ಏಕೈಕ ಟೆಸ್ಟ್ : ಬಾಂಗ್ಲಾ ವಿರುದ್ಧ ಸುಲಭ ಜಯ ದಾಖಲಿಸಿದ ಭಾರತ
ಚೆನ್ನೈ, ಫೆಬ್ರವರಿ13: ಭಾರತ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಗೆಲ್ಲಲು 459 ರನ್ ಗುರಿ ಪಡೆದಿದ್ದ ಪ್ರವಾಸಿ ಬಾಂಗ್ಲಾದೇಶ ತಂಡ ಸೋಲು ಕಂಡಿದೆ. ಅಂತಿಮ ದಿನದಂದು ಎರಡನೇ ಇನ್ನಿಂಗ್ಸ್ ನಲ್ಲಿ 250 ರನ್ನಿಗೆ ಆಲೌಟ್ ಆಗುವ ಮೂಲಕ ಸುಲಭವಾಗಿ ಶರಣಾಗಿದೆ.
ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ತಲಾ ನಾಲ್ಕು ವಿಕೆಟ್ ಕಿತ್ತರೆ, ಇಶಾಂತ್ ಶರ್ಮ ಎರಡು ವಿಕೆಟ್ ಕಬಳಿಸಿದರು. ಬಾಂಗ್ಲಾದೇಶದ ಪ್ರಮುಖ ಬ್ಯಾಟ್ಸ್ ಮನ್ ಗಳು ದಿನದ ಮೊದಲಾರ್ಧದಲ್ಲೇ ಪೆವಿಲಿಯನ್ ಸೇರಿದ್ದರು. ಮಹಮದುಲ್ಲಾ 64ರನ್ ಗಳಿಸಿ ಕೊಂಚ ಪ್ರತಿರೋಧ ಒಡ್ಡಿದರು.
ಉಳಿದಂತೆ ಸೌಮ್ಯ ಸರ್ಕಾರ್ 42ರನ್ ಗಳಿಸಿದ್ದು ಬಿಟ್ಟರೆ ಮೊಮಿನಲ್ ಹಕ್, ಶಕಿಬುಲ್, ನಾಯಕ ಮುಫ್ಫಿಕರ್ ರಹೀಂ 30ರನ್ ಗಡಿ ದಾಟಲಿಲ್ಲ. ಅಶ್ವಿನ್ ಹಾಗೂ ಜಡೇಜ ಸ್ಪಿನ್ ಮೋಡಿಗೆ ಸಿಲುಕಿದ ಬಾಂಗ್ಲಾದೇಶ ಪಂದ್ಯವನ್ನು 208ರನ್ ಗಳಿಂದ ಕಳೆದುಕೊಂಡಿದೆ.

ಸಂಕ್ಷಿಪ್ತ ಸ್ಕೋರ್
ಭಾರತ
ಮೊದಲ ಇನಿಂಗ್ಸ್ನ 166 ಓವರ್ಗಳಲ್ಲಿ 6 ವಿಕೆಟ್ಗೆ 687ರನ್ ಗಳಿಸಿ ಡಿಕ್ಲೇರ್.
ಎರಡನೇ ಇನ್ನಿಂಗ್ಸ್: 29 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 159 ಡಿಕ್ಲೇರ್
ಬಾಂಗ್ಲಾದೇಶ
ಮೊದಲ ಇನಿಂಗ್ಸ್ನ 127.5 ಓವರ್ಗಳಲ್ಲಿ 388ರನ್ನಿಗೆ ಆಲೌಟ್
ಎರಡನೇ ಇನ್ನಿಂಗ್ಸ್ : 100.3 ಓವರ್ ಗಳಲ್ಲಿ 250 ಆಲೌಟ್
(ಒನ್ಇಂಡಿಯಾ ಸುದ್ದಿ)
Story first published: Wednesday, January 3, 2018, 10:04 [IST]
Other articles published on Jan 3, 2018
Read in English: Hyderabad Test: Bangladesh score 131/4
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications