಬೀಳುವ ಆತಂಕಕ್ಕೆ ಒಳಗಾಗಿತ್ತು. ಭಾರತ ಮುಂದಿನ ಹಂತಕ್ಕೇರಬೇಕಾದರೆ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿತ್ತು.

ಕಪಿಲ್ ದೇವ್ ಐತಿಹಾಸಿಕ 175 ರನ್

ಕಪಿಲ್ ದೇವ್ ಐತಿಹಾಸಿಕ 175 ರನ್

ಸೆಮಿ ಫೈನಲ್ ಹಂತಕ್ಕೇರಬೇಕಾದರೆ ಲೀಗ್ ಹಂತದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಜಿಂಬಾಬ್ವೆ ತಂಡವನ್ನು ಸೋಲಿಸಲೇಬೇಕಿತ್ತು. ಜಿಂಬಾಬ್ವೆಯನ್ನು ಮೊದಲು ಎದುರಿಸಿದ ಭಾರತ ಟೂರ್ನಿಯಿಂದ ಹೊರಬೀಳುವುದು ಖಚಿತವಾಗಿತ್ತು. ಕೇವಲ 17 ರನ್‌ಗೆ ಭಾರತ ತನ್ನ 5 ವಿಕೆಟ್ ಕಳೆದುಕೊಂಡಿತ್ತು. ಭಾರತದ ಎಲ್ಲಾ ಪ್ರಮುಖ ಆಟಗಾರರು ಫೆವಿಲಿಯನ್ ಸೇರಿಕೊಂಡಿದ್ದರು. ಆದರೆ ಆಗ ಭಾರತದ ಆಪತ್ಭಾಂದವನಂತೆ ಯಾರೂ ಊಹಿಸಲು ಸಾಧ್ಯವಾಗದಂತೆ ಮೇಲಕ್ಕೆತ್ತಿದ್ದರು ಕಪಿಲ್ ದೇವ್. 138 ಎಸೆತಗಳಲ್ಲಿ ಕಪಿಲ್ ಅಂದು ಭರ್ಜರಿ 175 ರನ್ ಚಚ್ಚಿದ್ದರು. ಈ ಮೂಲಕ ಭಾರತ 8 ವಿಕೆಟ್ ಕಳೆದುಕೊಂಡು 266 ರನ್‌ಗಳನ್ನು ಪೇರಿಸಿತ್ತು. ಭಾರತದ ತಂಡದ ನಾಯಕ ಕಪಿಲ್‌ದೇವ್ ಏಕದಿನ ವೃತ್ತಿ ಬದುಕಿನಲ್ಲಿ ಸಿಡಿಸಿದ ಏಕೈಕ ಶತಕ ಇಂಥಾ ಅನಿವಾರ್ಯ ಮತ್ತು ಒತ್ತಡದ ಸಂದರ್ಭದಲ್ಲಿ ಬಂದಿತ್ತು!

ಕಪಿಲ್ ಮ್ಯಾಜಿಕ್ ನಂತರ ಭಾರತದ ಓಟಕ್ಕಿಲ್ಲ ತಡೆ!

ಕಪಿಲ್ ಮ್ಯಾಜಿಕ್ ನಂತರ ಭಾರತದ ಓಟಕ್ಕಿಲ್ಲ ತಡೆ!

ಕಪಿಲ್‌ದೇವ್ ಅಂದು ಸಿಡಿಸಿದ ಶತಕ ಏಕದಿನ ಕ್ರಿಕೆಟ್ ಇತಿಹಾಸ ಕಂಡ ಅದ್ಭುತ ಶತಕಗಳಲ್ಲಿ ಒಂದಾಗಿದೆ. ಆ ಪಂದ್ಯದಲ್ಲಿ ಗೆಲುವನ್ನು ಕಂಡ ಬಳಿಕ ಆಸ್ಟ್ರೇಲಿಯಾ ತಂಡಕ್ಕೂ ಸೋಲಿನ ರುಚಿ ತೋರಿಸಿ ಸೆಮಿಫೈನಲ್ ಹಂತಕ್ಕೇರಿತ್ತು. ಮುಂದೆ ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸುಲಭವಾಗಿ ಸೋಲಿಸಿತ್ತು. ಇಂಗ್ಲೆಂಡ್ ನೀಡಿದ್ದ 214 ರನ್‌ಗಳ ಸವಾಲನ್ನು ಭಾರತ ನಾಲ್ಕು ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು.

ಐತಿಹಾಸಿಕ ಕ್ಷಣವನ್ನು ಕಟ್ಟಿಕೊಟ್ಟ ಲಾರ್ಡ್ಸ್

ಐತಿಹಾಸಿಕ ಕ್ಷಣವನ್ನು ಕಟ್ಟಿಕೊಟ್ಟ ಲಾರ್ಡ್ಸ್

1983 ವಿಶ್ವಕಪ್‌ನಲ್ಲಿ ಭಾರತ ಮೂರನೇ ಬಾರಿಗೆ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲು ಕಣಕ್ಕಿಳಿದಿತ್ತು. ಆದರೆ ಈ ಬಾರಿ ಹಿಂದೆಂದಿಗಿಂತಲೂ ಅತ್ಯಂತ ನಿರ್ಣಾಯಕ ಫೈನಲ್ ಪಂದ್ಯವಾಗಿತ್ತು. ಲಾರ್ಡ್ಸ್ ಅಂಗಳದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕ್ಲೈವ್ ಲಾಯ್ಡ್ ನೇತೃತ್ವದ ವಿಂಡೀಸ್ ತಂಡವನ್ನು ಮೊದಲಿಗೆ ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು ಭಾರತ ತಂಡದ ನಾಯಕ ಕಪಿಲ್ ದೇವ್. ಭಾರತದ ಬೌಲಿಂಗ್ ದಾಳಿಗೆ ಬೆದರಿದ್ದ ವೆಸ್‌ ಇಂಡೀಸ್ ತಂಡ 7 ಆಟಗಾರರ ಒಂದಂಕಿಯ ಕೊಡುಗೆಯೊಂದಿಗೆ ಕೇವಲ 140 ರನ್‌ಗೆ ಆಟವನ್ನು ಮುಗಿಸಿತ್ತು. ಇದನ್ನು ಸುಲಭವಾಗಿ ಬೆನ್ನತ್ತಿದ ಭಾರತ ಅಭೂತಪೂರ್ವ ವಿಜಯವನ್ನು ದಾಖಲಿಸಿತ್ತು. ಈ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ಹೊಸದೊಂದು ಶಕೆಯನ್ನೇ ಬರೆದಿತ್ತು ಕಪಿಲ್ ದೇವ್ ಮತ್ತು ತಂಡ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, June 25, 2021, 11:07 [IST]
Other articles published on Jun 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X