ಪಿಸಿಬಿ ಮುಖ್ಯಸ್ಥರ ಕಟ್ಟಪ್ಪಣೆಯೇ ಪಾಕ್‌ಗೆ ಒತ್ತಡವಾಗಲಿದೆಯಾ: ಬಾಬರ್ ಜೊತೆಗಿನ ಮಾತುಕತೆ ಬಹಿರಂಗಪಡಿಸಿದ ರಾಜಾ

ಟಿ20 ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ಸೆಣೆಸಾಟ ಕ್ರಿಕೆಟ್ ಅಭಿಮಾನಿಗಳೆಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಯಾವ ತಂಡಕ್ಕೆ ಗೆಲುವು ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ರಮೀಜ್ ರಾಜಾ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕನ ಬಳಿ ಭಾರತದ ವಿರುದ್ಧದ ಪಂದ್ಯಕ್ಕೂ ಮುನ್ನ ಅಂತಿಮವಾಗಿ ಮಾತನಾಡಿದ್ದು ಏನು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದಿಂದ ಪಾಕಿಸ್ತಾನ ಮಂಡಳಿ ಏನು ನಿರೀಕ್ಷಿಸುತ್ತಿದೆ ಎಂಬುದನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಬಾಬರ್ ಅಜಂ ಹೇಳಿಕೊಂಡಿದ್ದಾರೆ. ಭಾರತದ ವಿರುದ್ಧದ ಪಂದ್ಯಕ್ಕೂ ಮುನ್ನ ಬಾಬರ್ ಅಜಂ ಜೊತೆಗ ಮಾತನಾಡಿದ್ದು ಈ ಸಂದರ್ಭದಲ್ಲಿ ಅಂತಿಮವಾಗಿ ತಾನು ಹೇಳಿದ್ದೇನು ಎಂಬುದನ್ನು ರಮೀಜ್ ರಾಜಾ ಬಹಿರಂಗಪಡಿಸಿದ್ದಾರೆ. ರಮೀಜ್ ರಾಜಾ ಅವರ ಈ ಮಾತುಗಳು ಪಾಕಿಸ್ತಾನ ತಂಡದ ಮೇಲೆ ಇನ್ನಿಲ್ಲದ ಒತ್ತಡವನ್ನು ಹೇರುವ ಸಾಧ್ಯತೆಯೂ ಇದೆ.

ವಿಶ್ವಕಪ್‌ನಲ್ಲಿ 13ನೇ ಬಾರಿ ಭಾರತ ಪಾಕ್ ಮುಖಾಮುಖಿ
ವಿಶ್ವಕಪ್ ಇತಿಹಾಸದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಈವರೆಗೆ ಒಟ್ಟು 13 ಬಾರಿ ಮುಖಾಮುಖಿಯಾಗಿದೆ. ಆದರೆ ಇದರಲ್ಲಿ ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಮಾತ್ರವೇ ಪಾಕಿಸ್ತಾನ ಗೆಲುವು ಸಾಧಿಸಿದ್ದು ಉಳಿದೆಲ್ಲಾ ಪಂದ್ಯಗಳಲ್ಲಿಯೂ ಭಾರತವೇ ಗೆಲುವು ಸಾಧಿಸಿದೆ. ಈ ಮೂಲಕ ಪಾಕಿಸ್ತಾನದ ವಿರುದ್ಧ ವಿಶ್ವಕಪ್‌ನಲ್ಲಿ ಭಾರತದ ಅಜೇಯ ಸಾಧನೆ ಅಂತ್ಯವಾಯಿತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದು ಈ ಬಾರಿಯೂ ಅಂಥಾದ್ದೇ ಸಾಧನೆ ಮಾಡುವ ವಿಶ್ವಾಸದಲ್ಲಿದೆ.

"ವಿಶ್ವಕಪ್ ಗೆಲ್ಲದ ಹೊರತು ಬೇರೆ ಆಯ್ಕೆಯಿಲ್ಲ"
ಪಾಕಿಸ್ತಾನ ಹಾಗೂ ಭಾರತ ನಡುವಿನ ಪಂದ್ಯಕ್ಕೂ ಮುನ್ನ ಬಾಬರ್ ಅಜಂ ಪಾಕಿಸ್ತಾನದ ಖ್ಯಾತ ವಾಹಿನಿ ಜಿಯೋ ಟಿವಿ ಜೊತೆಗೆ ನಡೆಸಿದ ಸಂವಾದದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರೊಂದಿಗೆ ನಡೆಸಿದ ಅಂತಿಮ ಸಂವಾದದಲ್ಲಿ ಏನು ಮಾತನಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದರು. "ನಾನು ನಾಯಕ ಬಾಬರ್ ಅಜಂ ಬಳಿ ಮಾತನಾಡಿದ್ದು ಟಿ20 ವಿಶ್ವಕಪ್ ಗೆಲ್ಲುವ ಮೇಲೆ ಮಾತ್ರವೇ ಗಮನಹರಿಸಲು ತಿಳಿಸಿದ್ದೇನೆ. ಟಿ20 ವಿಶ್ವಕಪ್ ಅನ್ನು ತವರಿಗೆ ತರುವುದನ್ನು ಹೊರತುಪಡಿಸಿ ಬೇರೆ ಆಯ್ಕೆಯನ್ನು ಯೋಚಿಸುವುದೇ ಬೇಡ" ಎಂದು ಹೇಳಿರುವುದಾಗಿ ರಮೀಜ್ ರಾಜಾ ಹೇಳಿದ್ದಾರೆ.

ಪಾಕ್ ತಂಡದ ಮೇಲೆ ಬೀಳಲಿದೆಯಾ ಒತ್ತಡ
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಈ ಮಾತುಗಳು ಪಾಕಿಸ್ತಾನ ತಂಡಕ್ಕೆ ಸ್ಪೂರ್ತಿ ನೀಡುವ ಬದಲಾಗಿ ಒತ್ತಡವನ್ನು ಉಂಟು ಮಾಡುವ ಸಾಧ್ಯತೆಗಳೇ ಹೆಚ್ಚಿದೆ. ಒತ್ತಡದ ಸಂದರ್ಭಗಳಲ್ಲಿ ಎಡವಟ್ಟುಗಳನ್ನು ಮಾಡಿಕೊಂಡು ಹಿನ್ನಡೆ ಅನುಭವಿಸುವ ಪಾಕಿಸ್ತಾನ ತಂಡಕ್ಕೆ ಪಂದ್ಯದ ಮೇಲಿನ ಒತ್ತಡ ಜೊತೆಗೆ ಮಂಡಳಿಯಿಂದಲೂ ಈ ರೀತಿಯ ನಿರೀಕ್ಷೆಗಳನ್ನು ಹೇರಿರುವುದು ಈ ಬಾರಿಯ ವಿಶ್ವಕಪ್‌ನಲ್ಲಿ ಬಾಬರ್ ಅಜಂ ತಂಡದ ಮೇಲಿನ ಒತ್ತಡ ಹೆಚ್ಚಾಗಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಆಸ್ಟ್ರೇಲಿಯಾ ಪಿಚ್ ಪರಿಸ್ಥಿತಿ ಬಗ್ಗೆ ರಾಜಾ ಸಲಹೆ
ಇನ್ನು ಇದೇ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗನೂ ಆಗಿರುವ ರಮೀಜ್ ರಾಜಾ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂಗೆ ಆಸ್ಟ್ರೇಲಿಯಾ ಪಿಚ್‌ನ ಪರುಸ್ಥಿತಿಗಳ ಬಗ್ಗೆ ಅವುಗಳನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಕೆಲ ಸಲಹೆಗಳನ್ನು ನೀಡಿದ್ದಾರೆ. 1992ರಲ್ಲಿ ಆಸ್ಟ್ರೇಲಿಯಾದಲ್ಲಿ ಏಕದಿನ ವಿಶ್ವಕಪ್ ನಡೆದಿದ್ದಾಗ ಪಾಕಿಸ್ತಾನ ತಂಡ ಆ ಟೂರ್ನಿಯನ್ನು ಗೆದ್ದು ಬೀಗಿತ್ತು. ಈ ವಿಸ್ವಕಪ್ ತಂಡದ ಸದಸ್ಯನಾಗಿದ್ದರು ಈಗಿನ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ರಮೀಜ್ ರಾಜಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications