Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಉದ್ದೀಪನ ಮದ್ದು ಸೇವನೆ ಸುಳಿಯಲ್ಲಿ ಭಾರತೀಯ ಕ್ರಿಕೆಟಿಗ!

ನವದೆಹಲಿ, ಅಕ್ಟೋಬರ್ 27: ಭಾರತೀಯ ಕ್ರಿಕೆಟ್ ಆಟಗಾರರೊಬ್ಬರ ವಿರುದ್ಧ ಉದ್ದೀಪನ ಮದ್ದು ಸೇವನೆ ಆರೋಪ ಕೇಳಿ ಬಂದಿದೆ.

ಡೋಪಿಂಗ್ ಪರೀಕ್ಷೆಯಲ್ಲಿ ಓರ್ವ ಆಟಗಾರ ನಿಷೇಧಿತ ಉದ್ದೀಪನ ಮದ್ದು ಸೇವನೆ ಮಾಡಿರುವುದು ಪತ್ತೆಯಾಗಿದೆ ಎಂದು ವರ್ಲ್ಡ್ ಆಂಟಿ ಡೋಪಿಂಗ್ ಏಜೆನ್ಸಿ (ವಾಡಾ) ತನ್ನ ವರದಿಯಲ್ಲಿ ತಿಳಿಸಿದೆ. ಆದರೆ, ಆ ಆಟಗಾರನ ಹೆಸರು ಮಾತ್ರ ವಾಡಾ ಇನ್ನು ಬಹಿರಂಗ ಪಡಿಸಿಲ್ಲ.

One Indian cricketer tested positive: 2016 WADA Report

ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ)ಯಿಂದ ಮಾನ್ಯತೆ ಪಡೆದಿರುವ ಒಟ್ಟು 138 ಕ್ರಿಕೆಟ್ ಆಟಗಾರರನ್ನು 2016ರಲ್ಲಿ ವರ್ಲ್ಡ್ ಆಂಟಿ ಡೋಪಿಂಗ್ ಏಜೆನ್ಸಿ (ವಾಡಾ) ಉದ್ದೀಪನ ಮದ್ದು ಸೇವನೆ ಪರೀಕ್ಷೆಗೆ ಒಳಪಡಿಸಿತ್ತು. 138 ಆಟಗಾರರ ಪೈಕಿ ಒಬ್ಬರಲ್ಲಿ ಮಾತ್ರ ಪಾಸಿಟಿವ್ ಕಂಡು ಬಂದಿದೆ ಎಂದು ಆಂಟಿ ಡೋಪಿಂಗ್ ಏಜೆನ್ಸಿ ತಿಳಿಸಿದೆ.

2013ರ ಐಪಿಎಲ್ ಆವೃತ್ತಿ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರನಾಗಿದ್ದ ಪ್ರದೀಪ್ ಸಾಂಗ್ವಾನ್ ಡೋಪಿಂಗ್ ಸುಳಿಯಲ್ಲಿ ಸಿಲುಕಿದ್ದರು. ಇದಾದ ಬಳಿಕ ಇದೀಗ ಮತ್ತೋರ್ವ ಭಾರತೀಯ ಆಟಗಾರನ ವಿರುದ್ಧ ಈ ಆರೋಪ ಕೇಳಿ ಬಂದಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+