Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯುವಿ ಸಿಡಿಸಿದ್ದ ಸತತ ಆರು ಸಿಕ್ಸರ್ ಗೆ ಇಂದಿಗೆ 9 ವರ್ಷ!

ಬೆಂಗಳೂರು, ಸೆ.19 : ಟೀಂ ಇಂಡಿಯಾದ ಆಲ್ ರೌಂಡರ್ ಯುವರಾಜ್ ಸಿಂಗ್ ಬಾರಿಸಿದ ಸತತ ಆರು ಸಿಕ್ಸರ್ ಗಳಿಗೆ ಇಂದಿಗೆ ಒಂಭತ್ತು ವರ್ಷಗಳು ತುಂಬಿವೆ. 2007ರ ಟಿ20 ವಿಶ್ವಕಪ್ ಕ್ರಿಕೆಟ್ ನಲ್ಲಿ ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 6 ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿ ಎಲ್ಲರನ್ನೂ ಚಕಿತಗೊಳಿಸಿದ್ದರು.

2007ರ ಸೆಪ್ಟೆಂಬರ್ 19 ರಂದು ಟಿ20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ನ ವೇಗಿ ಸ್ಟುವರ್ಟ್ ಬ್ರಾಡ್ ಅವರ ಬೌಲಿಂಗ್ ನಲ್ಲಿ ಸತತ ಆರು ಸಿಕ್ಸರ್ ಗಳನ್ನು ಸಿಡಿಸಿದ ದಾಖಲೆಗೆ ದಕ್ಷಿಣ ಆಫ್ರಿಕಾದ ಕಿಂಗ್ಸ್ ಮೀಡ್ ಮೈದಾನ ಸಾಕ್ಷಿಯಾಗಿತ್ತು. ಯುವಿಯ ಅಂದಿನ ಆ ರೋಚಕ ಆಟ ಇಂದಿಗೂ ಅಭಿಮಾನಿಗಳು ಮರೆತಿಲ್ಲ. [ಧೋನಿಗೆ ನನ್ನ ಕಾಲ್ ರಿಸೀವ್ ಮಾಡಲು ಟೈಂ ಇಲ್ಲ: ಯುವಿ]

yuvraj singh

ಫ್ಲಿಂಟಾಫ್ ಹಾಗೂ ಯುವಿ ನಡುವಿನ ಮಾತುಕತೆ ಬಳಿಕ 19ನೇ ಓವರ್ ಬೌಲಿಂಗ್ ಮಾಡಲು ಬಂದಿದ್ದ ಸ್ಟುವರ್ಟ್ ಬ್ರಾಡ್ ಗೆ ಸರಿಯಾಗಿ ತಳಿಸಿ ತಮ್ಮ ಕೋಪವನ್ನು ತೀರಿಸಿಕೊಂಡಿದ್ದರು. ಸ್ಟುವರ್ಟ್ ಬ್ರಾಡ್ ಅವರ ಓವರ್ ನಲ್ಲಿ 36 ರನ್ ಬಾರಿಸಿ ಕೇವಲ 12 ಎಸೆತಗಳಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿ ಹೊಸ ದಾಖಲೆ ಸೃಷ್ಟಿಸಿದ್ದರು.

ಅದೇ ವರ್ಷದಲ್ಲಿಯೇ ಅಂತರಾಷ್ಟ್ರೀಯ ಟ್ವಂಟಿ-20 ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಯುವರಾಜ್ ಸಿಂಗ್ ಅವರ ಬ್ಯಾಟಿಂಗ್ ಅಭಿಮಾನಿಗಳಲ್ಲಿ ಹೊಸ ಅನುಭವ ನೀಡಿತ್ತು. ಯುವರಾಜ್ ಬಾರಿಸಿದ್ದ ಸತತ ಆರು ಸಿಕ್ಸರ್ ನೆರವಿನಿಂದ ಭಾರತ ಅಂದು ಇಂಗ್ಲೆಂಡ್ ವಿರುದ್ಧ 18 ರನ್ ಗಳ ಜಯಭೇರಿ ಕಂಡಿತ್ತು.

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+