Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವದಾಖಲೆಯ ಬ್ಯಾಟ್ಸ್‌ಮನ್ ರೋಹಿತ್ ಪಾದಾರ್ಪಣೆ ಮಾಡಿದ್ದು ಇದೇ ದಿನ

On this day: Rohit Sharma made his ODI debut for India

ಮುಂಬೈ, ಜೂನ್ 23: ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಇಂದಿಗೂ ಅತ್ಯಧಿಕ ವೈಯಕ್ತಿಕ ರನ್ ದಾಖಲೆ ಉಳಿಸಿಕೊಂಡಿರುವ ಭಾರತದ ಹಿಟ್‌ಮ್ಯಾನ್, ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಏಕದಿನಕ್ಕೆ ಪಾದಾರ್ಪಣೆ ಮಾಡಿದ್ದು (ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದೂ) ಇದೇ ದಿನ. ಅಂದರೆ 13 ವರ್ಷಗಳ ಹಿಂದೆ, 2007ರಲ್ಲಿ ಜೂನ್ 23ರ ಈ ದಿನ ಶರ್ಮಾ ಮೊದಲ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು.

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ತಂಡದ ಉಪನಾಯಕನಾಗಿರುವ ರೋಹಿತ್ ಶರ್ಮಾ ಚೊಚ್ಚಲ ಏಕದಿನ ಪಂದ್ಯ ಆಡಿದ್ದು ಐರ್ಲೆಂಡ್ ವಿರುದ್ಧ. ಐರ್ಲೆಂಡ್‌ಗೆ ಪ್ರವಾಸ ಹೋಗಿದ್ದ ರಾಹುಲ್ ದ್ರಾವಿಡ್ ನಾಯಕತ್ವದ ಭಾರತ ತಂಡ ಅಲ್ಲಿ ಏಕಮಾತ್ರ ಒಡಿಐ ಪಂದ್ಯ ಆಡಿತ್ತು. ಬೆಲ್ಫಾಸ್ಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆದಿತ್ತು.

ಪಾದಾರ್ಪಣೆ ಪಂದ್ಯದಲ್ಲಿ ರೋಹಿತ್‌ಗೆ ಬ್ಯಾಟಿಂಗ್ ಅವಕಾಶ ಲಭಿಸಿರಲಿಲ್ಲ. ಆಗ ರೋಹಿತ್ ಆರಂಭಿಕ ಬ್ಯಾಟ್ಸ್‌ಮನ್ ಆಗಿರದೆ 7ನೇ ಬ್ಯಾಟಿಂಗ್ ಕ್ರಮಾಂಕದಲ್ಲಿದ್ದರು. ಆಗ ಭಾರತದ ಆರಂಭಿಕರ ಸ್ಥಾನದಲ್ಲಿ ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ಇದ್ದರು. ಸಚಿನ್, ಗಂಗೂಲಿ ಮತ್ತು ಗೌತಮ್ ಗಂಭೀರ್ ಈ ಮೂವರೇ ಆವತ್ತು ಪಂದ್ಯ ಗೆಲ್ಲಿಸಿಕೊಟ್ಟಿದ್ದರು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಐರ್ಲೆಂಡ್ ತಂಡ ನಿಯಾಲ್ ಒ ಬ್ರಿಯಾನ್ 52, ಟ್ರೆಂಟ್ ಜಾನ್ಸ್ಟನ್ 34 ರನ್‌ನೊಂದಿಗೆ 50 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 193 ರನ್ ಗಳಿಸಿತ್ತು. ಮಳೆ ಬಂದಿದ್ದರಿಂದ ಡಕ್ವರ್ಥ್ ಲೂಯೀಸ್ ನಿಯಮದ ಪ್ರಕಾರ ಭಾರತಕ್ಕೆ 39 ಓವರ್‌ಗಳಲ್ಲಿ 171 ರನ್ ಗುರಿ ನೀಡಲಾಗಿತ್ತು.

ಗಂಗೂಲಿ ಅಜೇಯ 73, ಸಚಿನ್ 4, ಗಂಭೀರ್ ಅಜೇಯ 80 ರನ್‌ನೊಂದಿಗೆ ಭಾರತ 34.5 ಓವರ್‌ಗೆ 1 ವಿಕೆಟ್ ನಷ್ಟದಲ್ಲಿ 171 ರನ್ ಗಳಿಸಿ, 9 ವಿಕೆಟ್ ಗೆಲುವನ್ನಾಚರಿಸಿತ್ತು. ಆವತ್ತು ಪಾದಾರ್ಪಣೆ ಮಾಡಿದ ರೋಹಿತ್ ಈಗ 224 ಪಂದ್ಯಗಳಲ್ಲಿ 9,115 ರನ್ ದಾಖಲೆ ಹೊಂದಿದ್ದಾರೆ. ಇದರಲ್ಲಿ ಶ್ರೀಲಂಕಾ ವಿರುದ್ಧ ಶರ್ಮಾ ಬಾರಿಸಿದ 264 ರನ್ ಇಂದಿಗೂ ಒಡಿಐ ಅತ್ಯಧಿಕ ರನ್ ದಾಖಲೆಯಾಗಿ ಉಳಿಸಿದೆ.

Story first published: Tuesday, June 23, 2020, 15:22 [IST]
Other articles published on Jun 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+