
ಟೀಮ್ ಇಂಡಿಯಾದ ಅನುಭವಿ ಆಟಗಾರ ರೋಹಿತ್ ಶರ್ಮಾ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸಾಕಷ್ಟು ದಾಖಲೆಗಳನ್ನು ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಒಂದು ದ್ವಿಶತಕವನ್ನು ದಾಖಲಿಸುವುದೇ ಅತ್ಯುನ್ನತ ಸಾಧನೆಯಾಗಿರುವಾಗ ರೋಹಿತ್ ಶರ್ಮಾ ಮಾತ್ರ ತನ್ನ ಹೆಸರಿನಲ್ಲಿ 3 ದ್ವಿಶತಕ ದಾಖಲಿಸಿ ಸಾಧನೆ ಮಾಡಿದ್ದಾರೆ. ಅದರಲ್ಲೂ ರೋಹಿತ್ ಶರ್ಮಾ 264 ರನ್ ಸಿಡಿಸಿರುವುದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ವೈಯಕ್ತಿಕ ಅತಿ ದೊಡ್ಡ ಮೊತ್ತವಾಗಿದೆ.
ರೋಹಿತ್ ಶರ್ಮಾ ಈ ವಿಶ್ವ ದಾಖಲೆಯನ್ನು ಬರೆದು ಇಂದಿಗೆ ಸರಿಯಾಗಿ 6 ವರ್ಷಗಳಾಗಿದೆ. 2014ರ ನವೆಂಬರ್ 11ರಂದು ಶರ್ಮಾ ಕೊಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಈ ದಾಖಲೆಯನ್ನು ಬರೆದಿದ್ದರು. ಎದುರಾಳಿಯಾಗಿ ಶ್ರೀಲಂಕಾ ಅಂದು ಕಣಕ್ಕಿಳಿದಿತ್ತು.
ಅಮದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 4 ರನ್ ಗಳಿಸಿದ್ದ ವೇಳೆ ಎದುರಾಳಿ ತಂಡದಿಂದ ಜೀವದಾನವನ್ನು ಪಡೆದಿದ್ದರು. ಇದರ ಸಂಪೂರ್ಣ ಲಾಭವನ್ನು ಪಡೆದುಕೊಂಡ ರೋಹಿತ್ ಶರ್ಮಾ ಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಒಟ್ಟು 264 ರನ್ ಸಿಡಿಸಿದರು.
ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಈವರೆಗೆ 8 ಬಾರಿ ಮಾತ್ರವೇ ದಾಖಲಾಗಿದೆ. ಇದರಲ್ಲಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ 3 ದ್ವಿಶತಕಗಳನ್ನು ದಾಖಲಿಸಿದ್ದಾರೆ. ಇದಾದ ಬಳಿಕ 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಹಿತ್ 208 ರನ್ ದಾಖಲಿಸಿದ್ದಾರೆ. ಇನ್ನು ಇದಕ್ಕೂ ಮುನ್ನ ರೋಹಿತ್ ತಮ್ಮ ಮೊದಲ ದ್ವಿಶತಕವನ್ನು 2013ರರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಾಖಲಿಸಿದ್ದರು. ಅಂದು 158 ಎಸೆತಗಳಲ್ಲಿ 209 ರನ್ ಸಿಡಿಸಿದ್ದರು ಶರ್ಮಾ.
ಶ್ರೀಲಂಕಾ ವಿರುದ್ಧ ಸಿಡಿಸಿದ ಈ ವಿಶ್ವಾದಾಖಲೆಯ ರನ್ 173 ಎಸೆತಗಳಲ್ಲಿ ಬಂದಿತ್ತು. ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಅದು 4ನೇ ಪಂದ್ಯವಾಗಿತ್ತು. ಇದರಲ್ಲಿ ರೋಹಿತ್ ಶರ್ಮಾ 33 ಬೌಂಡರಿ ಹಾಗೂ 9 ಸಿಕ್ಸರ್ ಸಿಡಿಸಿದ್ದರು. ರೋಹಿತ್ ಸಿಡಿಸಿದ ಈ ಬರಹತ್ ಮೊತ್ತದ ಕಾರಣದಿಂದ ಭಾರತ ಅಂದು 404/5 ರನ್ ಗಳಿಸಿತ್ತು. ಇನ್ನಿಂಗ್ಸ್‌ನ ಅಂತಿಮ ಎಸೆತದಲ್ಲಿ ರೋಹಿತ್ ಶರ್ಮಾ ವಿಕೆಟ್ ನುವಾನ್ ಕುಲಸೇಕರಾಗೆ ವಿಕೆಟ್ ಒಪ್ಪಿಸಿದ್ದರು.