For Quick Alerts
ALLOW NOTIFICATIONS  
For Daily Alerts
 

ಒಂದು ಕಾಲ್‌ ಬದಲಿಸಿದ ಇಶಾನ್‌ ಕಿಶನ್‌ ಅದೃಷ್ಟ

ಭಾರತ ತವರಿನಲ್ಲಿ ಟಿ20 ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿದೆ. ಈ ವೇಳೆ ಟೀಮ್ ಇಂಡಿಯಾದ ಸಂಘಟಿತ ಆಟ ಎಲ್ಲರ ಗಮನ ಸೆಳೆದಿದೆ. ಭಾರತ ತಂಡದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್‌ ಅಮೋಘ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚಿದರು. ಭಾರತ ತಂಡದ ವೇಗದ ಬೌಲರ್‌ ಜಸ್ಪ್ರೀತ್ ಬುಮ್ರಾ ಟೂರ್ನಿಯುದಕ್ಕೂ ಶಿಸ್ತು ಬದ್ಧ ದಾಳಿ ನಡೆಸಿ ತಂಡಕ್ಕೆ ಆಧಾರವಾದರು. ಇವರ ಯಾರ್ಕರ್‌ ಎಸೆತಗಳಿಗೆ ಎದುರಿಸುವಲ್ಲಿ ಸ್ಟಾರ್ ಬ್ಯಾಟರ್‌ಗಳು ಸಹ ಕಂಗಾಲಾಗಿದ್ದಾರೆ. ಈ ಟೂರ್ನಿಯಲ್ಲೇ ಟೀಮ್ ಇಂಡಿಯಾದ ಪರ ಸ್ಥಿರ ಪ್ರದರ್ಶನ ನೀಡಿದ ಆಟಗಾರರ ಪಟ್ಟಿಯಲ್ಲಿ ಇಶಾನ್‌ ಕಿಶನ್‌ ಅವರಿಗೂ ಸ್ಥಾನ.

ಟಿ20 ವಿಶ್ವಕಪ್‌ ತಂಡವನ್ನು ಪ್ರಕಟಿಸುವ ವೇಳೆ ಇಶಾನ್‌ ಕಿಶನ್‌ ಅವರಿಗೆ ಸ್ಥಾನ ನೀಡಬಹುದು ಎಂದು ಯಾರು ಊಹಿಸಿರಲಿಲ್ಲ. ಆದರೆ ದೇಶೀಯ ಟೂರ್ನಿಯಲ್ಲಿ ಇಶಾನ್ ಆಡಿದ ಆಟ ಎಲ್ಲರೂ ಅವರತ್ತ ನೋಡುವಂತೆ ಮಾಡಿತು. ಇಶಾನ್‌ ಕಿಶನ್‌ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಆಡಿದ 10 ಪಂದ್ಯಗಳಲ್ಲಿ 2 ಶತಕ ಹಾಗೂ 2 ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ವೇಳೆ ಇವರು 57ರ ಸರಾಸರಿಯಲ್ಲಿ 517 ರನ್‌ ಕಲೆ ಹಾಕಿದ್ದಾರೆ. ಇದರ ಪರಿಣಾಮ ಅವರಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸಿದೆ.

Ishan Kishan

ಟಿ20 ವಿಶ್ವಕಪ್‌ ನಿಜಕ್ಕೂ ಕನಸು ನನಸಾದ ಕ್ಷಣವಾಗಿದೆ. ಈ ಟೂರ್ನಿಯ ಆರಂಭದಲ್ಲಿ ಇವರು ಆರಂಭಿಕರಾಗಿ ಕಣಕ್ಕೆ ಇಳಿದರು. ಆದರೆ ಬಳಿಕ ಬದಲಾದ ಸನ್ನಿವೇಶದಲ್ಲಿ ಇವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಅಬ್ಬರಿಸಿದರು. ಟೂರ್ನಿಯಲ್ಲಿ ಗರಿಷ್ಠ ರನ್‌ ಕಲೆ ಹಾಕಿದ ಆಟಗಾರರ ಪಟ್ಟಿಯಲ್ಲಿ ಇವರಿಗೂ ಸ್ಥಾನ. ಟಿ20 ವಿಶ್ವಕಪ್‌ನಲ್ಲಿ ಇಶಾನ್‌ ಕಿಶನ್‌ 9 ಪಂದ್ಯಗಳಲ್ಲಿ 317 ರನ್‌ ಸಿಡಿಸಿದ್ದಾರೆ. ಈ ವೇಳೆ 35ರ ಸರಾಸರಿಯಲ್ಲಿ ರನ್‌ ಕಲೆ ಹಾಕಿದ್ದಾರೆ. ಈ ವೇಳೆ 33 ಬೌಂಡರಿ, 18 ಸಿಕ್ಸರ್‌ ಬಾರಿಸಿ ಅಬ್ಬರಿಸಿದ್ದಾರೆ.

ಸೂರ್ಯ ಹೇಳಿದ್ದೇನು?

ಇಶಾನ್‌ ಕಿಶನ್‌ ತಂಡಕ್ಕೆ ಸೇರಿಕೊಂಡ ಬಗ್ಗೆ ಸೂರ್ಯಕುಮಾರ್ ಯಾದವ್ ತುಟಿ ಬಿಚ್ಚಿದ್ದಾರೆ. ಟಿ20 ವಿಶ್ವಕಪ್‌ಗೂ ಮುನ್ನ ತಂಡವನ್ನು ಪ್ರಕಟಿಸುವ ಹಂತದಲ್ಲಿದ್ದಾಗ, ಸೂರ್ಯಕುಮಾರ್ ಯಾದವ್ ಇಶಾನ್‌ ಕಿಶನ್‌ ಅವರಿಗೆ ಕಾಲ್ ಮಾಡಿದರು. ಆಗ ಛೋಟೊ ವಿಶ್ವಕಪ್‌ ಗೆಲ್ಲಿಸಿಕೊಡ್ತಿಯಾ ಎಂದು ಕೇಳಿದ್ರಂತೆ. ಆಗ ಇಶಾನ್‌ ಒಮ್ಮೆ ಭರವಸೆ ಇಟ್ಟು ನೋಡಿ ಎಂದು ತಿಳಿಸಿದ್ದರು ಎಂದು ಸೂರ್ಯ ಕುಮಾರ್ ಯಾದವ್ ನೆನಪಿಸಿಕೊಳ್ಳುತ್ತಾರೆ.

Story first published: Tuesday, March 10, 2026, 17:47 [IST]
Other articles published on Mar 10, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+