Orange Cap ರೇಸ್‌ನಲ್ಲಿ ಯಾರಿಗೆಲ್ಲಾ ಸ್ಥಾನ? ಆರ್‌ಸಿಬಿ ಆಟಗಾರರಿಗೂ ಸ್ಥಾನ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಿದೆ. ಈ ಲೀಗ್‌ನಲ್ಲಿ ಹಲವು ಸ್ಟಾರ್ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಯುವ ಆಟಗಾರರ ತಮ್ಮ ಕ್ಷಮತೆ ಸಾಬೀತು ಪಡಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಕಪ್ ಗೆಲುವಿನಷ್ಟೇ ಮಹತ್ವ ಆರೆಂಜ್ ಕ್ಯಾಪ್‌ಗೆ ಆಟಗಾರರು ನೀಡುತ್ತಾರೆ. ಈ ಲೀಗ್‌ನಲ್ಲಿ ಸಮಯೋಚಿತ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗುವ ಇರಾದೆ ಆಟಗಾರರಾದ್ದಾಗಿದೆ.
ಐಪಿಎಲ್ ಆರಂಭವಾದ ಮೇಲೆ ಎಲ್ಲರ ಕಣ್ಣುಗಳು ಆರೆಂಜ್ ಕ್ಯಾಪ್ ಯಾರ ಬಳಿ ಇದೆ ಎಂಬುದರ ಮೇಲೆ ನೆಟ್ಟಿರುತ್ತದೆ. ಲೀಗ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಆರೆಂಜ್ ಕ್ಯಾಪ್ ಪಡೆಯುತ್ತಾರೆ. ಈ ಕ್ಯಾಪ್ ಪ್ರತಿ ಪಂದ್ಯದ ಬಳಿಕ ಬೇರೆ ಬೇರೆ ಆಟಗಾರರಿಗೆ ವರ್ಗಾಯಿಸಲಾಗುತ್ತದೆ. ಭಾನುವಾರದ ವರೆಗೆ ನಡೆದ ಐಪಿಎಲ್ ಪಂದ್ಯಗಳಲ್ಲಿ ಆರೆಂಜ್ ಕ್ಯಾಪ್ ಯಾರ ಬಳಿ ಇದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಹೆನ್ರಿಕ್ ಕ್ಲಾಸೆನ್ ಅವರು ಆರೆಂಜ್ ಕ್ಯಾಪ್ ಹೊಂದಿದ್ದಾರೆ. ಇವರು ಆಡಿರುವ 6 ಪಂದ್ಯಗಳಲ್ಲಿ 47ರ ಸರಾಸರಿಯಲ್ಲಿ 283 ರನ್ ಸೇರಿಸಿದ್ದಾರೆ. ಈ ವೇಳೆ 3 ಅರ್ಧಶತಕ ಬಾರಿಸಿದ್ದಾರೆ. ಈ ವೇಳೆ 19 ಬೌಂಡರಿ, 10 ಸಿಕ್ಸರ್ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಗುಜರಾತ್ ಟೈಟಾನ್ಸ್ ಆಡಿದ 4 ಪಂದ್ಯಗಳಲ್ಲಿ 251 ರನ್ ಸಿಡಿಸಿದ್ದಾರೆ. ಈ ವೇಳೆ 3 ಅರ್ಧಶತಕ ಚಚ್ಚಿದ್ದಾರೆ. ಈ ವೇಳೆ ಇವರು 24 ಬೌಂಡರಿ, 10 ಸಿಕ್ಸರ್ ಸಿಡಿಸಿದ್ದಾರೆ.
ರೇಸ್‌ನಲ್ಲಿ ಆರ್‌ಸಿಬಿ ತಂಡದ ಇಬ್ಬರು ಆಟಗಾರರು
ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಆರ್‌ಸಿಬಿ ತಂಡದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಇದ್ದಾರೆ. ಇವರು ಆಡಿದ 6 ಪಂದ್ಯಗಳಲ್ಲಿ 247 ರನ್ ಕಲೆ ಹಾಕಿದ್ದಾರೆ. ಈ ವೇಳೆ 2 ಅರ್ಧಶತ ಸಿಡಿಸಿದ್ದಾರೆ.
ಅಧಿಕ ರನ್ ಬಾರಿಸಿದ ಬ್ಯಾಟರ್ಸ್‌ಗಳ ಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಆಡಿದ 6 ಪಂದ್ಯಗಳಲ್ಲಿ 236ರ ಸ್ಟ್ರೈಕ್ ರೇಟ್‌ನಲ್ಲಿ 246 ರನ್ ಸಿಡಿಸಿದ್ದಾರೆ. ಈ ವೇಳೆ 2 ಅರ್ಧಶತಕ ಬಾರಿಸಿದ್ದಾರೆ. ಈ ವೇಳೆ ವೈಭವ್ 24 ಬೌಂಡರಿ, 20 ಸಿಕ್ಸರ್ ಸಿಡಿಸಿದ್ದಾರೆ. ಇನ್ನು ಐದನೇ ಸ್ಥಾನದಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ರಜತ್ ಪಾಟಿದಾರ್ ಇದ್ದು ಇವರು ಆಡಿದ 6 ಪಂದ್ಯಗಳಲ್ಲಿ 230 ರನ್ ಸಿಡಿಸಿದ್ದಾರೆ.
ಗರಿಷ್ಠ ರನ್ ಕಲೆ ಹಾಕಿದ 5 ಬ್ಯಾಟರ್ಸ್
ಹೆನ್ರಿಕ್ ಕ್ಲಾಸೆನ್, ಎಸ್‌ಆರ್‌ಎಚ್, 283 ರನ್
ಶುಭಮನ್ ಗಿಲ್, ಜಿಟಿ, 251 ರನ್
ವಿರಾಟ್ ಕೊಹ್ಲಿ, ಆರ್‌ಸಿಬಿ, 247 ರನ್
ವೈಭವ್ ಸೂರ್ಯವಂಶಿ, ಆರ್‌ಆರ್, 246 ರನ್
ರಜತ್ ಪಾಟಿದಾರ್, ಆರ್‌ಸಿಬಿ, 230 ರನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications