ಸರ್ಕಾರದ ಆ ಒಂದು ನಿರ್ಧಾರದಿಂದ ಬಿಸಿಸಿಐಗೆ 7000 ಕೋಟಿ ನಷ್ಟ!
ಕೇಂದ್ರ ಸರ್ಕಾರ ಇತ್ತೀಚಿಗೆ ಆನ್‌ಲೈನ್ ಗೇಮ್ ನಿಷೇಧಿಸುವ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ. ಸರ್ಕಾರದ ಆ ಒಂದು ನಿರ್ಧಾರ ಹಲವು ಆನ್‌ಲೈನ್ ಗೇಮಿಂಗ್ ಆಪ್‌ಗಳ ತಲೆ ನೋವು ಹೆಚ್ಚಿಸಿದೆ. ಈಗ ಈ ಬಗ್ಗೆ ಪರ ಹಾಗೂ ವಿರೋಧ ಚರ್ಚೆಗಳು ಆರಂಭವಾಗಿವೆ. ಅಲ್ಲದೆ ಇದರಿಂದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಲಿದೆ. ಹಾಗಿದ್ದರೆ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬಹುದು? ಭಾರತದ ಕ್ರಿಕೆಟ್ ಆರ್ಥಿಕತೆಯ ಮೇಲೆ ಎಷ್ಟು ಕೋಟಿ ಹಣದ ಹೊರೆ ಬೀಳಲಿದೆ ಎಂಬ ಬಗ್ಗೆ ವರದಿ ಇಲ್ಲಿದೆ.
ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ಹಾವಾಳಿ ಹೆಚ್ಚಾಗಿತ್ತು. ಇದರಿಂದ ಜನರು ಹಣವನ್ನು ಕಳೆದುಕೊಂಡಿದ್ದರು. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ. ಆರಂಭದಲ್ಲಿ ಈ ಆನ್‌ಲೈನ್ ಗೇಮ್‌ಗಳು ಭಾರತದಲ್ಲಿ ಕ್ರೀಡೆಗಳಿಗೆ ಪ್ರಾಯೋಜಕತ್ವವನ್ನು ಮಾಡಿದ್ದವು. ಇದರಿಂದ ಎಲ್ಲ ಕ್ರೀಡಾ ಸಂಸ್ಥೆಗಳು ಹಣವನ್ನು ಸಂಪಾದಿಸುತ್ತಿದ್ದವು. ಆದರೆ ಸರ್ಕಾರದ ಈ ನಿರ್ಧಾರ ಬಿಸಿಸಿಐ ಸೇರಿದಂತೆ ಹಲವು ಸಂಸ್ಥೆಗಳ ಖಜಾನೆಗೆ ಪೆಟ್ಟು ನೀಡಲಿದೆ. ಆನ್‌ಲೈನ್ ಗೇಮಿಂಗ್ ನಿಷೇಧದಿಂದ ಭಾರತದ ಕ್ರಿಕೆಟ್ ಆರ್ಥಿಕತೆಯು ಸುಮಾರು ₹ 7,000 ಕೋಟಿಗಳಷ್ಟು ಭಾರೀ ಹೊಡೆತ ಅನುಭವಿಸುವ ಸಾಧ್ಯತೆ ಇದೆ.

ಆನ್‌ಲೈನ್ ಗೇಮಿಂಗ್ ನಿಷೇಧದಿಂದ ಕ್ರೀಡೆಗಳಿಗೆ ಜಾಹೀರಾತು ನೀಡುತ್ತಿದ್ದ ದೊಡ್ಡ ಮೊತ್ತದ ಹೂಡಿಕೆಯನ್ನು ಫ್ಯಾಂಟಿಸಿ ಕ್ರೀಡಾ ಕಂಪನಿಗಳು ನಿಲ್ಲಿಸಿವೆ. ಆ ಒಂದು ಸರ್ಕಾರದ ನಿರ್ಧಾರ ಬಿಸಿಸಿಐ ಬೊಕ್ಕಸಕ್ಕೆ ಪೆಟ್ಟು ನೀಡಿದೆ. ಟೀಮ್ ಇಂಡಿಯಾದ ಪ್ರಮುಖ ಪ್ರಾಯೋಜಕರಾಗಿದ್ದ ಡೀಮ್ ಇಲೆವೆನ್ ಜೊತೆಗೆ ಬಿಸಿಸಿಐ 358 ಕೋಟಿ ರೂ ಒಪ್ಪಂದ ಮಾಡಿಕೊಂಡಿತ್ತು. ಕೇಂದ್ರ ಸರ್ಕಾರದ ನಿಲುವಿನಿಂದ ಈ ಒಪ್ಪಂದ ದಿಢೀರ್ ಅಂತ್ಯಗೊಂಡಿದೆ. ಅಲ್ಲದೆ, ಐಪಿಎಲ್‌ನಲ್ಲಿ My11Circle ಜೊತೆ ಮಾಡಿಕೊಂಡಿದ್ದ ₹ 625 ಕೋಟಿ ಒಪ್ಪಂದ ಕೂಡ ರದ್ದಾಗುವ ಹಂತದಲ್ಲಿದೆ.
ಪ್ರಾಯೋಜಕರ ಹುಡುಕಾಟ
ಡ್ರೀಮ್ ಇಲೆವೆನ್ ಟೀಮ್ ಇಂಡಿಯಾದ ಪ್ರಾಯೋಜಕತ್ವದಿಂದ ಹಿಂದೆ ಸರಿದಿದ್ದರಿಂದ ಬಿಸಿಸಿಐ ಹೊರ ಪ್ರಾಯೋಜಕರ ಹುಡುಕಾಟ ನಡೆಸಿದೆ. ಅಲ್ಲದೆ ಏಷ್ಯಾ ಕಪ್‌ನಂತಹ ಬಿಗ್ ಈವೆಂಟ್‌ನಲ್ಲಿ ಟೀಮ್ ಇಂಡಿಯಾ ಪ್ರಾಯೋಜಕರಿಲ್ಲದೆ ಕಣಕ್ಕೆ ಇಳಿಯಬಹುದಾಗಿದೆ. ಬಿಸಿಸಿಐ ಈಗ ಹೊಸ ಪ್ರಾಯೋಜಕರನ್ನು ಸಹ ಹುಡುಕುತ್ತಿದೆ.

ಕೇಂದ್ರ ಸರ್ಕಾರದ ಈ ಒಂದು ನಿಲುವಿನಿಂದ ಐಪಿಎಲ್‌ಗೂ ಹೊಡೆತ ಬೀಳಲಿದೆ. ಫ್ಯಾಂಟಸಿ ಕ್ರೀಡಾ ಕಂಪನಿಗಳೊಂದಿಗೆ ಲಾಭದಾಯಕ ಒಪ್ಪಂದಗಳನ್ನು ಹೊಂದಿದ್ದ ಹಲವು ಐಪಿಎಲ್ ತಂಡಗಳಿಗೂ ಈ ನಿರ್ಧಾರದಿಂದ ಭಾರಿ ಆದಾಯ ನಷ್ಟವಾಗಲಿದೆ. ಫ್ಯಾಂಟಸಿ ಕ್ರೀಡಾ ಕಂಪನಿಗಳು ವಾರ್ಷಿಕವಾಗಿ ಸುಮಾರು ₹ 5,000 ಕೋಟಿ ಹಾಗೂ ಇತರ ಗೇಮಿಂಗ್ ಕಂಪನಿಗಳು 2000 ಕೋಟಿ ಜಾಹೀರಾತು ನೀಡುತ್ತಿದ್ದವು. ಒಟ್ಟು 700 ಕೋಟಿ ಹಣದ ಹರಿವು ಬಿಸಿಸಿಐ ಬೊಕ್ಕಸಕ್ಕೆ ಸೇರುತ್ತಿತ್ತು. ಈ ನಿಷೇಧಿಂದಾಗಿ ಭಾರತದ ಜಾಹೀರಾತು ಉದ್ಯಮಕ್ಕೂ ಪೆಟ್ಟು ನೀಡಲಿದೆ. ಇನ್ನು ನೇರ ಪ್ರಸಾರದ ಹಕ್ಕನ್ನು ಪಡೆದವರಿಗೂ ಇದರ ಬಿಸಿ ತಟ್ಟಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications