ಈ ದಿನ ಅಂದು, 2014: ಈಡನ್ ಗಾರ್ಡನ್‌ನಲ್ಲಿ ರನ್ ಮಳೆ: ರೋಹಿತ್ ವಿಶ್ವದಾಖಲೆಗೆ 8 ವರ್ಷ

ಟೀಮ್ ಇಂಡಿಯಾದ ನಾಯಕ ಅನುಭವಿ ಆಟಗಾರ ರೋಹಿತ್ ಶರ್ಮಾ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಸಾಕಷ್ಟು ದಾಖಲೆಗಳನ್ನು ಬರೆದಿರುವ ಆಟಗಾರ. ಏಕದಿನ ಕ್ರಿಕೆಟ್‌ನಲ್ಲಿ ಒಂದು ದ್ವಿಶತಕವನ್ನು ದಾಖಲಿಸುವುದೇ ಅತ್ಯುನ್ನತ ಸಾಧನೆಯಾಗಿರುವಾಗ ರೋಹಿತ್ ಶರ್ಮಾ ಮಾತ್ರ ತನ್ನ ಹೆಸರಿನಲ್ಲಿ 3 ದ್ವಿಶತಕ ದಾಖಲಿಸಿ ದಾಖಲೆ ಬರೆದಿದ್ದಾರೆ. ಅದರಲ್ಲೂ ರೋಹಿತ್ ಶರ್ಮಾ 264 ರನ್ ಸಿಡಿಸಿರುವುದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ವೈಯಕ್ತಿಕ ಅತಿ ದೊಡ್ಡ ಮೊತ್ತ ಎನಿಸಿಕೊಂಡಿದೆ.
ರೋಹಿತ್ ಶರ್ಮಾ ಈ ವಿಶ್ವ ದಾಖಲೆಯನ್ನು ಬರೆದು ಇಂದಿಗೆ ಸರಿಯಾಗಿ 8 ವರ್ಷಗಳಾಗಿದೆ. 2014ರ ನವೆಂಬರ್ 11ರಂದು ರೋಹಿತ್ ಶರ್ಮಾ ಕೊಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಈ ದಾಖಲೆಯನ್ನು ಬರೆದಿದ್ದರು. ಶ್ರೀಲಂಕಾ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಈ ಅಬ್ಬರದ ಪ್ರದರ್ಶನ ನೀಡಿ ಮಿಂಚಿದ್ದರು ರೋಹಿತ್ ಶರ್ಮಾ. ಈ ಮೂಲಕ ವೀರೇಂದ್ರ ಸೆಹ್ವಾಗ್ ಹೆಸರಿನಲ್ಲಿದ್ದ ಏಕದಿನ ಕ್ರಿಕೆಟ್‌ನ ಹೈಯೆಸ್ಟ್ ಸ್ಕೋರ್ ದಾಖಲೆಯನ್ನು ಶರ್ಮಾ ತಮ್ಮ ಹೆಸರಿಗೆ ಬರೆದುಕೊಂಡರು.

ನಿಧಾನವಾಗಿ ಆರಂಭ ಪಡೆದು ಅಬ್ಬರಿಸಿದ ರೋಹಿತ್
ಶ್ರೀಲಂಕಾ ವಿರುದ್ಧ ನಡೆದ ಅಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 4 ರನ್ ಗಳಿಸಿದ್ದ ವೇಳೆ ಎದುರಾಳಿ ತಂಡದಿಂದ ಜೀವದಾನವನ್ನು ಪಡೆದಿದ್ದರು. ಇದರ ಸಂಪೂರ್ಣ ಲಾಭವನ್ನು ಪಡೆದುಕೊಂಡ ರೋಹಿತ್ ಶರ್ಮಾ ಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಆರಂಭದಲ್ಲಿ ನಿಧಾನವಾಗಿಯೇ ಬ್ಯಾಟಿಂಗ್ ನಡೆಸಿದ್ದ ರೋಹಿತ್ ಶರ್ಮಾ ಅದಾದ ಬಳಿಕ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಹೀಗಾಗಿ ಈ ಪಂದ್ಯದಲ್ಲಿ ವಿಶ್ವದಾಖಲೆ ನಿರ್ಮಾಣವಾಗಿತ್ತು

ಮೂರು ದ್ವಿಶತಕಗಳ ದಾಖಲೆ
ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಈವರೆಗೆ 8 ಬಾರಿ ಮಾತ್ರವೇ ದ್ವಿಶತಕ ದಾಖಲಾಗಿದೆ. ಇದರಲ್ಲಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ 3 ದ್ವಿಶತಕಗಳನ್ನು ದಾಖಲಿಸಿರುವುದು ಕೂಡ ದಾಖಲೆ. ಕೊಲ್ಕತ್ತಾದಲ್ಲಿ ಸಿಡಿಸಿದ ಈ ದ್ವಿಶತಕದ ಬಳಿಕ 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಹಿತ್ 208 ರನ್ ದಾಖಲಿಸಿ ಮೂರನೇ ದ್ವಿಶತಕವನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದರು. ಇನ್ನು ಇದಕ್ಕೂ ಮುನ್ನ ರೋಹಿತ್ ತಮ್ಮ ಮೊದಲ ದ್ವಿಶತಕವನ್ನು 2013ರರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಾಖಲಿಸಿದ್ದರು. ಅಂದು ರೋಹಿತ್ ಬ್ಯಾಟ್‌ನಿಂದ 158 ಎಸೆತಗಳಲ್ಲಿ 209 ರನ್ ಹರಿದು ಬಂದಿತ್ತು.

ಬೃಹತ್ ಮೊತ್ತ ಗಳಿಸಿದ್ದ ಭಾರತ
ಇನ್ನು ಶ್ರೀಲಂಕಾ ವಿರುದ್ಧ ಕೊಲ್ಕತ್ತಾದಲ್ಲಿ ಸಿಡಿದ ಈ ವಿಶ್ವದಾಖಲೆಯ ಇನ್ನಿಂಗ್ಸ್ 173 ಎಸೆತಗಳಲ್ಲಿ ಬಂದಿತ್ತು. ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಅದು 4ನೇ ಪಂದ್ಯವಾಗಿತ್ತು. ಇದರಲ್ಲಿ ರೋಹಿತ್ ಶರ್ಮಾ 33 ಬೌಂಡರಿ ಹಾಗೂ 9 ಸಿಕ್ಸರ್ ಸಿಡಿಸಿದ್ದರು. ರೋಹಿತ್ ಸಿಡಿಸಿದ ಈ ಬೃಹತ್ ಮೊತ್ತದ ಕಾರಣದಿಂದ ಭಾರತ ಅಂದು 404/5 ರನ್ ಗಳಿಸಿತ್ತು. ಇನ್ನಿಂಗ್ಸ್‌ನ ಅಂತಿಮ ಎಸೆತದಲ್ಲಿ ರೋಹಿತ್ ಶರ್ಮಾ ವಿಕೆಟ್ ನುವಾನ್ ಕುಲಸೇಕರಾಗೆ ವಿಕೆಟ್ ಒಪ್ಪಿಸಿದ್ದರು.

ಭಾರೀ ಅಂತರದ ಗೆಲುವು ಸಾಧಿಸಿದ ಭಾರತ
ಇನ್ನು ಭಾರತ ನೀಡಿದ್ದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ ಈ ಪಂದ್ಯದಲ್ಲಿ ಸಾಧಾರಣ ಪ್ರದರ್ಶನ ನೀಡಿತು. ದೊಡ್ಡ ಮೊತ್ತದ ಗುರಿ ಪಡೆದ ಒತ್ತಡದಲ್ಲಿ ಶ್ರೀಲಂಕಾ ತಂಡ ಶೀಘ್ರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತ್ತು. ಏಂಜಲೋ ಮ್ಯಾಥ್ಯೂಸ್ ಹಾಗೂ ಲಹಿರು ತಿರಿಮನ್ನೆ ಅರ್ಧ ಶತಕ ಸಿಡಿಸಿದ್ದು ಹೊರತುಪಡಿಸಿ ಉಳಿದ ಆಟಗಾರರು ನೀರಸ ಪ್ರದರ್ಶನ ನೀಡಿದ್ದರು. ಇದರ ಪರಿಣಾಮವಾಗಿ ಶ್ರೀಲಂಕಾ 43.1 ಓವರ್‌ಗಳಲ್ಲಿ 251 ರನ್‌ಗಳಿಸಿ ಎಲ್ಲಾ ವಿಕೆಟ್ ಕಳೆದುಕೊಂಡಿತು. ಹೀಗಾಗಿ 153 ರನ್‌ಗಳ ಅಂತರದಿಂದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬೃಹತ್ ಗೆಲುವು ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications