ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಸಿಕ್ಸ್ ಸಿಕ್ಸ್ ಚಚ್ಚಿದ್ದು ಇದೇ ದಿನ

ನವದೆಹಲಿ: ಭಾರತದ ಮಾಜಿ ಬ್ಯಾಟ್ಸ್‌ಮನ್, ಸಿಕ್ಸರ್‌ಕಿಂಗ್ ಯುವರಾಜ್ ಸಿಂಗ್ ಸಿಕ್ಸ್ ಸಿಕ್ಸ್ ವಿಶ್ವದಾಖಲೆ ನಿರ್ಮಿಸಿದ್ದು ಸೆಪ್ಟೆಂಬರ್ 19ರ ಇದೇ ದಿನ. 2007ರ ಟಿ20 ವಿಶ್ವಕಪ್ ಉದ್ಘಾಟನಾ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಯುವಿ ಓವರ್‌ನಲ್ಲಿ ಎಲ್ಲಾ ಎಸೆತಗಳಿಗೂ ಸಿಕ್ಸ್ ಚಚ್ಚಿ ಬೆರಗು ಮೂಡಿಸಿದ್ದರು.
ಸುಮಾರು 13 ವರ್ಷಗಳ ಹಿಂದಿನ ಅಪೂರ್ವ ಕ್ಷಣವನ್ನು ಕೆಚ್ಚೆದೆಯ ಮಹಾರಾಜ ಯುವಿ ಸ್ಮರಿಸಿಕೊಂಡಿದ್ದಾರೆ. ಆವತ್ತು ಸಿಕ್ಸ್ ಬಾರಿಸಿದ್ದ ಫೋಟೋವನ್ನು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿಕೊಂಡಿರುವ ಸಿಂಗ್, '13 ವರ್ಷಗಳು! ಕಾಲ ಹೇಗೆ ಹಾರಿ ಹೋಗುತ್ತದೆ' ಎಂದು ಸಾಲೊಂದು ಬರೆದುಕೊಂಡಿದ್ದಾರೆ.
ಈ ಪಂದ್ಯ ನಡೆದಿದ್ದ 2007ರ ಸೆಪ್ಟೆಂಬರ್ 19ರಂದು. ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರ ಓವರ್ ಒಂದರಲ್ಲಿ ಯುವಿ ಪ್ರತೀ ಎಸೆತಕ್ಕೂ ಸಿಕ್ಸ್ ಬಾರಿಸಿದ್ದರು. ಆ ಪಂದ್ಯದಲ್ಲಿ ಯುವಿ ಕೇವಲ 16 ಎಸತಗಳಿಗೆ 58 ರನ್ ಕಲೆ ಹಾಕಿದ್ದರು. 12 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ್ದರು.
ಸಿಂಗ್ 58, ಗೌತಮ್ ಗಂಭೀರ್ 58, ವೀರೇಂದ್ರ ಸೆಹ್ವಾಗ್ 68 ರನ್ ಸೇರ್ಪಡೆಯೊಂದಿಗೆ ಮೊದಲು ಇನ್ನಿಂಗ್ಸ್ ಆಡಿದ್ದ ಭಾರತ 20 ಓವರ್‌ಗೆ 4 ವಿಕೆಟ್ ಕಳೆದು 218 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಇಂಗ್ಲಂಡ್ 20 ಓವರ್‌ಗೆ 6 ವಿಕೆಟ್ ಕಳೆದು 200 ರನ್ ಗಳಿಸಿ 18 ರನ್‌ನಿಂದ ಸೋಲೊಪ್ಪಿಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications